Ajith gowda raid at Dodderi i|| ಅಜಿತ್ ಗೌಡರು ದೊಡ್ಡೇರಿಗೆ ನುಗ್ಗಿದ್ದೇಕೆ?

 

ಭದ್ರಾವತಿ ದೋನಂಬರ್ ದಂಧೆಗಳ ಬಗ್ಗೆ ವಿಡಿಯೋವೊಂದು ವೈರಲ್ ಆಗಿದೆ. ದೊಡ್ಡೇರಿಯ ಉದ್ದಮ ಆಂಜನೇಯ ರಸ್ತೆಯಲ್ಲಿ ನಡೆಯುತ್ತಿದ್ದ ಇಸ್ಪೀಟ್ ದಂಧೆ ಮೇಲೆ ಅಜಿತ್ ಗೌಡರು ದಾಳಿ ನಡೆಸಿದ್ದಾರೆ. 


ಈ ದಾಳಿಯ ವೇಳೆ ತಲ್ವಾರ್ ಹಿಡಿದು ರೌಡಿಶೀಟರ್ ಓರ್ವ ತಲ್ವಾರ್ ಹಿಡಿದು ಓಡಾಡಿದ್ದಾನೆ. ಅಜಿತ್ ಅವರ ಮೇಲೆ ತಲ್ವಾರ್ ಬೀಸಲು ಬಂದಿರುವುದಾಗಿ ಹೇಳಲಾಗುತ್ತಿದೆ.‌ ಈ ಪ್ರಕರಣ ದೂರು ದಾಖಲಾಗುತ್ತಿಲ್ಲವೆಂಬ ಆರೋಪವೂ ಕೇಳಿ ಬರುತ್ತಿದೆ.


ರೌಡಿಶೀಟರ್ ಗಳ ಗುಂಡಿಕ್ಕುವ ಪೊಲೀಸರು ಈ ದಂಧೆಕೋರರ ಕಾಲಿಗೆ ಗುಂಡುಹೊಡೆಯೋಕೆ ಆಗೊಲ್ವ ಎಂಬ ಕೂಗು ಸಹ ಕೇಳಿ ಬರುತ್ತಿದೆ. ಭದ್ರಾವತಿಯಲ್ಲಿ ಪೊಲೀಸರ ವಿರುದ್ಧ ಅಸಮಾಧಾನ ಸಹ ಕೇಳಿ ಬರುತ್ತಿದೆ.


ಅಜಿತ್ ಗೌಡರಿಂದ ಸತತ ಮೂರು ನಾಲ್ಕು ಕಡೆ ದಾಳಿ ನಡೆದಿದೆ. ಈ ದಾಳಿ ನಡೆದರೂ ಆರೋಪಿಗಳ ಕಾಲಿಗೆ ಗುಂಡು ಹೊಡೆಯೋದು ಬಿಡಿ, ಒಂದು ಎಫ್ಐಆರ್ ಕೂಡ ದಾಖಲಾಗೊಲ್ಲ. ಅಜಿತ್ ಅವರ ಮೇಲೆ ಇಂದಲ್ಲ ನಾಳೆದಾಳಿ ನಡೆಯುವ‌ ಅಪಾಯದ ಮಾತು ಕೇಳಿ ಬರುತ್ತಿದೆ. 


ರೌಡಿಶೀಟರ್ ಗಳು ನಡೆಸುವ ನಂಜಾಪುರ, ರಾಜಕಾರಣಿಗಳು ನಡೆಸುತ್ತಿರ ಅಡ್ಡಗಳ ಮೇಲೆ ಅಜಿತ್ ದಾಳಿ ನಡೆಸಿದ್ದಾರೆ. ಈ ದಾಳಿ ದ್ವೇಷಕ್ಕೆ ತಿರುಗಿದೆ. ಪೊಲೀಸರು ಎರಡೂ ಕಡೆ ಕ್ರಮ ಕೈಗೊಳ್ಳದಿದ್ದರೆ ಹೆಣಗಳು ಬೀಳು ಸಾಧ್ಯತೆ ಇದೆ. ಅನಾಹುತ ನಡೆಸಲು ಮುನ್ನ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ. 


ದಂಧೆ ನಡೆಸುವ ರಾಜಕಾರಣಿಗಳು, ರೌಡಿಶೀಟರ್ ಗಳಿಗೆ ಸ್ಥಳೀಯ ಪ್ರಭಾವಿ ನಾಯಕರ ಶ್ರೀರಕ್ಷೆಯಿದೆ ಎಂಬುದು ಆರೋಪವಾಗಿದ್ದರೂ ಪೊಲೀಸರ ಕೈ ಚೆಲ್ಲಿ ಕುಳಿತುಕೊಳ್ಳುವ ಮುನ್ನ ಕ್ರಮಕೈಗೊಳ್ಳಲಿ. ಇವರೆಲ್ಲ ಇರುವುದರಿಂದ ಕ್ರಮ ಆಗಿತ್ತಿಲ್ಲವೆಂಬುದು ರಾಜಕೀಯದ ಆರೋಪವಾಗಿದೆ‌ ರಾಜಕೀಯ ಆರೋಪದಿಂದ ಇಲಾಖೆ ಮುಕ್ತವಾಗಲು ಏನು ಕ್ರಮ ಬೇಕೋ ಕ್ರಮ ಕೈಗೊಳ್ಳಲಿ ಎಂಬುದು ಸುದ್ದಿಲೈವ್ ಆಶಯವಾಗಿದೆ. 

Post a Comment

Previous Post Next Post