ಶಿಕಾರಿಪುರ ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಆಡು ಮೇಸಲು ಹೋದ ಸರೋಜಮ್ಮ ಮಹಿಳೆ ಮೇಲೆ ಹಲ್ಲೆ ನಡೆದಿದೆ. ತೋಟದಲ್ಲಿ ಆಡು ಮೇಸಲು ಬಂದ ಮಹಿಳೆ ಮೇಲೆ ಮಾಲೀಕ ನಿಂದ ಹಲ್ಲೆ ನಡೆದಿದೆ.
ಫೆ 23 ರಂದು ಭಾನುವಾರ ಈ ಘಟನೆ ನಡೆದಿದೆ.ಘಟನೆ ನಡೆದು ಐದು ದಿನಗಳ ಮೇಲೆ ಶಿಕಾರಿಪುರ ಠಾಣೆಯಲ್ಲಿ ಮಹಿಳೆಯ ದೂರು ನೀಡಿದ್ದಾರೆ. ಹಲ್ಲೆ ಬಳಿಕ ಮಹಿಳೆ ಶಿಕಾರಿಪುರ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಹಲ್ಲೆ ಮಾಡಿರುವ ಮಹಿಳೆಯ ವಿಡಿಯೋ ಹೇಳಿಕೆ ವೈರಲ್ ಆಗಿದೆ. ದೂರು ನೀಡಿದ ಬಳಿಕ ತೋಟದ ಮಾಲೀಕ ಎಸ್ಕೇಪ್ ಆಗಿರುವುದಾಗಿ ತಿಳಿದುಬಂದಿದೆ.
ತೋಟದ ಮಾಲೀಕ ಅರುಣ್ ಕುಮಾರ್ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ. ಈಸೂರು ಗ್ರಾಮದ ರಾಮವಳ್ಳಿ ಗ್ರಾಮಕ್ಕೆ ಕುರಿ ಮೇಯಸಲು ಹೋಗಿದ್ದ ಮಹಿಳೆಯ ಮೇಲೆ ಅರುಣ್ ಏಕಾಏಕಿ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿರುವ ಆರೋಪವನ್ನ ಮಹಿಳೆ ಮಾಡಿದ್ದಾರೆ. ಪ್ರಕರಣ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
Post a Comment