A Yogi returning from prayag raj || ಶಿವಮೊಗ್ಗದ ಯೋಗಪಟು ಶ್ರೀನಿವಾಸ್ ಇನ್ನಿಲ್ಲ

 

ಶಿವಮೊಗ್ಗದಿಂದ ಕಣಾದ ಯೋಗ ತಂಡದೊಂದಿಗೆ ಪ್ರಯಾಗ್‌ರಾಜ್‌ಗೆ ಫೆ.15ರಂದು ತೆರಳಿ ವಾಪಸ್ ಬರುವಾಗ ಇಂದು ಬೆಳಗ್ಗೆ ವಿಜಯಪುರ ಜಿಲ್ಲೆಯ ಝಳಕಿ ಚೆಕ್‌ಪೋಸ್ಟ್ ಬಳಿ ಯೋಗಪಟು ಶ್ರೀನಿವಾಸ್(71) ಹೃದಯಾಘಾತದಿಂದ ನಿಧನರಾಗಿದ್ದಾರೆ. 


ಶಿವಮೊಗ್ಗದ ಬಸವೇಶ್ವರ ನಗರ ನಿವಾಸಿಯಾದ ಇವರು ಕುಂಭಮೇಳಕ್ಕೆ ತಮ್ಮ ಸಂಗಡಿಗರೊಂದಿಗೆ ತೆರಳಿದ್ದರು. ತಂಡದಲ್ಲಿ 105 ಜನರಿದ್ದರು. ಕಾಶಿ, ಅಯೋಧ್ಯೆ, ಮೊದಲಾದ ಸ್ಥಳಿಗೆ ಭೇಟಿ ನೀಡಿ ವಾಪಸ್ ಬರುವಾಗ ಅವರಿಗೆ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಇಚಿಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.


ಅವರು ಪತ್ನಿ ಹಾಗೂ ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.

Post a Comment

Previous Post Next Post