ಅಕ್ರಮ ಬಡ್ಡಿ ವ್ಯವಹಾರದ ವಿರುದ್ಧ ಶಿವಮೊಗ್ಗದಲ್ಲಿ ಒಟ್ಟು 9 ಕಡೆ ದಾಳಿ ನಡೆದಿದೆ. 9 ಪ್ರಕರಣಗಳು ನಗರದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.
ಇಂದು ಬೆಳಗ್ಗೆ ಅಕ್ರಮ ಬಡ್ಡಿ ವ್ಯವಹಾರ ನಡೆಸುತ್ತಿದ್ದವರ ವಿರುದ್ಧ ಕ್ರಮ ಕೈಗೊಳ್ಳುವ ಹಿನ್ನೆಲೆಯಲ್ಲಿ ಎಸ್ಪಿ ಮಿಥುನ್ ಕುಮಾರ ಜಿ ಕೆ, ಐಪಿಎಸ್, ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ, ಕಾರಿಯಪ್ಪ ಎ ಜಿ ರವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಬಾಬು ಆಂಜನಪ್ಪ, ಮತ್ತು ಸಂಜೀವ್ ಕುಮಾರ್ ಟಿ, ಮತ್ತು ಸೆನ್ ಠಾಣೆಯ ಕೃಷ್ಣ ಮೂರ್ತಿ ರವರ ಮೇಲ್ವಿಚಾರಣೆಯಲ್ಲಿ,
ದೊಡ್ಡಪೇಟೆ ಪೊಲೀಸ್ ಠಾಣೆಯ ಪಿಐ ರವಿ ಪಾಟೀಲ್ ನೇತೃತ್ವದಲ್ಲಿ ಅಣ್ಣಾ ನಗರ , ಮಾರ್ನಾಮಿ ಬೈಲು , ಕಾಮಾಕ್ಷಿ ಬೀದಿ ಯಲ್ಲಿ, ಕೋಟೆ ಠಾಣೆ ಪಿಐ ಹರೀಶ್ ಕೆ ಪಾಟೀಲ್ ನೇತೃತ್ವದಲ್ಲಿ ವಿದ್ಯಾನಗರದಲ್ಲಿ, ವಿನೋಬ ನಗರ ಪೊಲೀಸ್ ಠಾಣೆಯ ಪಿಐ ಚಂದ್ರಕಲಾರವರು ಕಾಶಿಪುರದಲ್ಲಿ, ಜಯನಗರ ಪಿಐ ಸಿದ್ದೇಗೌಡ, ಕೋಟೆ ಗಂಗೂರು ಮತ್ತು ಬಸವನಗುಡಿಯಲ್ಲಿ ಹಾಗೂ ತುಂಗ ನಗರ ಪೊಲೀಸ್ ಠಾಣೆಯ ಪಿಐ ಗುರುರಾಜ್ ಕೆ ಟಿ ಗೋಪಿಶೆಟ್ಟಿಕೊಪ್ಪ, ಚಾಲುಕ್ಯನಗರದಲ್ಲಿ ಹಾಗೂ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ಸತ್ಯನಾರಾಯಣ ಅವರಿಂದ, ಇಂದಿರಾ ಬಡಾವಣೆ ಮತ್ತು ಗುರುಪುರ ಸೇರಿದಂತೆ ಒಟ್ಟು 09 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ.
ಒಟ್ಟು 39 ಲಕ್ಷ ನಗದು, 24 ಮೊಬೈಲ್, 02 ಲ್ಯಾಪ್ ಟಾಪ್, 72 ಚೆಕ್ ಗಳು, 19 ಆರ್ಸಿ ಬುಕ್ ಗಳು, 07 ವೆಹಿಕಲ್ ಬಾಂಡ್, 02 ಫಾರ್ಮ್ ನಂ 29, 30 ಮತ್ತು ಅಗ್ರಿಮೆಂಟ್ ಕಾಪಿ , ಪಾಸ್ ಬುಕ್, ಸೇಲ್ ರೀಡ್, ಪಹಣಿ, 29 ಬೈಕ್ ಗಳು ಮತ್ತು 2 ಕಾರುಗಳನ್ನು ವಶಕ್ಕೆ ಪಡಿಸಿಕೊಂಡಿದ್ದು, ಒಟ್ಟು 09 ಆರೋಪಿತರ ವಿರುದ್ಧ ಒಟ್ಟು 09 ಪ್ರಕರಣಗಳನ್ನು ದಾಖಲಾಗಿದೆ.
Post a Comment