ನಗರದ ಮಹಾವೀರ ವೃತ್ತದದ(circle) ಬಳಿ ಸಿಗ್ನಲ್ ನಲ್ಲಿ ನಿಂತಿದ್ದ ಸೆಲೆರಿಯೋ ಕಾರಿಗೆ(car) ಹಿಂಬದಿಯಿಂದ ಬಂದ 407 ಐಶರ್ ವಾಹನ ಗುದ್ದಿದ್ದು, ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯವಿಲ್ಲವಾದರೂ ಕಾರಿನ ಹಿಂಬದಿ ಕುಳಿತಿದ್ದ ವ್ಯಕ್ತಿಗೆ ಒಳಪೆಟ್ಟು(injured) ಬಿದ್ದಿದೆ.
ಮಹಾವೀರ ವೃತ್ತದಲ್ಲಿ ಸವಳಂಗ ರಸ್ತೆಯ ಮೂಲಕ ಬಂದ ಸೆಲೆರಿಯೋ ವಾಹನ ಗಾಂಧಿ ಬಜಾರ್ ಗೆ ಹೋಗಲು ಸಿಗ್ನಲ್ ನಲ್ಲಿ ನಿಲ್ಲಿಸಲಾಗಿತ್ತು.
ಹುಬ್ಬಳ್ಳಿಯಿಂದ ಮಾಚೇನಹಳ್ಳಿಗೆ ಹೊರಟ 407 ಸಿಗ್ನಲ್ ಬಳಿ ಬ್ರೇಕ್ ಫೇಲ್ ಆಗಿದೆ. ಬ್ರೇಕ್ ಫೇಲ್ ಪರಿಣಾಮ ಕಾರಿನ ಹಿಂಭಾಗಕ್ಕೆ ಗುದ್ದಿದೆ. ಆಯಿಲ್ ಬ್ರೇಕ್ ಹಿಡಿಯದ ಇದ್ದ ಪರಿಣಾಮ ಕಾರಿಗೆ ಡಿಕ್ಕಿ ಹೊಡೆದಿದೆ.
ಕಾರಿನ ಹಿಂಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಾರಿನ ಹಿಂಭಾಗದಲ್ಲಿ ಕುಳಿತವರಿಗೆ ಒಳೆಟ್ಟು ಬಿದ್ದಿದ್ದು ಜೀವ ಹಾನಿ ಆಗಿಲ್ಲ ಎಂದು ತಿಳಿದು ಬಂದಿದೆ.
Post a Comment