ಸಕ್ರೇಬೈಲಿನಲ್ಲಿ ಹರಿಯುವ ತುಂಗ ನದಿಯಲ್ಲಿ ಮೂರು ಅಪರಿಚಿತ ಶವಗಳು ತೇಲಿ ಬಂದಿದೆ. ಒಂದು ಹೆಣ್ಣಿನ ಮೃತ ದೇಹ ಮತ್ತು ಎರಡು ಗಂಡಸಿನ ಮೃತ ದೇಹ ಪತ್ತೆಯಾಗಿದೆ.
ಈ ಮೂವರು ಅತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗುತ್ತಿದ್ದು, ಪೊಲೀಸರ ತನಿಖೆ ನಡೆಯಬೇಕಿದೆ. ಇವರು ಯಾರು? ಯಾವ ಊರು? ಆತ್ಮಹತ್ಯದಗೆ ಕಾರಣವೇನು ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ. ಮೂವರ ವಯಸ್ಸು ಸಹ 40-45 ಇರಬಹುದು ಎಂದು ಶಂಕಿಸಲಾಗಿದೆ.
ಮೂವರು ನದಿಗೆ ಹಾರಿ ಸಾವುಕಂಡು 48 ಗಂಟೆ ಕಳೆದಿದೆ ಎನ್ನಲಾಗಿದೆ. ತುಂಗನಗರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
Post a Comment