ಭಾವ ತೀರ ಯಾನ ಸಿನಿಮಾ ಫೆ.21 ಕ್ಕೆ ರಿಲೀಸ್

 

ಆರೋಹ ಫಿಲಂಸ್ ನ ಬ್ಯಾನರ್ ಅಡಿ, ಫೆ.21 ಕ್ಕೆ ಭಾವ ತೀರ ಯಾನ ಸಿನಿಮಾ ತೆರೆ ಕಾಣಲಿದೆ. ಬ್ಲಿಂಕ್ ನಿರ್ಮಾಪಕ ರವಿಚಂದ್ರ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. 


ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಕೀಳಂಬಿ ಮೀಡಿಯಾ ಲ್ಯಾಬ್ ನ ರಾಜೇಶ್ ಕೀಳಂಬಿ ಮಾತನಾಡಿ, ರೋಮ್ಯಾಂಟಿಕ್ ಕಥಾ ಹಂದರ ಹೊಂದಿರುವ ಸಿನಿಮಾ ಇದಾಗಿದೆ. ಪ್ರೀತಿಯ ಸುತ್ತ ಈ ಚಲನಚಿತ್ರ ಮೂಡಿಬಂದಿದೆ ಎಂದರು. 


ತಾರಾಗಣದಲ್ಲಿ ರಮೇಶ್ ಭಟ್, ತೇಜಸ್ ಕಿರಣ್, ಆರೋಹಿ ನೈನಾ, ಅನುಷಾ ಕೃಷ್ಣ, ಚಂದನ ಅನಂತ ಕೃಷ್ಣ, ವಿದ್ಯಾಮೂರ್ತಿ, ಹಾಗೂ ಹಲವರು ತಾರಾ ಬಳಗದಲ್ಲಿದ್ದಾರೆ. ಸಂಗೀತವನ್ನ ಮಯೂರ್ ಅಂಬೆಕಲ್ಲು ನಿರ್ದೇಶಿಸಿದರೆ, ಶಿವಶಂಕರ್ ನೂರಂಬಡ, ಜನನಿ ಪಿಕ್ಚರ್ಸ್, ನಿರ್ದೇಶನವನ್ನ ಮಯೂರ್ ಅಂಬೆಕಲ್ಲು ಮತ್ತು ತೇಜಸ್ ಕಿರಣ್ ಮಾಡಿದ್ದಾರೆ. ಬ್ಲಿಂಕ್ ಚಿತ್ರದ ವಿತರಕ ರವಿಚಂದ್ರ ವಿತರಕರಾಗಿದ್ದಾರೆ


ಮಯೂರ್ ಅಂಬೆಕಲ್ಲು ಮಾತನಾಡಿ, ಫ್ಯಾಮಿಲಿ ಸಮೇತವಾಗಿ ಹೋಗುವ ಸಿನಿಮಾ ಕಡಿಮೆಯಾಗಿದೆ. ಆ ಹಿನ್ಬಲೆಯಲ್ಲಿ ಸದಾಭಿರುಚಿಯ ಸಿನಿಮಾ ಇದಾಗಿದೆ. ಪ್ರತಿಯೊಬ್ಬ ಪ್ರೀತಿಯ ಅನುಭವನ್ನ ಈ ಸಿನಿಮಾ ನೋಡುವಾಗ ಅನುಭವಿಸಬಹುದಾಗಿದೆ. ಸಿನಿಮಾ ತಯಾರಿಯಾಗಿ 8 ತಿಂಗಳೆ ಕಳೆದಿವೆ. ಫೆ.21 ಕ್ಕೆ ಈ ಸಿನಿಮಾದ ಜೊತೆಗೆ 12 ಸಿನಿನಾಗಳು ತೆರಕಾಣುತ್ತಿದೆ. ಪ್ರೇಕ್ಷಕರು ನಮ್ಮ ಸಿನಿಮಾವನ್ನ ಜಯಸುವಂತೆ ಕೋರಿದರು. 


ಫೆ. 21 ರಂದು 25 ಮಲ್ಟಿಪ್ಲೆಕ್ಸ್ ನಲ್ಲಿ ಬಿಡುಗಡೆಯಾಗಲಿದೆ.ಮಂಗಳೂರು, ಸುಳ್ಯ ಚಿಕ್ಕಬುಳ್ಳಾಪುರ, 25 ದಿನಗಳಲ್ಲಿ ಶೂಟಿಂಗ್ ಮುಗಿದಿದೆ

Post a Comment

Previous Post Next Post