ಫೆ.14 ರಂದು ಶಾಸಕ ಸಂಗಮೇಶ್ವರ್ ರಾಜಿನಾಮೆ ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ

 

ಬಸವೇಶ್ ರನ್ನ ಬಂಧಿಸಿ, ಶಾಸಕ ಸಂಗಮೇಶ ರಾಜೀನಾಮೆ(resign) ಆಗ್ರಹಿಸಿ ಫೆ.14 ರಂದು ಜೆಡಿಎಸ್(JDS) ವತಿಯಿಂದ ಮಾಧವ ಆಚಾರ್ಯ ಸರ್ಕಲ್ ನಿಂದ ತಾಲೂಕು ಕಚೇರಿಯವರೆ ಪ್ರತಿಭಟನೆ ನಡೆಸಲಾಗುವುದಾಗಿ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ ತಿಳಿಸಿದರು. 


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಮರಳು ಅವ್ಯವಹಾರದಲ್ಲಿ ಮಹಿಳಾ ಅಧಿಕಾರಿಗಳಿಗೆ ನಿಂದಿಸಿರುವ ಮೂವರನ್ನ ಬಂಧಿಸಲಾಗಿದೆ. ಇವರನ್ನ ಬಿಟ್ಟು ನಿಜವಾದ ಆರೋಪಿ ಬಸವೇಶ್ ರನ್ನ ಬಂಧಿಸುವಂತೆ ಆಗ್ರಹಿಸಲಾಗುವುದು ಎಂದರು. 


ಜೆಡಿಎಸ್ ನ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಭದ್ರಾವತಿಯಲ್ಲಿ ಯಾರು ಕಾರಣಕರ್ತರೋ ಅವರನ್ನ ಟಚ್ ಮಾಡುವ ಕೆಲಸವೂ ಪೊಲೀಸರು ಮಾಡಿಲ್ಲ. ಯಾರು ಬೈದಿದ್ದಾರೋ ಅವರನ್ನ ಬಿಟ್ಟು ಬೇರೆಯವರ ಬಂಧಿಸಿದ್ದಾರೆ. ಜೆಡಿಎಸ್ ಈ ಘಟನೆಯನ್ನ ಉಗ್ರವಾಗಿ ಖಂಡಿಸುತ್ತದೆ ಎಂದರು. 


ಶಾಸಕರ ಮಕ್ಕಳ ವರ್ತನೆ ಖಂಡನೀಯ. ನಾಡಿದ್ದು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಪ್ರತಿಭಟನೆ ಯಲ್ಲಿ ನಿಖಿಲ್ ಕುಮಾರಸ್ವಾಮಿ ಭಾಗವಹಿಸಲಿದ್ದಾರೆ. ಪ್ರಕರಣಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಶಾಸಕರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. 


ಇಡೀ ನಾಗರಿಕರ ಸಮಾಜ ತಲೆ ತಗ್ಗಿಸುವ ಕೆಲಸ ಆಗಿದೆ. ಒಳ್ಳೆಯ ಅಧಿಕಾರಿ ಗಳ ತಂಡಕ್ಕೆ ಕೆಲಸ ಮಾಡಲು ಶಾಸಕರು ಬಿಡ್ತಿಲ್ಲ 

Post a Comment

Previous Post Next Post