ನಾಗಯಕ್ಷೆ ದೇವಿಯ 11 ನೇ ವಾರ್ಷಿಕೋತ್ಸವ ಹೇಗಿರುತ್ತೆ?


 ಶಿವಮೊಗ್ಗದಿಂದ 25 ಕಿಮಿ ದೂರದ ತೀರ್ಥಹಳ್ಳಿ ಗ್ರಾಮದ ಹೆಗಲತ್ತಿ ಗ್ರಾಮದಲ್ಲಿ ಪ್ರತಿ ಹುಣ್ಣಿಮೆಗೆ ದೇವರ ದರ್ಶನ ನಡೆಯಲಿದೆ. ನುಡಿದೇವತೆ ಎಂದೇ ಹೆಸರಾಗಿದೆ. 


ನಾಗಯಕ್ಷೆಸೇವಾಸಮಿತಿಯ ವತಿಯಿಂದ ನಾಗಯಕ್ಷೆ ದೇವಿ ನವಗ್ರಹ ಮತ್ತು ನಾಗದೇವರ 11 ನೇ ವಾರ್ಷಿಕೋತ್ಸವ ಫೆ.5 ರಿಂದ 9 ರವರೆಗೆ ನಡೆಯುತ್ತಿದ್ದು ಶತಚಂಡಿಕಾಹವನ ನಡೆಯಲಿದೆ. 


ಫೆ.5 ರಂದು ಇಂದು ಕಂಬದ ನರಸಿಂಹ ಸ್ವಾಮಿ ಸ ಸನ್ನಿಧಿಯಲ್ಲಿ ಗಣಹೋಮ ಸತ್ಯನಾರಾಯಣ ಪೂಜೆ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ. 


ಫೆ.6 ರಂದು ಮಹಾಗಣಪತಿ ಪೂಜೆ, ಪುಣ್ಯಹ ವಾಚನ, ನಾಗ ಮೂಲಮಂತ್ರ ಹೋಮ ಮತ್ತು ನವಗ್ರಹ ಹೋಮ, ಪೂರ್ಣಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಮತ್ತು ಅನ್ನಸಂತರ್ಪಣೆ ನಡೆಯಲಿದೆ. 


ಫೆ.07ವರಂದು ಶ್ರೀ ಶತಚಂಡಿಕಾವಾಹನ, ನಾಗಯಕ್ಷಿ ಮೂಲಮಂತ್ರ ಹವನ, ಬ್ರಹ್ಮಕಲಶ ಅಭಿಷೇಕ, ಮಹಾಮಂಗಳಾರತಿ ನಡೆಯಲಿದೆ. ಸಂಜೆ ದುರ್ಗಾದೀಪ ನಮಸ್ಕಾರ, ಅಶ್ಲೇಷ ಬಲಿ, ಮಹಾಮಂಗಳಾರತಿ ನಡೆಯಲಿದೆ. 


ಫೆ.8 ರಂದು 11 ದೇವರ ಪಲ್ಲಕ್ಕಿ ಉತ್ಸವ ನಡೆಯಲಿದೆ. ಸಂಜೆ 8 ಗಂಟೆಗೆ ಮಾಳೂರು ಸೀಮೆ ಗುತ್ಯಮ್ಮ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ನಾಗವಂದನ ಯಕ್ಷಗಾನ ನಡೆಯಲಿದೆ. ಫೆ.9 ರಂದು ಪಲ್ಲಕ್ಕಿಯಲ್ಲಿ ಭಾಗಿಯಾದ 11 ದೇವರುಗಳು ಸ್ವಕ್ಷೇತ್ರಕ್ಕೆ ಮರಳಿಲಿದೆ. ಅಂದೂ ಸಹ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ ಎಂದರು.‌


ಈ ಕಾರ್ಯಕ್ರಮದಲ್ಲಿ ಬಂಗಾರಮಕ್ಕಿ ಧರ್ಮದರ್ಶಿಗಳಾದ ಮಾರುತಿ ಗುರೂಜಿ, ಮೂಲಪಾತ್ರಿಗಳಾದ ಶಾರದಮ್ಮ ಹಾಗೂ ಪಾತ್ರಿ ಕಲ್ಪನಮ್ಮ ಸಂತೋಷ್ ಭಾಗಿಯಾಗಲಿದ್ದಾರೆ.

Post a Comment

Previous Post Next Post