ಭದ್ರಾವತಿ ನಗರ ಭೆಯ 10 ನೇ ಅವಧಿಗೆ ಗೀತಾ ರಾಜ್ ಕುಮಾರ್ ಅಧ್ಯಕ್ಷರಾಗಿ(presi ಅವಿರೋಧ ಆಯ್ಕೆ ಮಾಡಲಾಗಿದೆ.
ನಗರಸಭೆಯಲ್ಲಿ 35+3 ಜನ ಸದಸ್ಯರಿದ್ದು, 19 ಕಾಂಗ್ರೆಸ್ ಸದಸ್ಯರು, 3 ಬಿಜೆಪಿ ಸದಸ್ಯರು ಹಾಗೂ 5 ಜನ ಜೆಡಿಎಸ್ ಮತ್ತು ಎಂಎಲ್ ಸಿ ಸದಸ್ಯರು ಸೇರಿ 27 ಜನ ಸದಸ್ಯರ ಸಮ್ಮುಖದಲ್ಲಿ ಆಯ್ಕೆ ನಡೆದಿದೆ. ಲೋಯರ್ ಹುತ್ತದ ವಾರ್ಡ್ ನಂಬರ್ 2 ರ ಸದಸ್ಯರಾಗಿ ಗೀತ ರಾಜ್ ಕುಮಾರ್ ಅರ್ಜಿ ಸಲ್ಲಿಸಿದ್ದರು.
ನಾಮಪತ್ರ ಸಲ್ಲಿಸಲು 1 ಗಂಟೆಯಿಂದ 1-15ರ ವರೆಗೆ ಸಮಯ ನಿಗದಿಯಾಗಿದ್ದು, 1-15 ರಿಂದ 1-30 ರ ವರೆಗೆ ನಾಮ ಪತ್ರ ಹಿಂಪಡೆಯಲು ಅವಕಾಶಗಳಿದ್ದವು. ನಾಮ ಪತ್ರ ಹಿಂಪಡೆಯುವ ಅವಧಿ ಮುಗಿದಿದ್ದು ನಾಮ ಪತ್ರ ಹಿಂಪಡೆಯದ ಕಾರಣ ಜೆ.ಸಿ.ಗೀತ ರಾಜ್ ಕುಮಾರ್ ಅವಿರೋಧ ಆಯ್ಕೆಯಾಗಿದ್ದಾರೆ.
ಚುನಾವಣೆ ಅಧಿಕಾರಿಗಿ ಎಸಿ ಸತ್ಯನಾರಾಯಣ ಕರ್ತವ್ಯ ನಿರ್ವಹಿಸಿದ್ದರು.
ವೀಡಿಯೋ ಕಾಲ್ ಮಾಡಿದ ಸಂಗಣ್ಣ,
ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಅಭ್ಯರ್ಥಿಗಳಿಗೆ ಶುಭಾಶಯ ತಿಳಿಸಲೆಂದು ಭದ್ರಾವತಿ ಶಾಸಕ ಸಂಗಮೇಶ್ ಅವರು ಚುನಾವಣೆ ಪ್ರಕ್ರಿಯೆ ವೇಳೆ ಸದಸ್ಯ ಅಣ್ಣಪ್ಪನವರ ಮೂಲಕ ವಿಡಿಯೋ ಕಾಲ್ ಮಾಡಿದ್ದು ವಿಶೇಷವಾಗಿತ್ತು
Post a Comment