ವರ್ತಕರ ದಿಡೀರ್ ಪ್ರತಿಭಟನೆ, ಕಪ್ಪುಪಟ್ಟಿ ಧರಿಸಿ ಎಸ್ಪಿ ಕಚೇರಿಯವರೆಗೆ ಮೆರವಣಿಗೆ

 

ನಿನ್ನೆ ಕಸ್ತೂರ ಬಾ ರಸ್ತೆಯಲ್ಲಿರುವ ಮುರುಡೇಶ್ವರ ದೇವಸ್ಥಾನದ ಬಳಿ ಹಿರಾಲಾಲ್ ಸೆನ್ ಎಂಬುವರ ಮೇಲೆ ಬೈಕ್ ನಲ್ಲಿ ಬಂದ ಇಬ್ವರು ಕಿಡಿಗೇಡಿಗಳು ಚಾಕುವಿನಿಂದ ಇರಿದ ಪ್ರಕರಣವನ್ನ ಖಂಡಿಸಿ ಇಂದು ವರ್ತಕರ ಸಂಘ ಎಸ್ಪಿ ಮಿಥುನ್ ಕುಮಾರ್ ಗೆ ಮನವಿ ಸಲ್ಲಿಸಿದ್ದಾರೆ.


ಗಾಂಧಿ ಬಜಾರ್ ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ವರ್ತಕರೆಲ್ಲ ತಮ್ಮ ಅಂಗಡಿಯನ್ನ ಬಂದ್ ಮಾಡಿ ಕೈಗೆ ಕಪ್ಪುಪಟ್ಟಿ ಧರಿಸಿ ದಿಡೀರ್ ಪ್ರತಿಭಟನೆ ಮೆರವಣಿಗೆ ಹೊರಟರು. ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತ, ಬಿಹೆಚ್ ರಸ್ತೆ, ಅಶೋಕ್ ವೃತ್ತ,ದ ಮೂಲಕ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿ ತಲುಪಿ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಗೆ ಮನವಿ ಸಲ್ಲಿಸಲಾಯಿತು. 


ಶಿವಮೊಗ್ಗ ನಗರದ ವಿವಿಧೆಡೆ ವ್ಯಾಪಾರಿಗಳ ಮೇಲೆ ನಡೆಯುತ್ತಿರುವ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿದ ಸಂಘ ನಿನ್ನೆ ನಡೆದ ಹೀರಾಲಾಲ್ ಚೈನ್ ಮೇಲೆ ಹಲ್ಲೆ ನಡೆದಿದೆ. 

ನಿನ್ನೆ ಸಂಜೆ ಸುಮಾರು 6.00 ಗಂಟೆಗೆ ನಾಗಪ್ಪ ಕಾಂಪ್ಲೆಕ್ಸ್‌ನ ಕಚೋರಿ ವ್ಯಾಪಾರಿಯಾದ ಹಿರಾಲಾಲ್ ಸೆನ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಇದಕ್ಕೆ ಸಂಬಂಧಿತ ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಿ, ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಿ ಮನವಿಯಲ್ಲಿ ವರ್ಕರ ಸಂಘ ಆಗ್ರಹಿಸಿದೆ. 


ದಿನನಿತ್ಯ ಗಾಂಧಿ ಬಜಾರಿನ ಚಿನ್ನ ಬೆಳ್ಳಿ ಮತ್ತು ಇತರೆ ಅಂಗಡಿಗಳಲ್ಲಿ ನಡೆಯುತ್ತಿರುವ ಕಳ್ಳತನಗಳ ಬಗ್ಗೆ ಕ್ರಮ ಕೈಗೊಳ್ಳುವ ಕುರಿತು ಹಾಗೂ ಶಿವಮೊಗ್ಗ ನಗರದಲ್ಲಿ ಪದೇ ಪದೇ ವ್ಯಾಪಾರಿಗಳ ಮೇಲೆ ನಡೆಯುತ್ತಿರುವ ಹಲ್ಲೆಯಿಂದ ಶಿವಮೊಗ್ಗ ನಗರದ ವಿವಿಧೆಡೆಗಳಿಂದ ಬರುವ ಗ್ರಾಹಕರಲ್ಲಿ ಆತಂಕ ಸೃಷ್ಟಿಯಾಗಿದೆ. 


ನಗರಕ್ಕೆ ಬರುವ ಗ್ರಾಹಕರು ಆತಂಕದಲ್ಲಿದ್ದಾರೆ 30-35 ವರ್ಷಗಳ ಹಿಂದೆ ಗಾಂಧಿಬಜಾರ್‌ನಲ್ಲಿ ಉತ್ತಮವಾದ ವ್ಯಾಪಾರ ನಡೆಯುತ್ತಿತ್ತು. ಆದರೆ ಇತ್ತೀಚಿಗೆ ಹಲವು ವರ್ಷಗಳಿಂದ ವ್ಯಾಪಾರ ಇಳಿಮುಖವಾಗಿದೆ. ಒಂದು ಕಡೆ ಮಳಿಗೆ ಅಡ್ವಾನ್ಸ್ ಅತಿ ಹೆಚ್ಚಾಗಿದ್ದು ನಮಗೆ ವ್ಯಾಪಾರವಿಲ್ಲದೆ ಜೀವನ ನಡೆಸುವುದು ಕಷ್ಟವಾಗಿದೆ. ಕಾರಣ ಫುಟ್ ಪಾತ್ ವ್ಯಾಪಾರಿಗಳು ಹಾಗೂ ತಳ್ಳುವಗಾಡಿಯವರಿಂದ ಆಗುತ್ತಿರುವ ತೊಂದರೆಗಳು ಅಂಗಡಿಗೆ ಬರುವ ಗ್ರಾಹಕರು ಫುಟ್‌ಪಾತ್ ವ್ಯಾಪಾರಿಗಳನ್ನು ದಾಟಿ ಅಂಗಡಿಯ ಒಳಗೆ ಬರುವುದು ಕಷ್ಟವಾಗಿದೆ.


ಗಾಂಜಾ ಹಾಗೂ ಮಾದಕವಸ್ತುಗಳನ್ನು ಸೇವಿಸಿ ಕೆಲವು ವ್ಯಕ್ತಿಗಳು ವ್ಯಾಪಾರಿಗಳೊಂದಿಗೆ ಮನಸ್ಸಿಗೆ ಬಂದತೆ ವರ್ತಿಸಿ ಜೀವ ಬೆದರಿಕೆ ಹಾಕುತ್ತಿದ್ದಾರೆ. ಇದಕ್ಕೆ ಸೂಕ್ತ ರೀತಿಯ ಕ್ರಮ ಕೈಗೊಳ್ಳಬೇಕೆಂದು ಕೋರಿರುವ ವರ್ತಕರ ಸಂಘ ನಗರದ ಗಾಂಧಿಬಜಾ‌ರ್ ಉತ್ತಮ ವಹಿವಾಟು ನಡೆಸುತ್ತಿರುವ ಕೇಂದ್ರ ಬಿಂದುವಾಗಿದ್ದು ಇಲ್ಲಿ ಪೋಲೀಸ್ ಉಪ ಠಾಣೆಯನ್ನು ಸ್ಥಾಪಿಸಬೇಕೆಂದು ಒತ್ತಾಯಿಸಲಾಯಿತು. 


ಪ್ರತಿಭಟನಾ ಮೆರವಣಿಗೆಯಲ್ಲಿ ಜವಳಿ ವರ್ತಕರ ಸಂಘ, ಶಿವಮೊಗ್ಗ, ಚೇಂಬರ್ ಆಫ್ ಕಾಮರ್ಸ್, ಶಿವಮೊಗ್ಗ, ಚಿನ್ನ-ಬೆಳ್ಳಿ ವರ್ತಕರ ಸಂಘ, ಶಿವಮೊಗ್ಗ, ಗಾಂಧಿಬಜಾರ್ ವರ್ತಕರ ಸಂಘ, ಶಿವಮೊಗ್ಗದವರು ಭಾಗಿಯಾಗಿದ್ದರು. 



Post a Comment

Previous Post Next Post