ಪದವೀಧರ ಸಹಕಾರಸಂಘದ ನಿರ್ದೇಶಕರ ಆಯ್ಕೆಗೆ ಚುನಾವಣೆಯ ಮತದಾನ ಬಿರುಸುಗೊಂಡಿದೆ. ಬೆಳಿಗ್ಗೆ 9 ರಿಂದಲೇ ಮತದಾನ ಚುರುಕುಗೊಂಡಿದ್ದು ಮತದಾನಕ್ಕೆ ಕೆಲ ಬೂತ್ ಗಳಲ್ಲಿ ಸರದಿ ಸಾಲು ನಿಂತಿವೆ.
ಬಸವೇಶ್ವರ ನಗರಕ್ಕೆ ಹೋಗುವ ಪ್ರವೇಶದ್ವಾರದಿಂದಲೇ ಚುನಾವಣೆ ಹಿನ್ನಲೆಯಲ್ಲಿ ಟ್ರಾಫಿಕ್ ಜ್ಯಾಮ್ ಗೊಂಡಿವೆ. ನಗರದ ಬಸವೇಶ್ವರ ನಗರದ ಆಕ್ಸ್ ಫರ್ಡ್ ಶಾಲೆಯಲ್ಲಿ ಮತದಾನ ನಡೆಯುತ್ತಿದ್ದು ಸಂಜೆ 4 ಗಂಟೆಯ ವರೆಗೆ ನಡೆದು ನಂತರ ಮತ ಎಣಿಕೆ ನಡೆಯಲಿದೆ.
ಚುನಾವಣೆಯಲ್ಲಿ 26 ಜನಸ್ಪರ್ಧಿಸಿದ್ದು 12 ಜನ ನಿರ್ದೇಶಕರಾಗಿ ಆಯ್ಕೆಯಾಗಲಿದ್ದಾರೆ. 2902 ಮತಗಳು ಮತದಾನವಾಗಲಿವೆ. ಆಕ್ಸ್ ಫರ್ಡ್ ಶಾಲೆಯಲ್ಲಿ 10 ಬೂತ್ ಗಳನ್ನ ನಿರ್ಮಿಸಲಾಗಿದೆ. ಬಿಸಿಎಂ ಎ ಕ್ಷೇತ್ರದಿಂದ ಗೋಪಾಲಕೃಷ್ಣ ಟಿ ಅವಿರೋಧ ಆಯ್ಕೆಯಾಗಿದ್ದಾರೆ.
ಉಳಿದ 11 ಕ್ಷೇತ್ರದಲ್ಲಿ ಪೈಪೋಟಿ ತೀವ್ರಗೊಂಡಿದೆ. ಎಸ್ಪಿ ದಿನೇಶ್, ಮಮತ, ಪ್ರಸನ್ನ ಎಸ್ ಹೆಚ್, ಜಗದೀಶ್, ಪಿ.ರುದ್ರೇಶ್, ಯು ಶಿವಾನಂದ ರಮ್ಯ ಯು ಮೊದಲಾದ 26 ಜನರು ಕಣದಲ್ಲಿದ್ದಾರೆ. ಮತದಾನ ಮಾಡಿ ಹೊರಗಡೆ ಬಂದವರಿಗೆ ಸಹಕಾರ ಸಂಘದ ವತಿಯಿಂದ ಕೋಡಬಳೆ ಪ್ಯಾಕೆಟ್ ಹಂಚಲಾಗುತ್ತಿದೆ. ಇದೀಗ ಶೇ. 50 ರಷ್ಟು ಮತದಾನವಾಗಿದೆ ಎಂದು ತಿಳಿದು ಬರುತ್ತಿದ್ದರು. ಇದು ಅಧಿಕೃತವಾಗುವುದು ಬಾಕಿಯಿದೆ.
Post a Comment