ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಪಕ್ಷದ ಸಹಕಾರಿ ಧುರೀಣರಿಗೆ ಸನ್ಮಾನಿಸಲಾಯಿತು. ಅಡಿಕೆ ವರ್ತಕರ ಸಂಘ, ದುರ್ಗಿಗುಡಿ ಕೋ ಅಪರೇಟಿವ್ ಸೊಸೈಟಿ, ಪಿಎಲ್ ಡಿ ಬ್ಯಾಂಕ್ , ಸಿಟಿ ಕೋಆಪರೇಟಿವ್ ಸೊಸೈಟಿ ಸೇರಿದಂತ ವಿವಿಧ ಸಹಕಾರಿ ಸಂಘಗಳ ಚುನಾವಣೆಯಲ್ಲಿ ಗೆದ್ದ ಉಮಾಶಂಕರ ಉಪಾಧ್ಯ, ಎಸ್ ಎನ್ ಮಹೇಶ್, ರಾಮಕೃಷ್ಣ, ನರಸಿಂಹ ಗಂಧದಮನೆ ಸೇರಿ 30 ಜನ ಸಹಕಾರಿ ಧುರೀಣರಿಗೆ ಪಕ್ಷದವತಿಯಿಂದ ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಬಿಪ್ರಸನ್ನ ಕುಮಾರ್, ಸ್ವಂತ ಶಕ್ತಿಯಿಂದ ಗೆದ್ದು ಸೇವೆ ಸಲ್ಲಿಸಿದ ನಾಯಕರಿಗೆ ಗೌರವ ಸಲ್ಲಿಸಲಾಗಿದೆ. ಗೆದ್ದವರು ನಮ್ಮ ಪಕ್ಷದ ನಾಯಕರಾದ ಕಾರಣ ಶಕ್ತಿ ಬಂದಿದೆ ಎಂದರು.
ಅನೇಕ ಕೋಆಪರೇಟಿವ್ ಸೊಸೈಟಿಗಳಲ್ಲಿ ಅಧ್ಯಕ್ಷ, ಖಜಾಂಚಿಗಳಾಗಿ ಜವಬ್ದಾರಿ ಹೆಚ್ಚಿಸಿಕೊಂಡಿದ್ದೀರಿ. ಜನರನ್ನ ಸ್ಪಂಧಿಸುತ್ತಿರುವ ರೀತಿ ಪಕ್ಷದ ಶಕ್ತಿಯನ್ನ ಮತ್ತು ಗೌರವವನ್ನ ಹೆಚ್ಚಿಸಿದೆ. 8-10 ಜನ ಗೆದ್ದಿರಬಹುದು ಎಂದು ತಿಳಿದ್ದೇವು. ಆದರೆ ಅದು 30 ಜನ ಸಹಕಾರಿ ಕ್ಷೇತ್ರದಲ್ಲಿ ನಮ್ಮ ಪಕ್ಷದ ನಾಯಕರು ಗೆದ್ದಿದ್ದಾರೆ. ಇದು ನಮ್ಮ ಪಕ್ಷದ ಶಕ್ತಿಯೂ ಹೌದು ಹಾಗೂ ನಮ್ಮ ಶಕ್ತಿ ನಮಗೆ ಗೊತ್ತಿಲ್ಲವೆಂಬುದು ಸಹ ಉದಾಹರಣೆಯಾಗಿದೆ ಎಂದರು.
ಚುನಾವಣೆಯಲ್ಲಿಗೆದ್ದ ನಂತರ ನಾವು ಮಾಡುವ ಸನ್ಮಾನ ಕಾರ್ಯಕರ್ತರಲ್ಲಿ ಅರ್ಧ ಕೆಜಿ ಜವಬ್ದಾರಿ ಹೆಚ್ಚಾಗಿದೆ. ಮಾನ್ಯ ಪ್ರಧಾನಿ ಹೆಚ್ ಡಿ ದೇವೇಗೌಡರು ಬೆಂಗಳೂರಿನಲ್ಲಿ ನಮ್ಮೊಂದಿಗೆ ಮಾತನಾಡುತ್ತಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಸ್ಥಿತಿ ನೋಡಿದ್ದೀರಿ. ಎಲ್ಲರೂ ಅವರರವರ ಪಕ್ಷದಲ್ಲಿ ಕಚ್ಚಾಡುತ್ತಿದ್ದಾರೆ. ಈಗ ಪಕ್ಷ ಬೆಳೆಸಲು ಸಕಾಲ ಎಂದು ತಿಳಿಸಿದ್ದಾರೆ. ಕೆಳಮಟ್ಟದಲ್ಲಿ ಪಕ್ಷ ಕಟ್ಟೋಣ. ಸದಸ್ಯತ್ವ ನೋಂದಣಿ ಕಾರ್ಯಕ್ರಮ ನಡೆಯಿತ್ತಿದೆ. ಅದನ್ನ ಮಾಡೋಣವೆಂದರು.
ಜಾತಿ ಜನಾಂಗವಿಲ್ಲದೆ ಪಕ್ಷ ಕಟ್ಟೋಣ, ಈ ಚುನಾವಣೆ ಗೆಲ್ಲುವುದು ಸಾಕೋಗೊಲ್ಲ. ಶಾಸಕ, ಪಾಲಿಕೆ, ಜೆಪಂ ತಾಪಂ ಸದಸ್ಯರನ್ನಾಗಿ ನಮ್ಮವರನ್ನ ಗೆಲ್ಲಿಸೋಣ. ಇದರ ಮೂಲಕ ನಾಗರೀಕರ ಪ್ರೀತಿ ಗೆಲ್ಲುವ ಮೂಲಕ ಪಕ್ಷವನ್ನ ಬಲವರ್ದನೆ ಮಾಡೋಣ ಎಂದು ಕರೆನೀಡಿದರು.
ಜೆಡಿಎಸ್ ಜಿಲ್ಲಾ ಅಧ್ಯಕ್ಷ ಕಡಿದಾಳ್ ಗೋಪಾಲ್ ಮಾತನಾಡಿ, ಪಕ್ಷದ ಸದಸ್ಯತ್ವ ನೋಂದಣಿ ಬಗ್ಗೆ ಬೆಂಗಳೂರಿನಲ್ಲಿ ಚರ್ಚೆ ನಡೆದಿದೆ ಮೆಂಬರ್ ಶಿಪ್ ಪುಸ್ತಕವನ್ನ ತೆಗೆದುಕೊಂಡು ಹೋದವರು ಬೇಗ ವಾಪಾಸ್ ಕೊಡಿ ನೋಂದಣಿ ಆಗುವರು ಬುಕ್ ತೆಗೆದುಕೊಂಡು ಹೋದವರು ನೋಂದಣಿ ಮಾಡಿಕೊಂಡು ಬೇಗ ವಾಪಾಸ್ ಕೊಡಿ ಎಂದರು.
ಮೈತ್ರಿ ಮುಂದು ವರೆದರೆ ಶಾಸಕರ ಚುನಾವಣೆಯಲ್ಲಿ ನಮ್ಮ ಪಾಲಿಕೆ ಸದಸ್ಯರ ಸಂಖ್ಯೆ ಹೆಚ್ಚಿರಬೇಕಿದೆ. ಪಾಲಿಕೆ ಸದಸ್ಯರು ಹೆಚ್ಚಿದ್ದರೆ ನಮಗೆ ಶಾಸಕ ಚುನಾವಣೆಯಲ್ಲಿ ಸೀಟ್ ಸಿಗುತ್ತೆ. ಒಂದೊಂದು ಬೂತ್ ಗೆ ಒಂದೊಂದು ಕಮಿಟಿ ಮಾಡಿ. ಎಲ್ಲಾ ಜಾತಿ ಮಹಿಳೆಯರಿಗೆ ಸದಸ್ಯತ್ವ ಮಾಡಿಕೊಳ್ಳಿ. ಇಂದಿನಿಂದಲೇ ಈ ಚುನಾವಣೆಗೆ ಸ್ಪರ್ಧಿಸಿ ಎಂದು ಹೇಳಿದರು.
ಕಾರ್ಪರೇಟರ್ ಸದಸ್ಯರಾಗುವರು ಈಗಲಿಂದಲೇ ಕೆಲಸ ಮಾಡಿ, ಜಿಪಂ ಮತ್ತು ತಾಪಂ ಚುನಾವಣೆ ಜೊತೆಗೆ ಪಾಲಿಕೆ ಸದಸ್ಯತ್ವ ಬರಲಿದೆ ಅದರ ಮೇಲೆ ಹೆಚ್ಚು ಗಮನಹರಿಸಿ ಎಂದು ಕರೆನೀಡಿದರು.
ನಗರಾಧ್ಯಕ್ಷ ದೀಪಕ್ ಸಿಂಗ್, ಪಕ್ಷದ ಸಂಗಣ್ಣ, ತ್ಯಾಗರಾಜ್, ಉಮಾಶಂಕರ ಉಪಾಧ್ಯ, ನರಸಿಂಹ ಗಂಧದಮನೆ, ಸಂಜಯ್ ಕಶ್ಯಪ್, ಸಿದ್ದೇಶ್, ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು.
Post a Comment