ನಗರದಲ್ಲಿ ವಿದ್ಯಾನಗರ ಸೇರಿದಂತೆ ಹಲವು ಬಡಾವಣೆಗಳಲ್ಲಿ 24×7 ಕುಡಿಯುವ ನೀರು ಸಮರ್ಪಕವಾಗಿ ಹಂಚಿಕೆಯಾಗುತ್ತಿಲ್ಲವೆಂದು ಆರೋಪಿಸಿ ಮಾಜಿ ನಗರ ಸಭೆ ಸದಸ್ಯೆ ಯಮುನಾರಂಗೇಗೌಡರ ನೇತೃತ್ವದಲ್ಲಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.
ವಾರ್ಡ್ ನಂಬರ್ 14, ವಿದ್ಯಾನಗರದಲ್ಲಿ, ಸಮರ್ಪಕವಾಗಿ ತಪಾಸಣೆ ನಡೆಸಿ ನೀರು ಬಿಡದ ಕಾರಣ 24×7 ನ ಕುಡಿಯುವ ನೀರು ಸಮರ್ಪಕವಾಗಿ ಸರಬರಾಜು ಆಗುತ್ತಿಲ್ಲ. ಹಳೆ ಪೈಪ್ ಲೈನ್ ನಲ್ಲೂ ನೀರು ಬಾರದೆ ಸಮಸ್ಯೆ ಎದುರಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಸಮರ್ಪಕವಾಗಿ ತಪಾಸಣೆ ನಡೆಸಿ 24×7 ಅಥವಾ ಹಳೆಯ ಪೈಪ್ ಲೈನ್ ನಲ್ಲಿ ಸಮರ್ಪಕ ನೀರು ಸರಬರಾಜು ಮಾಡಬೇಕು. ವಿದ್ಯಾನಗರದಲ್ಲಿ ಕಳೆದ ನಾಲ್ಕು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆವೆಂದು ಮನವಿಯಲ್ಲಿ ದೂರಲಾಗಿದೆ. ಮನವಿ ನೀಡುವ ಸಂದರ್ಭದಲ್ಲಿ ರಙಗೇಗೌಡರು ಮತ್ತು ಇತರರು ಉಪಸ್ಥಿತರಿದ್ದರು.
Post a Comment