ಕಾಲುಜಾರಿ ನಾಲೆಗೆ ಬಿದ್ದು ಪಿಡಿಒ ಸಾವು

 

ಜಮೀನಿಗೆ ನೀರು ಹಾಯಿಸಲು ತೆರಳಿದ್ದ ಅತ್ತಿಗುಂದದ ಪಿಡಿಒ ಕಾಲುಜಾರಿ ಚಾನೆಲ್ ಗೆ ಬಿದ್ದು ಸಾವನ್ನಪ್ಪಿದ ಘಟನೆ ನಿನ್ನೆ ರಾತ್ರಿ ನಡೆದಿದ್ದು, ಪ್ರಕರಣ ಹೊಸಮನೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 


ಭದ್ರಾವತಿ ತಾಲ್ಲೂಕು ಬಾರಂದೂರು ಗ್ರಾಮದ ವೆಂಕಟೇಶ್ ಜಿ ರವರು ರಾತ್ರಿ ತಮ್ಮ ಜಮೀನಿಗೆ ನೀರು ಹಾಯಿಸಲು ಹೋಗುವ ಸಂದರ್ಭದಲ್ಲಿ ಅವರ ತೋಟಕ್ಕೆ ಹೋಗಲು ಚಾನೆಲ್ ಅಡ್ಡಲಾಗಿ ಇಟ್ಟಿದ್ದ ಮುರಿದ ಸಣ್ಣದಾದ ವಿದ್ಯುತ್ ಕಂಬವನ್ನು ರಾತ್ರಿ ದಾಟುವಾಗ ಆಕಸ್ಮಿಕವಾಗಿ ಕಾಲು ಜಾರಿ ಚಾನೆಲ್ ಗೆ ಬಿದ್ದು ಮೃತಪಟ್ಟಿದ್ದಾರೆ.


ವೆಂಕಟೇಶ್ ಮಾಜಿ ಸೈನಿಕರಾಗಿದ್ದು MEG ನಲ್ಲಿ ಹದಿನೆಂಟು ವರ್ಷ ಭಾರತದಾದ್ಯಂತ ಸೇವೆ ಸಲ್ಲಿಸಿದ್ದರು. ಪ್ರಸ್ತುತದಲ್ಲಿ ಭದ್ರಾವತಿ ತಾಲ್ಲೂಕು ಅತ್ತಿಗುಂದ ಗ್ರಾಮದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ (ಪಿಡಿಒ) ಸೇವೆ ಸಲ್ಲಿಸುತ್ತಿದ್ದರು. ವೆಂಕಟೇಶ್ ಜಿ ರವರ ಪಾರ್ಥೀವ ಶರೀರವನ್ನು ನಿನ್ನೆ ರಾತ್ರಿ ತಮ್ಮ ಸ್ವಗ್ರಾಮ ಬಾರಂದೂರಿನಲ್ಲಿ ಅಂತಿಮ ಸಂಸ್ಕಾರ ಮಾಡಲಾಯಿತು.


ಮೃತ ವೆಂಕಟೇಶ್ ಜಿ ರವರ ಒಡನಾಡಿ ಮತ್ತು ಜೊತೆಯಲ್ಲಿಯೇ ಟ್ರೈನಿಂಗ್ ಮಾಡಿ ಜೊತೆಯಲ್ಲಿಯೇ ಕರ್ತವ್ಯ ನಿರ್ವಹಿಸಿದ್ದ ಗೆಳೆಯರು ಮಾಜೀ ಯೋಧರಾದ ಸುನಿಲ್ ದತ್. ಅಣ್ಣಪ್ಪ. ಮೋಹನ್ ಸಿ. ಗೆಳೆಯನ ಅಗಲುವಿಕೆಗೆ ತೀವ್ರ ಸಂತಾಪ ಸೂಚಿಸಿ ಕಂಬನಿಗರೆದಿದ್ದು ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.


ಮೃತ ಮಾಜಿ ಯೋಧನಿಗೆ ಮಾಜೀ ಸೈನಿಕರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಮತ್ತು ಶಿವಮೊಗ್ಗ ಜಿಲ್ಲಾ ಮಾಜಿ ಸೈನಿಕರ ಸಂಘವು ತೀವ್ರ ಸಂತಾಪ ಸೂಚಿಸಿದ್ದಾರೆ.



Post a Comment

Previous Post Next Post