ಶಿವಮೊಗ್ಗದ ಜೈಲ್ ನಲ್ಲಿ ಸಜಾ ಬಂಧಿಯೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಆತನನ್ನ ಮೆಗ್ಗಾನ್ ಎಮೆರ್ಜೆನ್ಸಿ ವಾರ್ಡ್ ಗೆ ದಾಖಲಿಸಲಾಗಿದೆ.
ರಾಜಪ್ಪ ಎಂಬ ಸುಮರು 38 ವರ್ಷದ ಸಜಾಬಂಧಿಯು ಮರ್ಡರ್ ಪ್ರಕರಣದಲ್ಲಿ ಶಿವಮೊಗ್ಗ ಜೈಲು ಸೇರಿದ್ದ. ಆತನಿಗೆ ಏಳು ವರ್ಷ ಕಠಿಣ ಸಜೆಯನ್ನ ನೀಡಲಾಗಿತ್ತು.
ಆದರೆ ಇಂದು ಬೆಳಿಗ್ಗೆ ಗಾರ್ಡನ್ ಏರಿಯಾದಲ್ಲಿ ಕೆಲಸ ಮಾಡಲು ಹೋದ ರಾಜಪ್ಪ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪ್ರತಿದಿನ7-30 ರಿಂದ 8 ಗಂಟೆಗೆ ಜೈಲ್ ನ ಸಜಾ ಬಂದಿಗಳನ್ನ ಗಾರ್ಡನ್ ಗೆ ಖೈದಿಗಳನ್ನ ಬಿಡಲಾಗುತ್ತದೆ. ಗಾರ್ಡನ್ ಕೆಲಸ ಸಂಜೆ 5 ಗಂಟೆಯ ವರೆಗೆ ನಡೆಯುತ್ತದೆ. ಗಿಡಕ್ಕೆ ಔಷಧಿ ಹೊಡೆಯಲು ಕೊಟ್ಟ ಬಾಟಲ್ ನ್ನೇ ರಾಜಪ್ಪ ವಿಷ ಸೇವಿಸಿದ್ದಾಗಿ ತಿಳಿದು ಬಂದಿದೆ.
ತರೀಕೆರೆಯ ರಾಜಪ್ಪ 2002 ರಲ್ಲಿ ಮರ್ಡರ್ ಮಾಡಿದ್ದ ಆರೋಪದ ಅಡಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಶಿಕ್ಷೆ ಪ್ರಕಟವಾಗಿತ್ತು. ಶಿವಮೊಗ್ಗ ಜೈಲಿಗೆ ಆತ ಒಂದು ವರ್ಷ ಕಳೆದಿದೆ.
Post a Comment