ಕೂಡಿ ಗ್ರಾಮದ ಚಾನಾಲು ದಂಡೆಯ ಮೇಲೆ ಮುರಿದು ಬೀಳುವ ಹಂತದಲ್ಲಿರುವ ವಿದ್ಯುತ್ ಕಂಬವನ್ನು (electric pole) ಬದಲಾಯಿಸುವಂತೆ ಮೆಸ್ಕಾಂ ಇಂಜಿನಿಯರ್‌ಗೆ ಹಾಗೂ ಲೈನ್ ಮ್ಯಾನ್‌ಗಳಿಗೆ ಮನವಿ ಸಲ್ಲಿಸಲಾಗಿದೆ(submit).
ಕುಂಸಿ ಮೆಸ್ಕಾಂ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ತಮ್ಮಡಿಹಳ್ಳಿ ಗ್ರಾಮ ಪಂಚಾಯಿತಿಗೆ ಬರುವ ಕೂಡಿ ಗ್ರಾಮದ ಚಾನೆಲ್ ನಲ್ಲಿ ಬರುವ ವಿದ್ಯುತ್ ಕಂಬ ಬಲಿಗಾಗಿ ಕಾಯುತ್ತಿದೆ. ಈ ವಿದ್ಯುತ್ ಕಂಬದ ಬಗ್ಗೆ ಹಲವು ಬಾರಿ ಇಲಾಖೆಗೆ ಮನವಿ ಮಾಡಿದರೂ ಅಧಿಕಾರಿಗಳು ನಿರ್ಲಕ್ಷ ಎದ್ದುತೋರುತ್ತಿದೆ ಎಂದು ದೂರಿದ್ದಾರೆ.
ಕಳೆದ ಒಂದು ವರ್ಷದಿಂದಲೂ ವಿದ್ಯುತ್ ಕಂಬ ಇದೇ ಸ್ಥಿತಿಯಲ್ಲಿದೆ. ಕಂಬದ ಒಳಗಿರುವ ನಾಲ್ಕು ಕಬ್ವಿಣದ ರಾಡುಗಳು ಮಾತ್ರ ಕಾಂಕ್ರೀಟ್ ಹಿಡಿದುಕೊಂಡಿದ್ದು, ಮದ್ಯಭಾಗದಲ್ಲಿ ಕಳಚಿ ಬಿದ್ದಿದೆ. ಪರಿಣಾಮ ಕಂಬ ರಸ್ತೆ ಮೇಲೆ ವಾಲಿ ನಿಂತಿದೆ. ಇರುವುದರಿಂದ ಕಂಬ ಇನ್ನೂ ಧರಾಶಾಹಿಯಾಗಿಲ್ಲ. ಕಂಬಕ್ಕೆ ಸುತ್ತಿಕೊಂಡ ಕಾಡುಬಳ್ಳಿಯನ್ನು ಗ್ರಾಮಸ್ಥರೇ ಕತ್ತರಿಸಿದ್ದಾರೆ.
ಚಾನಾಲು ದಂಡೆಯ ಮೇಲೆ ಕಂಬ ಇದ್ದು, ರಸ್ತೆ ಮೇಲೆ ಬಿದ್ದರೆ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗವಿಲ್ಲ. ಕಿರು ರಸ್ತೆಯಾಗಿರುವುದರಿಂದ ವಾಹನ ರಿವರ್ಸ್ ತೆಗೆಯುವುದು ಕಷ್ಟಸಾಧ್ಯವಾಗಿದೆ. ಕಂಬ ಮುರಿದು ಬಿದ್ದರೆ ಅದನ್ನು ನೋಡದೆ ವಾಹನ ಸವಾರರು ಸ್ಪರ್ಶಿಸುವ ಸಾಧ್ಯತೆಯೂ ಇದೆ. ಹೀಗಾಗಿ ಅಬಾಹುತಗಳು ಸಂಭವಿಸುವ ಮುನ್ನ ಸಂಬಂಧಿಸಿದ ಇಂಜಿನಿಯರ್ ಗಮನಿಸುವಂತೆ ಒತ್ತಾಯಿಸಲಾಗಿದೆ.
ಕಂಬ ಬದಲಾಯಿಸುತ್ತಾರೋ ಇಲ್ಲವೆ ಬಲಿಗಾಗಿ ಕಾಯುತ್ತಿದ್ದಾರೋ ಎಂಬುದನ್ನು ಮೆಸ್ಕಾಂ ಹಿರಿಯ ಅಧಿಕಾರಿಗಳೇ ಸ್ಪಷ್ಟಪಡಿಸಬೇಕಿದೆ ಎಂದು ಗ್ರಾಮಸ್ಥರು ಮನವಿಯಲ್ಲಿ ಆಗ್ರಹಿಸಿದ್ದಾರೆ.
Post a Comment