ವಾಹನಗಳ ಚಾಲಕ ಕಾರ್ಮಿಕರ ಬಳಿ ಹೀನಾಯವಾಗಿ ವರ್ತಿಸಿ ಚಾಲಕರಿಗೆ ಅವಮಾನ ಮಾಡಿರುವ ಪಿಎಸ್ಐ ವಿರುದ್ಧ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣ ವೇದಿಕೆಯ ರಾಜ್ಯಾಧ್ಯಕ್ಷ ಸತೀಶ್ (ದೇವು) ಅವರ ನೇತೃತ್ವದಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳು ಮತ್ತು ಹೆಚ್ಚುವರಿ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಜ.20 ರಂದು ವಾಹನಗಳಿಂದ ಕರ್ಕಶವಾಗಿ ಶಬ್ದ ಬರುತ್ತಿರುವ ಬಸ್ ಗಳನ್ನ ನಿಲ್ಲಿಸಿ ವಾಹನಗಳ ಚಾಲಕ ಕಾರ್ಮಿಕರಿಗೆ ಏಕ ವಚನದಿಂದ ಇಳಿಯೋ ಕೆಳಗೆ ಬಗ್ಗಿ ಕೆಳಗೆ ಎಂದು ಚಾಲಕರ ಕೊಳಪಟ್ಟಿ ಹಿಡಿದು ವಾಹನದ ಹಾರನ್ ಸೌಂಡ್ ಬರುವ ಜಾಗಕ್ಕೆ ಕೇಳೋ ಹಾರ್ ಸೌಂಡ್ ಎಂದು ಚಾಲಕ ಕಾರ್ಮಿಕರಿಗೆ ಪಿಎಸ್ಐ ತಿರುಮಲೇಶ್ ಅವಮಾನ ಮಾಡಿರುವುದಾಗಿ ಸಂಘಟನೆ ಮನವಿಯಲ್ಲಿ ಆರೋಪಿಸಿದೆ.
ಚಾಲಕರನ್ನ ಕೀಳು ಭಾವನೆಯಿಂದ ನೋಡುತ್ತಾ ಅವಮಾನ ಮಾಡಲಾಗಿದೆ. ವಾಹನದ ಚಾಲಕರು ವೈಯುಕ್ತಿವಾಗಿ ಮನನೊಂದು ಸಂಘಟನೆಗೆ ದೂರು ನೀಡಿದ್ದು ಈ ಘಟನೆಯಿಂದ ಚಾಲಕರು ನೊಂದಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ವಾಹನದ ಚಾಲಕರು ಮನುಷ್ಯರಲ್ಲವೇ ಮನುಷ್ಯರು ಮನುಷ್ಯರೊಂದಿಗೆ ಈ ರೀತಿ ನಡೆದುಕೊಳ್ಳುವುದು ಸಭ್ಯತೆಯೇ. ಒಂದು ವೇಳೆ ವಾಹನಗಳಿಗೆ ಕರ್ಕಶವಾದ ಹಾರ್ ಬಳಸಿದಲ್ಲಿ ಅಂತಹ ವಾಹನಗಳನ್ನು ಹಿಡಿದು ಆ ವಾಹನಗಳ ಮಾಲೀಕರನ್ನು ಕರೆಯಿಸಿ ವಾಹನಗಳ ಮಾಲೀಕರಿಗೆ ದಂಡ ಹಾಕುವುದು ಅಥವಾ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಮಾಡಿದ್ದರೆ ಸರಿ ಇರುತ್ತಿತ್ತು. ಆದರೆ ವಾಹನಗಳ ಮಾಲೀಕರು ಕೊಡುವ ಕೂಲಿ ಹಣಕ್ಕೆ ಕೆಲಸ ಮಾಡುವವರನ್ನು ಹಿಡಿದು ಈ ರೀತಿ ಅವಮಾನಿಸುವುದು ಎಷ್ಟು ಸರಿ ಎಂದು ಸಂಘಟನೆ ಮನವಿಯಲ್ಲಿ ಪ್ರಶ್ನಿಸಿದೆ.
ಪ್ರತಿಯೊಬ್ಬ ಮನುಷ್ಯನಿಗೆ ಅವನದೇ ಆದ ಘನತೆ ಗೌರವ ಇರುತ್ತದೆ. ಪ್ರತಿಯೊಬ್ಬ ವ್ಯಕ್ತಿ ಅವರವರ ಕುಟುಂಬಗಳಲ್ಲಿ ಮನೆಯ ಯಜಮಾನರು, ಅಣ್ಣಂದಿರು, ಮಕ್ಕಳಿಗೆ ಅಪ್ಪ. ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿರುತ್ತಾನೆ. ಆದರೆ ವಾಹನಗಳ ಮಾಲೀಕರು ಮಾಡಿರುವುದಕ್ಕೆ ಚಾಲಕರನ್ನು ಹೊಣೆಗಾರರನ್ನಾಗಿ ಸಾರ್ವಜನಿಕವಾಗಿ ಈ ರೀತಿ ಅವಮಾನ ಮಾಡಿರುವುದು ವೇದಿಕೆಯ ಸಂಘಟನೆಯು ಖಂಡಿಸುತ್ತದೆ. ಚಾಲಕ ಕಾರ್ಮಿಕರನ್ನು ಯಾವ ರೀತಿಯಲ್ಲಿ ಕೊಳಪಟ್ಟಿ ಹಿಡಿದು ಬಗ್ಗಿಸಿ ಅವಮಾನ ಮಾಡಿರುವುದು ವಿಡಿಯೋ ಇದೆ.
ಆದ್ದರಿಂದ ಚಾಲಕರನ್ನು ಈ ರೀತಿ ಕೀಳು ಭಾವನೆಯಿಂದ ನೋಡಿ ಅವರನ್ನು ಅವಮಾನಿಸಿರುವ ಪಿಎಸ್ಐ ತಿರುಮಲೇಶ್ ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕೆಂದು ಸಂಘಟನೆ ಮನವಿಯಲ್ಲಿ ಆಗ್ರಹಿಸಿದೆ.
Post a Comment