ಕಾಂಗ್ರೆಸ್ ಮತ್ತು ಪೊಲೀಸ್ ಇಲಾಖೆಗೆ ಶಾಪತಟ್ಟದೆ ಇರದು-ಈಶ್ವರಪ್ಪ

 

ರಾಜ್ಯದಲ್ಲಿ ರಾಜ್ಯ ಸರ್ಕಾರ ಹಿಂದೂಗಳನ್ನ ಅಲಕ್ಷ್ಯ ಮಾಡುವ ಜೊತೆಗೆ ಗೋಹಂತಕರಿಗೆ ಬೆಂಬಲಿಸುತ್ತಿದೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಆರೋಪಿಸಿದರು. 


ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ 14 ಜಿಲ್ಲೆಗಳಲ್ಲಿ 70 ಗೋಶಾಲೆ ನಿರ್ಮಿಸುವ ನಿರ್ಧಾರ ತೆಗೆದುಕೊಂಡಿತ್ತು. ಅದನ್ನ ಕಾಂಗ್ರೆಸ್ ಸರ್ಕಾರ ಕೈಬಿಟ್ಟಿದೆ. ಇದು ದುಃಖಕರ ಸಂಗತಿ ಎಂದು ದೂರಿದರು. 


ಚಾಮರಾಜ ಪೇಟೆಯಲ್ಲಿ ಕರ್ಣ ಎಂಬುವರ ಮನೆಯಲ್ಲಿದ್ದ ಮೂರು ಗೋವುಗಳಿಗೆ ಕೆಚ್ಚಲು ಕತ್ತರಿಸಿ ಕಾಲಿಗೆ ಮಚ್ಚಿನಿಂದ ಹೊಡೆದಿದ್ದಾರೆ. ಇದಾದ ನಂತರ ಬಿಹಾರಿಯ ನಸ್ರೂ ಎಂಬುವನನ್ನ ತೋರಿಸಿ ಕುಡುಕ ಎನ್ನಲಾಯಿತು. ನಂತರ ಆತನ ಮನಸ್ಥಿತಿ ಸ್ಥೀಮಿತದಲ್ಲಿಯಿಲ್ಲ ಎಂದಿತು. ಸ್ವಾಭಿಮಾನ ಬಿಟ್ಟು ಗೋಮಾತೆ, ಹಿಂದೂಗಳನ್ನ ಅಪಮಾನಿಸಿದರೂ ಪೊಲೀಸ್ ಇಲಾಖೆ ಸುಳ್ಳು ಹೇಳುವ ಹಂತ ತಲುಪಿರುವುದು ಇಲಾಖೆಗೆ ಅವಮಾನಕರ ಎಂದು ದೂರಿದರು. 


ಅತ ಕುಡುಕ ಎಂದಾದರೆ ಬೆಳಗ್ಗಿನ ಜಾವ ಯಾವ ಬಾರ್ ತೆಗೆದಿತ್ತು. ಈ ಕೃತ್ಯದ ಹಿಂದೆ ರಾಷ್ಟ್ರಮಟ್ಟದ ಸಂಚುಗಳಿವೆ ಎಂಬ ಶಂಕೆಯಿದೆ. ಗೋವಿನ ಕೆಚ್ಚಲು ಕತ್ತರಿಸಿ, ಗೋವಿನ ಕಾಲಿಗೆ ಕಡಿದ ಪ್ರಕರಣದಲ್ಲಿ ಕಾಂಗ್ರೆಸ್ ಗೆ ಶಾಪ ತಟ್ಟದೆ ಬಿಡೊಲ್ಲ. ಪೊಲೀಸ್ ಇಲಾಖೆಯೂ ಉದ್ದಾರ ಆಗೊಲ್ಲ ಎಂದು ಶಾಪ ಹಾಕಿದರು. 


ಕಾಂಗ್ರೆಸ್ ಗೆ ಶಾಪ ತಟ್ಟದೆ ಇರದು


ಪೇಜಾವರ ಮತ್ತು ಪುತ್ತಿಗೆ ಶ್ರೀಗಳು ಇದು ಎಚ್ಚರಿಕೆಯ ಘಟನೆ ಎಂದಿದ್ದಾರೆ. ಮಯಸ್ಲೀಂರಿಗೆ ಏನಾದರೂ ಆಗಿದ್ದರೆ ಸಮುದಾಯ ದೇಶಕ್ಕೆ ಬೆಂಕಿ ಹಚ್ಚುತ್ತಿದ್ದರು. ಕಾಂಗ್ರೆಸ್ ಯಾವ ಮತಾಂಧರು ಮಾಡಿದ್ದಾರೆ ಎಂದು ಪತ್ತೆಹಚ್ಚಬೇಕು. ತನಿಖೆಗೆ ಸಹಕರಿಸುತ್ತಿಲ್ಲ ಎಂದು ಪೊಲೀಸ್ ಇಲಾಖೆ ಹೇಳುತ್ತಿದೆ. ಆತನಿಗೆ ಮೊದಲೇ ಟ್ಯೂನ್ ಅಪ್ ಆಗಿಧದು ಬಾಯಿಯಾಕೆ ಬಿಡುತ್ತಾನೆ ಎಂದು ದೂರಿದರು. 


ಮುಸ್ಲೀಂರಿಗೆ ಬೆಂಬಲಿಸಿದ್ದಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿಲ್ಲ. ಹಿಂದೂ ಸಮಾಜದ ಬೆಂಬಲದಿಂದ ಅಧಿಕಾರಕ್ಕೆ ಬಂದಿದೆ ಎಂಬುದನ್ನ‌ ಮರೆಯಬಾರದು ಎಂದು ದೂರಿದರು. ನಾಳೆ ಡಿಸಿ ಕಚೇರಿಯ ಎದುರು ಗೋವಿನ ಕೆಚ್ಚಲು ಕತ್ತರಿಸಿದ ಘಟನೆ ಖಂಡಿಸಿ ರಾಷ್ಟ್ರಭಕ್ತರ ಬಳಗ ಪ್ರತಿಭಟಿಸಲಿದ್ದೇವೆ ಎಂದು ಎಚ್ಚರಿಸಿದರು. 


ಒಂದು ವಾರದಲ್ಲಿ ಅನ್ವರ್ ಶೆಡ್ ಬಂದ್ ಮಾಡದಿದ್ದರೆ ಎಚ್ಚರಿಕೆ...!


ಸಾವರ್ಕರ್ ನಗರದಲ್ಲಿರುವ ಅನ್ವರ್ ಅಂಡ್ ಕೋ ಮೇಲೆ ದೂರು ಗಳು ಬಂದಿವೆ ಹಸು ಮತ್ತು ಕುರಿ ಚರ್ಮದ ವ್ಯವಹಾರ ಬಡೆಸುತ್ತಿದ್ದು, ಇದರಿಂದ ಸುತ್ತಮುತ್ತ ಪ್ರದೇಶ ದುರ್ವಾಸನೆ ಆಗುತ್ತಿದೆ ಎಂದು ಪಾಲಿಕೆಗೆ ನ. 4 ರಂದು ಮೊಹಮದ್ ಅಸ್ಲಂ ಅವರು ದೂರು ನೀಡಿದ್ದಾರೆ. ಆದರೆ ಪಾಲಿಕೆ ಕ್ರಮ ಕೈಗೊಳ್ಳಲು ಜ.03 ರಂದು ನೋಟೀಸ್ ನೀಡಿದೆ. ಪಾಲಿಕೆ ನಿದ್ದೆ ಮಾಡುತ್ತಿದೆ. ರಾಜ್ಯ ಸರ್ಕಾರ ಮುಸ್ಲೀಂ ಗೂಂಡಾ ಗಳನ್ನ ಬೆಂಬಲಿಸುತ್ತಿದೆ. ಒಬ್ಬ ಮುಸ್ಲೀಂನು ಮತ್ತೊಬ್ಬ ಮುಸ್ಲೀಂ ದೂರು ನೀಡಿದರು ಪಾಲಿಕೆ ನಿದ್ದೆ ಮಾಡುತ್ತಿರುವುದು ದುರಂತ ಎಂದರು. 


ಒಂದು ವಾರದಲ್ಲಿ ಅನ್ವರ್ ಅಂಡ್ ಕಂಪನಿ ಕಿತ್ತು ಹಾಕದಿದ್ದರೆ ನಾವೇ ಕಿತ್ತು ಹಾಕುವುದಾಗಿ ಎಚ್ಚರಿಸಿದ್ದಾರೆ. ನಾವು ಮತ್ತೆ ಯಾವುದೇ ಕ್ರಮ ಕೈಗೊಳ್ಳಲ್ಲ ಎಂದು ಈಶ್ವರಪ್ಪ ಆಗ್ರಹಿಸಿದ್ದಾರೆ. 


ಡಿಕೆಶಿ ದೇಶ ಭಕ್ತ 


ಡಿಕೆಶಿಗೆ ದೇವಭಕ್ತಿಯಿದೆ. ಅವರು ಹಿಂದೂಗಳ ಸಾಧು ಸಂತರಿಂದ ದೇಶ ರಕ್ಷಣೆಯಾಗಿದೆ ಎಂದಿದ್ದಾರೆ. ಅವರ ಹೇಳಿಕೆ ಸ್ವಾಗತಿಸುವೆ. ಆದರೆ ಡಿಕೆಶಿ ತಮ್ಮ ಹೇಳಿಕೆಗೆ ಸೀಮಿತಗೊಳ್ಳದೆ ಸಣ್ಣ ಸಣ್ಣ ಮಠಮಾನ್ಯಗಳಿಗೆ ಅನುದಾನ ಬೀಡಬೇಕು.ಇದರಿಂದ ಸಾಧುಸಂತರ ರಕ್ಷಣೆಗೆ ದಾವಿಸಬೇಕು ಎಂದು ಆಗ್ರಹಿಸಿದರು.

Post a Comment

Previous Post Next Post