ಶಿರಾಳಕೊಪ್ಪ ಟೌನ್ ನಲ್ಲಿ ಅಕ್ರಮ ಗೋಮಾಂಸದ ಅಡ್ಡದ ಮೇಲೆ ಶಿರಾಳಕೊಪ್ಪ ಪೊಲೀಸರು ದಾಳಿ ನಡೆಸಿದ್ದು 150 ಕೆಜಿ ಗೋಮಾಂಸವನ್ನ ಸೀಜ್ ಮಾಡಿದ್ದಾರೆ.
ಶಿರಾಳಕೊಪ್ಪದ ಕೆಳಗಿನ ಕೇರಿಯಲ್ಲಿ ಅಕ್ರಮ ಗೋಮಾಂಸ ಮಾರಾಟದ ಬಗ್ಗೆ ಪೊಲೀಸರಿಗೆ ಹೆಚ್ಚಿನ ದೂರುಗಳು ಹೋಗುತ್ತಿದ್ದವು. ದೂರಿನ ಆಧಾರದ ಮೇರೆಗೆ ಇಂದು ಶಿರಾಳಕೊಪ್ಪ ಪೊಲೀಸ್ ಠಾಣೆಯ ಪಿಎಸ್ ಐ ಪ್ರಶಾಂತ್ ಮತ್ತು ಪುಷ್ಪರವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ದಾಳಿಯಲ್ಲಿ ಇಬ್ಬರನ್ನ ಬಂಧಿಸಿರುವ ಪೊಲೀಸರು 150 ಕೆಜಿ ಗೋಮಾಂಸವನ್ನ ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳಾದ ಅಸ್ಲಾಂ ಮತ್ತು ನಭಿವುಲ್ಲರನ್ನ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.
Post a Comment