ಶಿವಮೊಗ್ಗದ ವಿಶ್ವವಿದ್ಯಾಲಯದ ಸಮಸ್ಯೆಯ ಬಗ್ಗೆ ಕುಲಪತಿ ಶರತ್ ಅನಂತ ಮೂರ್ತಿ ಅವರು ಕೆಲವು ಆತಂಕವನ್ನ ವ್ಯಕ್ತಪಡಿಸಿದ್ದು ಆ ಸಮಸ್ಯೆಗಳನ್ನ ಬಗೆರಹರಿಸಿಯೇ ತೀರುವುದಾಗಿ ಶಪಥ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎನ್ ಆರ್ ಎಫ್ ರ‌್ಯಾಂಕ್ ನಲ್ಲಿ ಕುವೆಂಪುವಿಶ್ವ ವಿದ್ಯಾನಿಲಯ ಅಪಾಯದಲ್ಲಿದೆ. 150 ನೇ ರ‌್ಯಾಂಕ್ ನಲ್ಲಿದೆ. ವಿಶ್ವವಿದ್ಯಾನಿಲಯದಲ್ಲಿ ಭ್ರಷ್ಠಾಚಾರದ ಆರೋಪಗಳಿವೆ. ಅದನ್ನ ಬಗೆಹರಿಸೆ ಹೋಗುವುದಾಗಿ ಅವರು ಹೇಳಿದರು.
ಎಂಎಡ್ ಗೆ ಅಡ್ಮಿಷನ್ ಇಲ್ಲ. ಇದು ಒಂದು ವಿಭಾಗದ ಸನಸ್ಯೆಯಲ್ಲ. ಪದವಿಯ ಎಲ್ಲಾ ಕೋರ್ಸ್ ಗಳು ಪ್ರವೇಶಾತಿ ಕಡಿಮೆಯಾಗಿದೆ. ಪದವಿಗಳಿಗೆ ಗಾಢವಾಗಿ ಯೋಚಿಸುವ ಪರಿಸ್ಥಿತಿ ಇದೆ. ಭೌತಶಾಸ್ತ್ರಕ್ಕೂ ಪ್ರವೇಶಾತಿ ಕಡಿಮೆಯಾಗಿದೆ. ಈ ಹಿಂದೆ ಭೌತಶಾಸ್ತ್ರಕ್ಕೆ ಹೆಚ್ಚಿನ ಬೇಡಿಕೆ ಇತ್ತು. ಆದರೆ ಈಗ ಅಲ್ಲೂ ಸಹ ವಿದ್ಯಾರ್ಥಿಗಳ ಪ್ರವೇಶಾತಿ ಕಡಿಮೆಯಾಗಿದೆ.
ಎನ್ ಇಪಿ ಯಿಂದ ಸಮಸ್ಯೆಯಿಂದಾಗಿ ಈ ಪ್ರವೇಶಾತಿಗಳು ವಿವಿಗಳಲ್ಲಿ ಕಡಿಮೆಯಾಗಿದೆ. ಮಾರ್ಕ್ಸ್ ಕಾರ್ಡ್ ಸಮಸ್ಯೆ ಬಗೆಹರಿಸಲಾಗಿದೆ. ಮಾರ್ಕ್ಸ್ ಕಾರ್ಡ್ ಗಾಗಿ ವಿದ್ಯಾರ್ಥಿಗಳ ಪರದಾಟ ಬಹುತೇಕ ಬಗೆಹರಿಸಲಾಗಿದೆ. ಇನ್ನು ಉಳಿದ 15 ದಿನಗಳಲ್ಲಿ ಕಾಲೇಜಿಗೆ ತೆರಳಿ ಮಾರ್ಕ್ಸ್ ಕಾರ್ಡ್ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈಗ ಸದ್ಯಕ್ಕೆ ಪರೀಕ್ಷೆ ಬೇಗ ಆಗಿದೆ. ಉನ್ನತಶಿಕ್ಷಣಕ್ಕೆ ಹೋಗಲು ವಿದ್ತಾರ್ಥಿಗಳಿಗೆ ಇದು ಅನುಕೂಲವಾಗಲಿದೆ. ತಾತ್ಕಾಲಿಕವಾಗಿ ಮಕ್ಕಳಿಗೆ ಸಮಸ್ಯೆ ಎನಿಸಿದತು. ಅವರ ಭವಿಷ್ಯಕ್ಕೆ ಇದು ಅನಿವಾರ್ಯವಾಗಿದೆ ಎಂದರು.
ಜೊತೆಗೆ ಯುಜಿಸಿ ಅವರು ಮೂರು ತಿಂಗಳಿಗೆ ಸೆಮಿಸ್ಟರ್ ಇಳಿಸಿರುವುದತಿಂದ ಈ ಸಮಸ್ಯೆ ಸಮಸ್ಯೆ ಎನಿಸಿದ ಅವರು, ವಿಶ್ವವಿದ್ಯಾಲಯದ ಆರ್ಥಿಕ ಸ್ಥಿತಿ ಕಡಿಮೆಯಾಗಿದೆ. ಕೇಂದ್ರದ ನೀತಿ ಆಯೋಗದಿಂದ ಗ್ರ್ಯಾಂಡ್ಸ್ ಬರಲಿದೆ. 60 ಕೋಟಿಗೆ ಯೋಜನೆ ರೂಪಿಸಲಾಗಿದೆ. ಸಂಸದರ ಅನುದಾನದಲ್ಲಿ 8 ಕೋಟಿಗೆ ರೂಪು ರೇಷ ನಿರ್ಮಿಸಲಾಗಿದೆ. ದೂರಶಿಕ್ಷಣ ಕ್ಲೋಸ್ ಆಗಿದ್ದರಿಂದ ಈ ಆರ್ಥಿಕತೆ ಕುಸಿಸಿದೆ. ಅದನ್ನ ವಾಪಾಸ್ ತರುವ ಪ್ರಯತ್ನ ನಡೆಯಲಿದೆ ಎಂದರು.
ಕಾಗೋಡು ತಿಮ್ಮಪ್ಪನವರಿಗೆ ಡಾಕ್ಟರೇಟ್ ನೀಡಿರುವುದು ತಡವಾಗಿದೆ. ಒತ್ತಡಕ್ಕೆ ಮಣಿದು ನೀಡಿಲ್ಲ. ಪ್ರಾಂಶುಪಾಲರೊಬ್ಬರು ಹೆಸರು ಪ್ರಸ್ತಾಪಿಸಿದ ನಂತರ ನನ್ನ ಗಮನಕ್ಕೆ ಬಂದು ಆ ಪ್ರಶಸ್ತಿಯನ್ನ ನೀಡಲಾಯಿತು.
ಪೊಲಿಟಿಕಲ್ ಷಣ್ಮುಖ ಎಂಬುವರ ಅಮಾನತ್ತಾಗಿದ್ದರು. ಅವರು ನ್ಯಾಯಾಲಯಕ್ಕೆ ರಿಟ್ ಪಿಟಿಷನ್ ಹಾಕಲಾಗಿತ್ತು. ಇದಕ್ಕೂ ಸ್ಟೇ ಬಂದಿದ್ದು ಕ್ರಮ ಕೈಗೊಳ್ಳಲಾಗೊಲ್ಲ ಎಂದು ಸ್ಪಷ್ಟೊಡಿಸಿದರು.
Post a Comment