ಸಭೆಯಲ್ಲಿ ಸಚಿವರ ಮತ್ತು ಅಧಿಕಾರಿಗಳ ನಡುವೆ ಜುಗಲ್ ಬಂಧಿ, ಎಂಪಿ ಆಗಮನಕ್ಕೆ ಎದ್ದು ನಿಂತ ಇಡೀ ಸಭೆ

 


ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಂದ ಪ್ರಗತಿ ಪರಿಶೀಲನ ಸಭೆ ನಡೆದಿದೆ. ಸಭೆಯಲ್ಲಿ ಅಧಿಕಾರಿಗಳಿಗೆ ಸಕ್ಕತ್ ಕ್ಲಾಸ್ ತೆಗೆದುಕೊಂಡಿದ್ದಾರೆ. 


42249 ಜನ ಜಿಲ್ಲೆಯಲ್ಲಿ ಕಾರ್ಮಿಕ ಕಾರ್ಡ ಹೊಂದಿದ್ದಾರೆ. ಕೈಗಾರಿಕೆಯಲ್ಲಿ ಎಷ್ಟು ಜನ ಕಾಂಟ್ರಾಕ್ಟ್ ಹೊಂದಿದ್ದಾರೆ ಎಷ್ಟು ಜನ ಖಾಯಂ ಕೆಲಸ ಮಾಡುತ್ತಿದ್ದಾರೆ. ನೇಚರ್ ಆಫ್ ವರ್ಕ್ ಕೇಳಲಿಲ್ಲ ಯಾಕೆ? ರಿನಿವಲ್ ಹೇಗೆ ಮಾಡಿದ್ದೀರಿ ಎಂದು ಲೇಬರ್ ಅಧಿಕಾರಿಗೆ ಪ್ರಶ್ನಿಸಿದರು‌ 


ಸಮ ಕೆಲಸಕ್ಕೆ ಸಮವಾದ ಸಂಬಳದ ಅನುದಾನ ನೀಡಲಾಗುತ್ತದೆ ಎಂದು ಅಧಿಕಾರಿಗಳು ರಿನಿವಲ್ ಗೆ ನೀಡುವಾಗ ಪರಿಶೀಲಿಸುವುದಿಲ್್ವ ಎಂದು ಸಚಿವ ಗರಂ ಆದರು. ಪರವಾನಗಿ ನವೀಕರಣಕ್ಕೆ ಅರ್ಜಿ ಹಾಕಿದ ತಕ್ಷಣ ಏನು ಕೆಲಸ ಮಾಡ್ತೀರ? ತಪಾಸಣೆ ಮಾಡಿಲ್ಲ ಯಾಕೆ? ಎಷ್ಟು ವರ್ಷ ತಾತ್ಕಾಲಿಕವಾಗಿ ಅವರು ಕೆಲಸ ಮಾಡ್ತಾರೆ. 


ಶೀಘ್ರದಲ್ಲಿಯೇ ಸರಿಪಡಿಸಿ.ಗ್ರಾಜ್ಯುಟಿ ಪೆಂಡಿಂಗ್ ಎಷ್ಟು? ಎಂದು ಕೇಳಿದ ಸಚಿವರಿಗೆ ಉತ್ತರಿಸಿದ ಅಧಿಕಾರಿ ಜುಲೈನಲ್ಲಿ 41 ಕೇಸ್ ಇತ್ತು. 38 ಬಾಕಿ ಇದೆ. ಉಗುಳು ಹಚ್ಚಿ ಸಚಿವರ ಮುಂದೆ ಅಂಕಿ ಅಂಶ ಹೇಳಲು ಒದ್ದಾಡಿದ ಅಧಿಕಾರಿಯ ವಿರುದ್ಧ ಗರಂ ಆದ ಸಚಿವರು, ಮಿನಿಮನ್ ವೇಜಸ್ ಆಕ್ಟ್ ಫಾಲೋ ಮಾಡದೆ ಇರುವ ಸಂಸ್ಥೆಯ ವಿರುದ್ಧ ಏನು ಕ್ರಮ? ಎಂದು ಕೇಳಿದರು. 


ಸಚಿವರ ಅಧಿಕಾರಿಗಳ ನಡುವೆ ಜುಗಲ್ ಬಂಧಿ

ಕಾಂಟ್ರಾಕ್ಟ್ ಲೈಸೆನ್ಸ್ ರದ್ದು ಪಡಿಸಲು ಆಕ್ಟ್ ನಲ್ಲಿ ಇಲ್ಲ. ಎಂದು ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡ ಸಚಿವರ ನಡುವೆ ಜುಗಲ್ ಬಂಧಿ ನಡೆದಿದೆ. ಕಾಂಟ್ರ್ಯಾಕ್ಟ್ ಲೈಸನ್ಸ್ ಕೊಡಲು ಅಧಿಕಾರ ಇದ್ದರೆ ಉಲ್ಲಂಘನೆಯಾದಾಗ ಯಾಕೆ ರದ್ದುಪಡಿಸಲು ಆಗೊಲ್ಲ ಎಂದು ಸಚಿವರು ಕ್ಲಾಸ್ ತೆಗೆದುಕೊಂಡರು.


ಕನಿಷ್ಠ ವೇತನ ನೀಡದ ಖಾಸಗಿ ಸಂಸ್ಥೆಗಳಿಗೆ ನವೀಕರಣ ಕೊಡ ಬಾರದು. ಈ ವಿಚಾರದಲ್ಲಿ ವಾದ ನಡೆಸಿದ ಅಧಿಕಾರಿಗಳಿಗೆ ಎಲ್ಲರಿಗೂ ನೋಟಿಸ್ ಕೊಡಲು ಸಚಿವ ಲಾಡ್ ಸೂಚನೆ ನೀಡಿದರು. ಲೇಬರ್ ಕಮಿಷನರ್ ಗೋಪಾಲಕೃಷ್ಣರಿಗೆ ಸೂಚನೆ. 


ಕಾರ್ಮಿಕ ಇಲಾಖೆಯ ಬಿಒಗಳ ವುರುದ್ಧ ಗರಂ

ಬಾಲಕಾರ್ಮಿಕರಿಗೆ ಕೆಡಿಪಿ ಬಿಇಒಗಳಿಗೆ ಮನೆಕಖುಹಿಸಲಾಗುವುದು. 58 ಲಕ್ಷ ಕಾರ್ಡ್ ಕೊಟ್ಟಿದ್ದಕ್ಕೆ ನಿಮಗೂ ಮತ್ತು ಅಧಿಕಾರಿಗಳಿಗೆ ಮನೆಗೆ ಕಳುಹಿಸಲಾಗುವುದು ಎಂದು ಗರಂ ಆದ ಸಚಿವರು. 8.63 ಕೋಟಿ ಕಾರ್ಮಿಕ ನಿಧಿಯಿಂದ ಶಿವಮೊಗ್ಗ ಜಿಲ್ಲೆಗೆ ಹಂಚಲಾಗಿದೆ ಎಂದು ಸಭೆಗೆ ತಿಳಿಸಿದರು. 


ಶಾಸಕ ಚೆನ್ನಿ ಮಾತು

ಹೊರರಾಜ್ಯದಿಂದ ಬರುವ ಕಾರ್ಮಿಕರ ಬಗ್ಗೆ ನೋಂದಣಿ ಆಗಬೇಕು ಎಂದು ಶಾಸಕ ಚೆನ್ನಬಸಪ್ಪ ಆಗ್ರಹ ಇದರ ಬಗ್ಗೆ ಕ್ರಮದ ಬಗ್ಗೆ ರಾಜ್ಯ‌ಮಟ್ಟದಲ್ಲಿ ಕ್ರಮ ಜರುಗಿಸೋಣ ಎಂದು ಕೋರಿದರು. 


ಕಾರ್ಮಿಕ ಹೆಲ್ತ್ ಸಂಬಂಧಪಟ್ಟಂತೆ ಕಾರ್ಮಿಕರ ಮಗ ಅಥವಾ ಮಗಳಿಗೆ ಕುಟುಂಬ ಪರಿಹಾರ ನೀಡುವಂತೆ ಶಾಸಕರ ಮನವಿ. ಅನಾಥ ಕಾರ್ಮಿಕ ಇಲಾಖೆಯಾಗಿದೆ ಶಿವಮೊಗ್ಗದಲ್ಲಿ. 


ಸಂಸದ ರಾಘವೇಂದ್ರ ಮಾತನಾಡಿ, 100 ಬೆಡ್ ನ ಇಎಸ್ಐ ಕಚೇರಿ ನಿರ್ಮಾಣ ಆರಂಭವಾಗಿ ಐದು ವರ್ಷ ಆಗಿದೆ. ಪೂರ್ಣ ಗೊಳಿಸಲು ಮನವಿ. ಸ್ಟಾಫ್ ಕೊಡಿ. ಭದ್ರಾವತಿಯಲ್ಲಿ ಕಾರ್ಮಿಕ ಭವನ ಪೂರ್ಣಗೊಳಿಸಿ. ಈ ತಿಂಗಳ್ಲೇ ಉದ್ಘಾಟನೆ ಎಂದು ಸಚಿವರು ಭರವಸೆ ನೀಡಿದರು. 


ಹುದ್ದೆ ಭರ್ತಿಗೆ ಮನವಿ

ಇಎಸ್ಐ 12 ಜನ ವೈದ್ಯರಲ್ಲಿ 4 ಜನರ ಖಾಲಿಯಿದೆ. ಭರ್ತಿಮಾಡಿ, ಶಿಕಾರಿಪುರ, ಸಾಗರ ಗಾರ್ಮೆಂಟ್ ಇದೆ ಡಿಸ್ಪೆನ್ಸರಿ ಕೊಡಿ ಎಂದು ಮನವಿ ಮಾಡಿಕೊಂಡ ಸಂಸದರಿಗೆ ಸ್ಪಂಧಿಸಿದ ಸಂತೋಷ್ ಲಾಡ್ ಮನವಿಗೆ ಸ್ಪಂಧಿಸಿದರು. ತೀರ್ಥಹಳ್ಳಿ, ಹೊಸನಗರ ಸಾಗರಕ್ಕೆ ಒಬ್ಬ ನಿರೀಕ್ಷರನ್ನ ನೀಡಿ ಎಲ್ಲರೂ ಶಿವಮೊಗ್ಗಕ್ಕೆ ಬರುವಂತಾಗಿದೆ ಎಂದು ಎಂಪಿ ಮನವಿ ಮಾಡಿದರು. 

ಇಎಸ್ಐ ಬಾಕಿ ಬಿಲ್ ಗೆ ಎಂಎಲ್ ಸಿ ಡಾ.ಧನಂಜಯ ಸರ್ಜಿ ನೀಡುವಂತೆ ಕೋರಿದರು. ಯಾವುದಾರೆ ಉಳಿದಿದ್ದರೆ


ಎಂಪಿಗೆ ಎದ್ದು ನಿಂತ ಸಭೆ.

ಬಹಳ ಗಂಭೀರವಾಗಿ ನಡೆಯುತ್ತಿದ್ದ ಸಭೆಯ ಮದ್ಯೆ ಸಂಸದರ ರಾಘವೇಂದ್ರ ಅವರ ಪ್ರವೇಶವಾಗುತ್ತಿದ್ದಂರೆ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆ ಎದ್ದು ನಿಂತಿದ್ದು ಸಹ ಸಭೆಯ ಆಕರ್ಷಕ ಬಿಂದುವಾಗಿತ್ತು.  




Post a Comment

Previous Post Next Post