ವಿದ್ಯುತ್ ಆಘಾತಕ್ಕೆ (Electric shock) ಯುವಕ ಬಲಿಯಾಗಿದ್ದಾನೆ. ಭದ್ರಾವತಿ ತಾಲೂಕಿನ ಕನಸಿನ ಕಟ್ಟೆ ಗ್ರಾಮದಲ್ಲಿ ನಡೆದ ದುರ್ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕು ಕನಸಿನಕಟ್ಟೆಯಲ್ಲಿ ಪಂಪ್ ಸೆಟ್ (pump set) ಆನ್ ಮಾಡಲು ಹೋದಾಗ ನಡೆದ ದುರ್ಘಟನೆ ನಡೆದಿದ್ದು, ದರ್ಶನ್(೨೧) ಮೃತಪಟ್ಟ ದುರ್ದೈವಿಯಾಗಿದ್ದಾನೆ.
ನಿನ್ನೆ ತಡರಾತ್ರಿ ನಡೆದ ದುರ್ಘಟನೆಯಲ್ಲಿ ದರ್ಶನ್ ಮೃತಪಟ್ಟಿದ್ದಾನೆ. ದರ್ಶನ್ ಅಂತಿಮ ವರ್ಷದ ಪದವಿಯಲ್ಲಿ ಓದುತ್ತಿದ್ದನು. ಹೊಳೆಹೊನ್ನೂರು ಸಮೀಪದ ಕೊಪ್ಪದ ಪದವಿ ಕಾಲೇಜಿನಲ್ಲಿ ದರ್ಶನ್ ವಿದ್ಯಾಭ್ಯಾಸ ನಡೆಸುತ್ತಿದ್ದರು. ಕನಸಿನಕಟ್ಟೆ ಗ್ರಾಮದ ಮಲ್ಲಿಕಾರ್ಜುನ್ ಎಂಬುವರ ಪುತ್ರ ಈ ದರ್ಶನ್ ಆಗಿದ್ದಾನೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a Comment