ತಂದೆ ಮಾಡಿದ್ದ ಸಾಲಕ್ಕೆ ಮಗನ ಬಳಿ ಮುಂದಾಗಿದ್ದ ವ್ಯಕ್ತಿ ಕೊನೆಗೆ ಕೈಹಾಕಿದ್ದು ಕಿಡ್ನ್ಯಾಪ್ ಗೆ, ನಂತರ ಹಣದ ಬದಲಿಗೆ ವಾಹನವನ್ನ ಕಿತ್ತುಕೊಳ್ಳುವ ಸಂಬಂಧ ಬಲವಂತವಾಗಿ, 29, 30 ಫಾರಂಗೆ ಸಹಿ ಮಾಡಿಸಿಕೊಂಡಿರುವ ಘಟನೆ ವರದಿಯಾಗಿದೆ.
ಕಾಯಿಲೆಯಿಂದ ಬಳಲುತ್ತಿದ್ದ ಚಿಕ್ಕಲ್ ನಿವಾಸಿ ನಾಗೇಶ್ ಅವರ ತಂದೆ ಸಿದ್ದೇಗೌಡ ಕೊರೋನ ಹಿನ್ನಲೆಯಲ್ಲಿ ಮೃತಪಟ್ಟಿದರು ಅವರು ಮೃತಪಟ್ಟ ಮೇಲೆ ತಂದೆಯಿಂದ ಆಡಿಕೆ ಖರೀದಿ ಮಾಡಿದವರು ಸರಿಯಾಗಿ ಹಣವನ್ನು ವಾಪಾಸ್ ನೀಡದೇ ಇದ್ದುದರಿಂದ ಆಡಿಕೆ ಖರೀದಿ ಮಾಡಿದ ಗ್ರಾಹಕರಿಗೆ ನಾಗೇಶ್ ರವರೆ ಹಣವನ್ನು ಕೊಡಬೇಕಾಗಿತ್ತು. ಹಿರಿಯ ಸಮ್ಮುಖದಲೆ ಮಾತುಕತೆ ಮಾಡಿ ಗ್ರಾಹಕರಿಗೆ ಸ್ವಲ್ಪ ಸ್ವಲ್ಪ ಹಣವನ್ನು ಕೊಟ್ಟು ತೀರಿಸಲಾಗಿತ್ತು,
ಅದರಲ್ಲಿ, ಆಡಿಕೆ ಮಾರಾಟ ಮಾಡಿದ್ದ ಖಾಸೀಪ್ ರವರು ನಾಗೇಶ್ ರವರಿಗೆ ನಿಮ್ಮ ತಂದೆಯು ಬಳಿ 17 ಲಕ್ಷ ಹಣ ಕೊಡಬೇಕೆಂದು ಹೇಳಿದ್ದನು. ಅವರಿಗೆ ಅಷ್ಟೊಂದು ಹಣ ಕೊಡಲು ಆಗುವುದಿಲ್ಲ. ಎಂದು 11 ಲಕ್ಷ ಹಣವನ್ನು ಕೊಟ್ಟು ಇಷ್ಟೆ ಹಣ ಕೊಡಲು ಆಗುವುದು ಅಂತ ಹೇಳಿದ್ದರು. ನಂತರದ ದಿನಗಳಲ್ಲಿ ಖಾಸೀಪ್ ರವರು ಉಳಿದ ಹಣ ಕೊಡು ಎಂದು ಬೆನ್ನುಬಿದ್ದಿದ್ದರು.
ದಿನಾಂಕ 14/01/2025 ರಂದು ನಾಗೇಶ್ ಸರ್ವೋದಯ ಶಾಲೆಯ ರಸ್ತೆಯಲ್ಲಿರುವ ಪೆಟ್ ಪ್ಲಾನೆಟ್ ಆಸ್ಪತ್ರೆಯಲ್ಲಿ ಸಂತೋಷ ರವರ ನಾಯಿ ಮರಿಗೆ ಚಿಕಿತ್ಸೆ ಕೊಡಿಸಲು ಹೋದಾಗ ನಾಗೇಶ್ ರವರು ಆಸ್ಪತ್ರೆಯ ಹೊರಗಡೆ ಮೊಬೈಲ್ ನಲ್ಲಿಮಾತನಾಡುತ್ತಿದ್ದರು. ಆರೋಫಿ ಖಾಸೀಪ್ ಇಬ್ಬರ ಜೊತೆ ಡಸ್ಟರ್ ಕಾರಿನಲ್ಲಿ ಬಂದು ಆತನನ್ನ ಕಿಡ್ನ್ಯಾಪ್ ಮಾಡಿದ್ದಾರೆ.
ಗಾಜನೂರಿನ ರಸ್ತೆಯ ಮೂಲಕ ಹಾಯ್ ಹೊಳೆ ಹತ್ತಿರದ ಒಂದು ತೋಟದ ಬಳಿ ಶೇಡ್ ಹತ್ತಿರ ಕರೆದುಕೊಂಡು ಹೋಗಿ ಹಣ ಕೊಡು ಅಂದರೆ ಕೊಡುತ್ತಿಲ್ಲ. ಈ ದಿವಸ ನಿನಗೆ ಜೀವಂತವಾಗಿ ಬಿಡುವುದಿಲ್ಲ, ಎಂದು ಕೈಗಳಿಂದ ಹೊಡೆದು ಅವಾಚ್ಯವಾಗಿ ಬೈದು ಬಲವಂತವಾಗಿ ನಾಗೇಶ್ ಬಳಿಯಿದ್ದ ಕಾರಿನ ಕೀ ಯನ್ನು ಕಿತ್ತುಕೊಂಡು ಕಾರನ್ನು ಆರೋಪಿ ಖಾಸೀಪ್ ನ ಹೆಸರಿಗೆ ಮಾರಾಟ ಮಾಡಿದಂತೆ ಫಾರಂ ನಂ29, 30 ಗೆ ಸಹಿ ಹಾಕಿಸಿಕೊಂಡಿದ್ದಾರೆ.
ಇವರ ವಿರುದ್ಧ ಕಠಿಣ ಕ್ರಮಜರುಗಿಸುವಂತೆ ನಾಗೇಶ್ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Post a Comment