ಎಣ್ಣೆ ಅಂಗಡಿ ಬೇಡ

 

ಗೋಪಾಳದ ಗೋಪಿಶೆಟ್ಟಿ ಕೊಪ್ಪದ ರಸ್ತೆಯಲ್ಲಿ ಮದ್ಯದಂಗಡಿ ಆರಂಭಿಸುವುದಕ್ಕೆ ವಿರೋಧ ವ್ಯಕ್ತವಾಗಿದೆ. ಅಲ್ಲಿ ನಾಗರೀಕ ಹಿತಾಸಕ್ತಿ ವೇದಿಕೆ ಜಿಲ್ಲಾಧಿಕಾರಿಗಳು ಮತ್ತು ಅಬಕಾರಿ ಅಧಿಕಾರಿಗಳಿಗೆ ಮನವಿ ನೀಡಿ ಮದ್ಯದಂಗಡಿ(MSIL) ಆರಂಭಿಸದಂತೆ ಮನವಿ ಮಾಡಿದ್ದಾರೆ. 


ಎಂಎಸ್ಐಎಲ್ ಆರಂಭದಿಂದ ಕುಡುಕರ ಹಾವಳಿ ಹೆಚ್ಚಾಗಲಿದೆ‌ ಅಲ್ಲೇ ಕುಳಿತು ಮದ್ಯ ಸೇವಿಸುವುದರಿಂದ ಇಲ್ಲಿ ಮಹಿಳೆಯರಿಗೆ ಮತ್ತು ಶಾಲಾ ಮಕ್ಕಳಿಗೆ ಓಡಾಡಲು ತೊಂದರೆ ಉಂಟಾಗಿದೆ. ಈ ಮದ್ಯದಂಗಡಿಯ 100 ಮೀಟರ್ ಸುತ್ತಳತೆಯಲ್ಲಿ ಶಾಲೆ, ಮಸೀದಿಗಳಿವೆ. 


100 ಮೀಟರ್ ಸುತ್ತಳತೆಯಲ್ಲಿ ಮದ್ಯದಂಗಡಿ ಬೇಡ ಇರವಾರದು ಎಂಬ ಉಲ್ಲೇಕವಿದ್ದರೂ ಕಾನೂನನ್ನ ಗಾಳಿಗೆ ತೂರಿ ಮದ್ಯದಂಗಡಿ ಆರಂಭಕ್ಕೆ ಗ್ರೀನ್ ಸಿಗ್ನಲ್ ಕೊಡುತ್ತಿರುವುದು ಶೋಚನೀಯ


ಅಲ್ಲದೆ ಈ ಜಾಗ ಕೋಮುಸೂಕ್ಷ್ಮ ಪ್ರದೇಶವೆಂದು ಈ ಹಿಂದೆ ಘೋಷಿಸಲಾಗಿದೆ. ಈ ಬಡಾವಣೆಯಲ್ಲೇ ಮದ್ಯದಂಗಡಿ ಕೊಟ್ಟಲ್ಲಿ ಕೋಮು ಪ್ರಚೋದನೆಯ ಪ್ರದೇಶವಾಗುವ ಸಧ್ಯತೆ ಇದೆ. ಹಾಗಾಗಿ ಮಂಜೂರಾದ ಮದ್ಯದಂಗಡಿ ಬಗ್ಗೆ ಮರು ಪರಿಶೀಲಿಸದಿದ್ದರೆ ಮುಙದಿನ ದಿನಗಳಲ್ಲಿ ವೇದಿಕೆ ಉಗ್ರ ಹೋರಾಟ ನಡೆಸಲಿದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.  

Post a Comment

Previous Post Next Post