ಸಿಗ್ನಲ್ ಬಳಿ ಬಸ್ ಇಳಿದ ಮಹಿಳಾ ಪ್ರಯಾಣಿಕರು, ನಂತರ ನಡೆದಿದ್ದೇನು?

 


ಪ್ರಯಾಣಿಕರು ಎಲ್ಲೆಂದರೆಲ್ಲಿ ಇಳಿಯುವುದರಿಂದ ಮುಂದಿನ ಪ್ರಯಾಣಕ್ಕೆ ಎಷ್ಟು ತೊಂದರೆಯಾಗಲಿದೆ ಎಂಬುದಕ್ಕೆ ನಗರದ ಬಸ್ ನಿಲ್ದಾಣದ ಬಳಿ ನಡೆದ ಘಟನೆ ಸಾಕ್ಷಿಯಾಗಿದೆ. 


ದಾವಣಗೆರೆಯಿಂದ ಮಂಗಳೂರಿಗೆ ಹೊರಟ ಕೆಎಸ್ಆರ್ ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಅಶೋಕ ವೃತ್ತದ ಬಳಿಯ ಸಿಗ್ನಲ್ ನಲ್ಲಿ ಬಸ್ ನಿಲ್ಲುತ್ತಿದ್ದಂತೆ ಇಳಿದಿದ್ದಾರೆ. ಇಳಿಯುವಾಗ ಇತರೆ ವಾಹನ ಬಂದು ಬಸ್ ಡೋರ್ ಗೆ ಗುದ್ದಿದೆ.


ಇದರಿಂದ ಬಸ್ ಡೋರ್ ಹಾಕಲು ಮತ್ತು ತೆಗೆಯಲು ಸಮಸ್ಯೆಯಾಗಿದ್ದರಿಂದ ಮಹಿಳೆಯನ್ನ ಹತ್ತಿಸಿಕೊಂಡು ಬಸ್ ನಿಲ್ದಾಣಕ್ಕೆ ಬಂದು ಇಳಿಸಿ ಸ್ಟ್ಯಾಂಡ್ ಇನ್ ಚಾರ್ಜ ಹತ್ತಿರ ಮಹಿಳೆಯನ್ನ‌ ಕರೆದೊಯ್ದಿದ್ದಾರೆ. ಸ್ಟ್ಯಾಂಡ್ ಇನ್ಚಾರ್ಜ ಗೆ ದೂರು ನೀಡಿದ್ದಾರೆ. ಸಿಗ್ನಲ್ ಬಳಿ ಮಹಿಳ ಪ್ರಯಾಣಿಕರು ಇಳಿದ ಪರಿಣಾಮ ಡೋರ್ ಜ್ಯಾಮ್ ಆಗಿದೆ.


ಮಂಗಳೂರಿನ ತನಕ ಹೋಗ ಬೇಕಿದೆ.ಡೋರ್ ಕೂರ್ತಯಿಲ್ಲ. ಹೇಗೆ ಹೋಗೋದು ನ್ಯಾಯ ಕೊಡಿಸಿ ಎಂದು ಹೇಳಿಕೊಂಡಿದ್ದಾರೆ. ಸಿಗ್ನಲ್ ಬಳಿ ವಾಹನ ಹತ್ತಿಇಳಿಯುವುದರಿಂದ ವಾಹನಗಳಿಗೆ ಹಾನಿಯಾಗುವುದಲ್ಲದೆ ಜೀವವೂ ಕಳೆದುಕೊಂಡಿರುವ ಘಟನೆಗಳಿವೆ.


ಹಾಗಾಗಿ ಪ್ರಯಾಣಿಕರು ಸಹ ಜಾಗರೂಕತೆಯಿಂದ ವಾಹನಗಳನ್ನ ನಿಲ್ದಾಣದಲ್ಲೇ ಹತ್ತಿ ಇಳಿಯುವುದರಿಂದ ಒಳ್ಳಯದಾಗಲಿದೆ.





Post a Comment

Previous Post Next Post