ವೈಕುಂಠ ಏಕಾದಶಿಗೆ ನಗರದ ವಿವಿಧ ದೇವಸ್ಥಾನಗಳಲ್ಲಿ ದೇವರಿಗೆ ವಿಶೇಷ ಅಲಂಕಾರ, ಪೂಜೆ

 

ದಂತಕಥೆಯ ಪ್ರಕಾರ, ಸುಕೇತುಮಾನ ಎಂಬ ರಾಜನಿದ್ದನು. ಅವನಿಗೆ ಮಕ್ಕಳಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ರಾಜನು ತನ್ನ ಮರಣದ ನಂತರ ತನಗೆ ಹಾಗೂ ತನ್ನ ಪಿತೃಗಳಿಗೆ ಮೋಕ್ಷವನ್ನು ನೀಡುವವರಾರು ಎಂದು ಚಿಂತೆಗೆ ಒಳಗಾಗುತ್ತಾನೆ. ಸಂತಾನವಿಲ್ಲದ ಚಿಂತೆಯಲ್ಲಿ ಬೇಸತ್ತ ರಾಜನು ತನ್ನ ರಾಜ್ಯವನ್ನು ತ್ಯಜಿಸಿ ಕಾಡಿಗೆ ಹೋದನು. ಈ ಸಮಯದಲ್ಲಿ ಅವನು ಋಷಿಗಳನ್ನು ಭೇಟಿಯಾದನು. ರಾಜನು ತನ್ನ ಸಮಸ್ಯೆಗಳನ್ನು ಋಷಿಗಳಿಗೆ ಹೇಳಿದನು. ಆ ಸಮಯದಲ್ಲಿ ಋಷಿಗಳು ರಾಜನಿಗೆ ಪುತ್ರದಾ ಏಕಾದಶಿ ಎಂದು ಕರೆಯಲಾಗುವ ವೈಕುಂಠ ಏಕಾದಶಿ ಪೂಜೆಯನ್ನು ಹಾಗೂ ಉಪವಾಸವನ್ನು ಆಚರಿಸಲು ಸಲಹೆ ನೀಡಿದರು. ಅದರಂತೆಯೇ ರಾಜನು ಪುತ್ರದ ಏಕಾದಶಿಯನ್ನು ವಿಧಿವಿಧಾನಗಳ ಪ್ರಕಾರ ಆಚರಿಸಿದನು. ಇದರಿಂದಾಗಿ ಅವನು ಪುತ್ರ ಸಂತಾನವನ್ನು ಪಡೆದುಕೊಂಡು ಸಂತೋಷದ ಜೀವನವನ್ನು ನಡೆಸಲು ಪ್ರಾರಂಭಿಸಿದನು.


ಹೀಗೆ ವೈಕುಂಠ ಏಕದಶಿಯ ಆಚರಣೆಯ ಬಗ್ಗೆ ಕಥೆಗಳಿವೆ. ಆತ್ಮಾವಲೋಕನ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಏಕಾದಶಿಯನ್ನು ಸೂಕ್ತ ದಿನವೆಂದು ಪರಿಗಣಿಸಲಾಗಿದೆ. ಬ್ರಹ್ಮಾಂಡದ ರಕ್ಷಕನಾಗಿರುವ ವಿಷ್ಣು ದೇವರನ್ನ ಪೂಜಿಸಲಾಗುತ್ತದೆ.ಈ ದಿನ ಮಾಡುವ ಉಪವಾಸ, ಪೂಜೆ, ದಾನದಂತಹ ಪುಣ್ಯ ಕಾರ್ಯಗಳು ಜನ್ಮ ಜನ್ಮಗಳ ಪಾಪಗಳನ್ನು ತೊಡೆದು ಹಾಕುತ್ತದೆ. ಈ ದಿನದ ಪೂಜೆಯಿಂದ ಜನನ - ಮರಣ ಚಕ್ರದಿಂದ ಮುಕ್ತಿ ಪಡೆಯುತ್ತಾರೆ ಎಂಬ ನಂಬಿಕೆಯಿದೆ.


ದೇಶದ ಮೂಲೆ ಮೂಲೆಗಳಲ್ಲಿ ವಿಷ್ಣುವಿನ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಆಚರಣೆ ಮಾಡಲಾಗುತ್ತದೆ. ನಗರದಲ್ಲಿನ ಪ್ರಮುಖ ದೇವಸ್ಥಾನಗಳಾದ ಜಯನಗರ ರಾಮ ಮಂದಿರ, ವೆಂಕಟೇಶ್ ನಗರ ವೆಂಕಟೇಶ್ವರ ದೇವಸ್ಥಾನ, ಬಿಬಿ ಸ್ಟ್ರೀಟ್ ನ ಪಲ್ಲಕ್ಕಿ ಮಠದ ವೆಂಕಟೇಶ್ವರ ದೇವಸ್ಥಾನ, ನವುಲೆ ವೆಂಕಟೇಶ್ವರ ದೇವಸ್ಥಾನ, ಕೋಟೆ ಆಂಜನೇಯ ದೇವಸ್ಥಾನ, ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀ ಲಕ್ಷ್ಮಿ ವೆಂಕಟರಮಣ ದೇವಮಂದಿರದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ, ಪೂಜೆ ಕಾರ್ಯಕ್ರಮ ನಡೆದಿದೆ. ಜಯನಗರದಲ್ಲಿ ರಥಬೀದಿ ಉತ್ಸವ ನಡೆದಿದೆ. 


ಪ್ರತಿ ಧನುರ್ಮಾಸದಲ್ಲಿ ವೈಕುಂಠ ಏಕಾದಶಿ ಆಚರಿಸಲಾಗುತ್ತದೆ. ಚಾತುರ್ಮಾಸ ಆರಂಭಕ್ಕೆ ವಿಷ್ಣುವಿನ ವೈಕುಂಠದ ಬಾಗಿಲು ಮುಚ್ಚಲ್ಪಟ್ಟು ಧನುರ್ಮಾಸದಿಂದ ವೈಕುಂಠ ಮುಂದಿನ 6 ತಿಂಗಳು ತೆರೆಯಲಾಗಿರುತ್ತದೆ.

Post a Comment

Previous Post Next Post