ಪೊಲೀಸರು ಗೋಹತ್ಯೆ ಕಾಯ್ದೆ ಕಾನೂನು ಪಾಲಿಸಲಿ-ಚೆನ್ನಬಸಪ್ಪ

 

ಚಾಮರಾಜ ಪೇಟೆಯಲ್ಲಿ ಗೋವಿನ ಕೆಚ್ಚಲನ್ನ ಕತ್ತರಿಸಿದನ್ನ ಮತ್ತು ನಂಜನಗೂಡಿನಲ್ಲಿ ದೇವರಿಗೆ ಬಿಟ್ಟ ಗೂಳಿಯ ಬಾಲವನ್ನ‌ಕತ್ತರಿಸಿದ ಘಟನೆಯನ್ನ ಖಂಡಿಸಿ ಇಂದು ಗೋ ರಕ್ಷಾ ಪರಿವಾರ ನಗರದಲ್ಲಿ ಬೃಹತ್ ಪ್ರತಿಭಟನಾ ನೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಮಾಡಲಾಯಿತು. 


ಗೋವಿನ ಕೆಚ್ಚಲು ಕೊಯ್ದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಿವಮೊಗ್ಗದಲ್ಲಿ ಗೋ ರಕ್ಷಾ ಪರಿವಾರದ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ನಗರದ ಗೋಪಿ ವೃತ್ತದಿಂದ ಡಿಸಿ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ಡಿಸಿ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.


ಗೋವುಗಳು ನಮ್ಮ ದೇವರಿದ್ದ ಹಾಗೆ. ದೇವರುಗಳನ್ನೇ ಚಾಕುವಿನಿಂದ ಇರಿದಿದ್ದಾರೆಂದು ಆರೋಪಿಸಿ ಆಕ್ರೋಶ ಹೊರಹಾಕಿದ್ದಾರೆ. ದುಷ್ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಆರೋಪಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾನೆಂದು ಹೇಳಿ ದಾರಿ ತಪ್ಪಿಸುವ ಕೆಲಸವಾಗಿದೆ ಎಂದು ದೂರು ಸಲ್ಲಿಸಲಾಗಿದೆ. 


ಗೋವಿನ ಮಾಲಿಕನಿಗೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕೆಂದು ಆಗ್ರಹಿಸಿದ ಗೋ ಪ್ರೇಮಿಗಳು, ಗೋ ರಕ್ಷಣೆಗೆ ರೈತರಿಗೆ ಬಂದೂಕು ಪರವಾನಿಗಿ ನೀಡಬೇಕು. ಗೋವನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಬೇಕು. ತಕ್ಷಣವೇ ಗೋಶಾಲೆಗೆ ಅನುದಾನ ನೀಡಬೇಕೆಂದು ಆಗ್ರಹಿಸಿದ್ದಾರೆ.


ಅಲ್ಲದೇ, ಗೋಹತ್ಯೆ ವಿರುದ್ಧ ಕಠಿಣ ಕಾನೂನು ಜಾರಿಗೆ ಆಗ್ರಹಿಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ರು


ಈ ವೇಳೆ ಮಾತನಾಡಿದ ಶಾಸಕ ಚೆನ್ನಬಸಪ್ಪ ಮುಸ್ಲೀಂರು ರಕ್ಷಣೆ ಮಾಡಲಿ ಎಂದು ಅಂಗಲಾಚಿ ಬೇಡಬೇಕು ಅಂತಹ ಪರಿಸ್ಥಿತಿ ಬರಲಿದೆ ಎಂದು ಹೇಳಿದ ಅವರು ಪ್ರತಿಭಟನೆ ಮೆರವಣಿಗೆಯಲ್ಲಿ ಎಚ್ಚರಿಸಿದ್ದಾರೆ. ನಂಜನಗೂಡಿನಲ್ಲಿ ದೇವರಿಗೆ ಬಿಟ್ಟ ಗೋವಿನ ಬಾಲಕ್ಲೆ ಕೈಹಾಕಿದ್ದಾರೆ, ಸಾಕಿದ ಹಸುವಿನ ಕೆಚ್ಚಲಿಗೆ ಕೈಹಾಕುದ್ದಾರೆ. ಸವಾಲು ಸ್ವೀಕರಿಸಿದ್ದಲ್ಲೇ ಆದರೆ ನೀವು ಪಾಕಿಸ್ತಾನಕ್ಕೆ ಹೋಗುವಂತಾಗುತ್ತದೆ ಎಂದು ಎಚ್ಚರಿಸಿದರು. 


ಯಾವುದೋ ಕಿಡಿಗೇಡಿ ಮಾಡಿರುವುದು ಎಂದು ಹೇಳಿ ಕೈತೊಳೆಯಬಾರದು ಹಿಂದೂ ಸಂಘಟಬೆಗಳ ಮೆರವಣಿಗೆ ಬರುವಾಗ ಮಹಾವೀರ ವೃತ್ತದಲ್ಲಿರುವ ಮಸೀದಿ ಬಳಿ ಪೊಲೀಸರು ರಕ್ಷಣೆಗೆ ನಿಲ್ಲುತ್ತಾರೆ. ನಮಗೆ ಅವರ ಕೈ, ಕಾಲು ಬಾಲಗಳು ಸಿಗಲ್ವಾ ಎಂದು ಗುಡುಗಿದರು. 


ಕಾಂಗ್ರೆಸ್ ಸರ್ಕಾರ ಮುಸ್ಲೀಂ ತುಷ್ಠೀಕರಣವೇ ಅವರ ಹಿಡನ್ ಅಜೆಂಡಾವಾಗಿದೆ. ನಮಗೆ ಭಾಷಣ ಮಾಡಿ ಹೋಗ್ತೀವಿ ಎಂದು ತಿಳಿಯಬೇಡಿ ಗೋವಿನ ಕೆಚ್ಚಲಿಗೆ ಕೈಹಾಕಿದ್ದೀರಿ ನಮಗೂ ಕೈ ಎಲ್ಲಿ ಹಾಕಬೇಕು ಎಂಬುದು ನಮಗೂ ಗೊತ್ತಿದೆ ಎಂದು ಗುಡುಗಿದರು. ಬಜಾರ್ ನಲ್ಲಿ 20 ಕೆಜಿ ಗೋಮಾಂಸ ಸಿಗುತ್ತೆ ಎಂದರೆ ಗೋಹತ್ಯೆ ನಡೆಯುವ ಬಗ್ಗೆ ಪೊಲೀಸ್ ಗೆ ಗೊತ್ತಿಲ್ವಾ? ಗೋಹತ್ಯೆ ಕಾನೂನು ಶಿವಮೊಗ್ಗದಲ್ಲಿ ಜಾರಿಯಿಲ್ವಾ ಎಂದು ಪ್ರಶ್ನಿಸಿದರು. 


ಮುಸ್ಲೀಂ ಸಮಾಜವೂ ಸಹ ಬಹುಸಂಖ್ಯಾತ ಹಿಂದೂಗಳ ಭಾವನೆಗೂ ಗೌರವ‌ಕೊಡುವಂತಾಗಬೇಕು. ಗೋವಿನ ಕಾಯುವ ಕೆಲಸ ಮಾಡಿ ಶ್ರೀ ಕೃಷ್ಣ ಪರಮಾತ್ಮನೂ ಗೋವನ್ನ ಕಾದಿದ್ದ. ಆ ಮೂಲಕ ಸಮಾಜಕ್ಕೆ ಉತ್ತಮ ಕೆಲಸ ಮಾಡಿದ್ದ ನೀವು ಮಾಡಿ ಎಂದು ಕಿವಿ ಮಾತು ಹೇಳಿದರು.  


ಹಿಂದೂ ಜಾಗೃತಿ ವೇದಿಕೆಯ ದೇವರಾಜ್ ಅರಳಹಳ್ಳಿ ಮಾತನಾಡಿ, ಜಿಲ್ಲೆಯಲ್ಲಿ ಗೋವಿನ ಹತ್ಯೆಯ ಬಗ್ಗೆ ಪೊಲೀಸರಿಗೆ ನಾವು ತಿಳಿಸಿದಾಗ ದಾಳಿ ಮಾಡ್ತಾರೆ. ದಾಳಿ ಮಾಡಿದ ಮರುದಿನವೇ ಗೋವಿನ ಮಾಂಸ ಮಾರಾಟ ಕೇಂದ್ರ ಒಪನ್ ಆಗುತ್ತೆ. ಗೋಹತ್ಯೆ ನಿಷೇಧ ಕಾಯ್ದೆ ಏನು ಎಂಬುದು ಪೊಕೀಸರಿಗೆ ಗೊತ್ತಿಲ್ವಾ ಎಂದು ಪ್ರಶ್ನಿಸಿದರು. 

Post a Comment

Previous Post Next Post