ಮೆಗ್ಗಾನ್ ನಲ್ಲಿ ಬಾಣಂತಿ ಸಾವು-ಕಾರಣವೇನು?


 ರಾಜ್ಯಾದ್ಯಂತ ಬಾಣಂತಿಯರ ಸಾವು ಕುರಿತಂತೆ ಬಿಜೆಪಿ ಅಂಕಿ ಅಂಶಗಳನ್ನ ಹಿಡಿದುಕೊಂಡು ಪ್ರತಿಭಟನೆ ನಡೆಸುತ್ತಿದೆ. ಇದುವರೆಗೂ ಶಿವಮೊಗ್ಗದಲ್ಲಿ ಯಾವುದೇ ಬಾಣಂತಿ ಸಾವುಗಳು ಬೆಳಕಿಗೆ ಬಂದಿರಲಿಲ್ಲ. 


ಆದರೆ ನಿನ್ನೆ ಶಿವಮೊಗ್ಗ ಮೆಗ್ಗಾನ್ ಹೆರಿಗೆ ವಾರ್ಡ್ ನಲ್ಲಿ ಬಾಣಂತಿ ಸಾವು ಬೆಳಕಿಗೆ ಬಂದಿದೆ. ಆದರೆ ವೈದ್ಯಾಧಿಕಾರಿ ಡಿಎಸ್ ಸಿದ್ದನಗೌಡರು ಈ ಸಾವು ಔಷಧಿಯ ಹೆಚ್ಚುಕಡಿಮೆಯಿಂದ ಅಲ್ಲ ಬದಲಿಗೆ ರಕ್ತ ಹೆಪ್ಪುಗಟ್ಟಿ ಸತ್ತಿರುವುದಾಗಿ ಸ್ಪಷ್ಟ ಪಡಿಸಿದ್ದಾರೆ.

ಎರಡು ದಿನಗಳ ಹಿಂದೆ ಹರಿಹರದ ಕವಿತ ಎಂಬ ಮಹಿಳೆ ತನ್ನ ಎರಡನೇ ಹೆರಿಗೆಗಾಗಿ ಮೆಗ್ಗಾನ್ ಗೆ ಬಂದು ದಾಖಲಾಗಿದ್ದರು. ನಿನ್ನೆ ಬೆಳಗ್ಗಿನ ಜಾವ 4 ಗಂಟೆಗೆ ಹೊಟ್ಟೆನೋವು ಕಾಣಿಸಿಕೊಂಡ ಪರಿಣಾಮ ಹೆರಿಗೆಗೆ ಸಿದ್ದಪಡಿಸಿಕೊಳ್ಳಲಾಗಿತ್ತು. ಸುಮಾರು 8 ಗಂಟೆಗೆ ಕವಿತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. 

ಸುಮಾರು ರಕ್ತದ ಹೆಪ್ಪುಗಟ್ಟುವಿಕೆ ದಿಡೀರ್ ಎಂದು ಕಾಣಿಸಿಕೊಂಡ ಪರಿಣಾಮ ಬಾಣಂತಿ ಕವಿತ ಸಾವುಕಂಡಿದ್ದಾಳೆ. ಈ ಕಾಯಿಲೆ ದಿಡೀರ್ ಎಂದು ಕಾಣಿಸಿಕೊಂಡು ಬಾಣಂತಿಯನ್ನೆ ಬಲಿಪಡೆದಿದೆ. ಆದರೆ ಆಕೆಯ ಗಂಡನ ಮನೆಯವರಾಗಲಿ, ತಾಯಿ ಮನೆಯವರಾಗಲಿ ದೂರು ದಾಖಲಿಸದೆ ಇರುವುದರಿಂದ ಯಾವ ಕ್ರಮ ಇಲ್ಲದಂತಾಗಿದೆ. 

ವರ್ಷದ ಮೊದಲ ಬಾಣಂತಿ ಸಾವು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ಹಾಗೂ ಶಿಕ್ಷಣ ಸಚಿವ ತವರು ಜಿಲ್ಲೆಯಲ್ಲೇ ಸಂಭವಿಸಿದೆ. ಮಗು ಹುಟ್ಟುವಾಗಲೇ 3 ಕೆಜಿ ಇದ್ದು ಆರೋಗ್ಯವಾಗಿದೆ. ಆದರೆ ಕಣ್ಣು ತೆರೆಯುವ ಮುನ್ನವೇ ತಾಯಿಯನ್ನ ಕಳೆದುಕೊಂಡ ಕಂದಮ್ಮ ಅನಾಥವಾಗಿದೆ.‌

Post a Comment

Previous Post Next Post