ಮೂರು ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟ

 


ಡಿ.19 ರಂದು ಕಡಿತಲೆ ನತ್ತು ಸಾಗಾಣಿಕೆ ಕಾಮಗಾರಿ ಸ್ಥಗಿತಗೊಳಿಸುವ ಕುರಿತು ಸುದ್ದಿಗೀಷ್ಠಿ ನಡೆಸಿ ಡಿ.19ವರಂದು ಪ್ರತಿಭಟನೆ ನಡೆಸಿದರೂ ರಾಜ್ಯ ಎಂಪಿಎಂ ಮತ್ತು ಕೆಎಫ್ ಡಿಸಿ ಅರಣ್ಯ ನೆಡುತೋಪು ಗುತ್ತಿಗೆದಾರರ ಸಮಸ್ಯೆ ಬಗೆಹರಿಸಿಲ್ಲ ಎಂದು ಗುತ್ತಿಗೆದಾರರ ಕ್ಷೇಮಾಭಿವೃದ್ದಿ ಟ್ರಸ್ಟ್ ಸಂಘದ ಧರ್ಮೇಂದ್ರ ಶಿರೋಳ್ ಆರೋಪಿಸಿದರು. 


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಹೋರಾತ್ರಿ ಧರಣಿ ನಡೆಯುವ ವೇಳೆ ನಿಗಮದ ಅಧ್ಯಕ್ಷರು ಸ್ಥಳಕ್ಕೆ ಬಂದು ಲಿಖಿತ ರೂಪದಲ್ಲಿ ಭರವಸೆ ನೀಡಿದ್ದರು. ಧರಣಿ ಹಿಂಪಡೆಯಲಾಯಿತು. ಅವರು ಒಂದು ವಾರ ಸಮಯ ತೆಗೆದುಕೊಂಡಿದ್ದರು. ಪ್ರತಿಭಟನೆ ಹಿಂಪಡೆದು ಇವತ್ತಿಗೆ 13 ದಿನ ಕಳೆದಿದೆ. ಆದರೆ ಸಮಸ್ಯೆ ಬಗೆಹರಿಸಲಿಲ್ಲ.


ಇ-ಟೆಂಡರ್ ನಡೆಸಿ ಗುತ್ತಿಗೆದಾರರಿಗೆ 5-6 ತಿಂಗಳವರೆಗೆ ಕೆಲಸ ಪೂರೈಸಲು ತೀರ್ಮಾನಿಸಿದಂತೆ ಕೆಲಸ ನೀಡಲಾಗುತ್ತಿಲ್ಲ. ಕೆಕಸ ಸ್ಥಗಿತಗೊಳಿಸಲಾಗಿದೆ. ಭದ್ರತಾ ಠೇವಣಿ ವಾಪಾಸ್ ನೀಡದೆ ಸ್ಥಗಿತಗೊಳಿಸಲಾಗಿದೆ. ಮುಂದಿನ ಆದೇಶದ ಎಂಬ ಉಲ್ಲೇಖದಿಂದಾಗಿ ಸ್ಪಷ್ಟತೆಯಿಲ್ಲದ ಕಾರಣ ಗುತ್ತಿಗೆದಾರರಿಗೆ ಸಮಸ್ಯೆಯಾಗಿದೆ. ಇವತ್ತಿಗೆ ಕ್ಲಿಯರ್ ಆದೇಶಗಳಿಲ್ಲದ ಕಾರ ಗುತ್ತಿಗೆದಾರರರು ಅತಂತ್ರದಲ್ಲಿದ್ದಾರೆ ಎಂದು ದೂರಿದರು.


ಮತ್ತೊಮ್ಮೆ ಕೆಎಫ್‌ಡಿಸಿ ನಿಗಮ ಮೂರು ದಿನಗಳ ಒಳಗೆ ಸರಿಯಾದ ಪರಿಹಾರ ನೀಡದಿದ್ದರೆ ಸಂಘ ಉಗ್ರ ಹೋರಾಟ ನಡೆಸಲಿದೆ. 60-70 ಜನ ಗುತ್ತಿಗೆದಾರರು, 3500 ಕಾರ್ಮಿಕರಿದ್ದಾರೆ. ಇವರುಗಳ ಪರವಾಗಿ ಇಂದು ಸಙಬಂಧಪಟ್ಟ ಎಂದು ಎಚ್ಚರಿಸಿದರು. 


Post a Comment

Previous Post Next Post