ಭದ್ರಾವತಿ ವಿಭಾಗದ ಶಾಂತಿಸಾಗರ ವಲಯದ ಗುಡಂಘಟ್ಟದ ಸರ್ವೆ ನಂ. 43ರ ರಾಜ್ಯ ಅರಣ್ಯದಲ್ಲಿ 15 ಎಕರೆ ಒತ್ತುವರಿ ಮಾಡಿ ನೆಡಲಾಗಿದ್ದ ಸುಮಾರು 3 ಸಾವಿರ ಅಡಕೆ ಸಸಿ ಮತ್ತು ಬಾಳೆಯನ್ನು ಅರಣ್ಯಾಧಿಕಾರಿಗಳು ತೆರವು ಮಾಡಿ ಅರಣ್ಯ ಭೂಮಿಯನ್ನು ಮರು ವಶಕ್ಕೆ ಪಡೆದಿದ್ದಾರೆ. ರಾಜ್ಯ ಫಾರೆಸ್ಟ್ ( State forest) ಭದ್ರಾಪುರ ವ್ತಾಪ್ತಿಯಲ್ಲಿ ಬರುವ ಈ ಸ್ಥಳ ಹಲವು ವರ್ಷಗಳಿಂದ ಅರಣ್ಯ ಇಲಾಖೆ ಹಾಗೂ ರೈತರ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು. ಎರಡು ತಿಂಗಳ ಹಿಂದೆ ಇಲಾಖೆ ಕಾರ್ಯಾಚರಣೆ ನಡೆಸಿ ರೈತರ ತೀವ್ರ ಪ್ರತಿರೋಧ ಬಂದ ಹಿನ್ನೆಲೆ ಕಾರ್ಯಾಚರಣೆ ನಿಲ್ಲಿಸಿತ್ತು. ಆದರೆ ಹೈಕೋರ್ಟ್ ಹಾಗೂ ಸಿಸಿಎಫ್ ( conservator of forest ) ಮೇಲ್ಮನವಿ ಪ್ರಾಧಿಕಾರದಲ್ಲೂ ರೈತರ ಮನವಿ ರಿಜೆಕ್ಟ್ ಆದ್ದರಿಂದ ಒತ್ತುವರಿ ತೆರವು ಮಾಡಿದ್ದಾರೆ.
ರೈತರೇ ಸ್ವಯಂಪ್ರೇರಿತರಾಗಿ ಭೂಮಿ ಬಿಟ್ಟುಕೊಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದರು.
Post a Comment