ಹಿಂದು ಧರ್ಮದ ಪೂಜ್ಯ ಭಾವನೆಗೆ ಸಂಕೇತವಾದ ಗೋವಿನ ಕೆಚ್ಚಲನ್ನ ಕೋಯ್ದ ದುರುಳರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಗೋಪ್ರೇಮಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಿಂದೂ ಧರ್ಮದ ಭಾವೈಕ್ಯತೆಯ ಪೂಜ್ಯ ಸಂಕೇತವಾದ ಗೋವಿನ ಮೇಲೆ ಮತಾಂಧ ದುರುಳರು ಗೋವಿನ ಕೆಚ್ಚಲುಗಳನ್ನು ಕೋಯ್ದು ವಿಕೃತ ಮೇರೆದಿದ್ದು ಅದೇ ರೀತಿ ಕೊಳ್ಳೆಗಾಲದಲ್ಲೂ ಸಹ ಗೋವಿನ ಆಹಾರದಲ್ಲಿ ಸ್ಪೋಟಕವಿಟ್ಟು ಗೋವು ಆಹಾರ ಸೇವಿಸಿದಾಗ ಅದರ ಬಾಯಿ ಚಿದ್ರವಾಗಿರುವ ಘಟನೆ ನಡೆದಿದೆ.
ಈ ವಿಲಕ್ಷಣ ಘಟನೆಯನ್ನು ನೋಡಿ ಸಂತೋಷಪಡುವಂತಹ ವಿಕೃತ ಮತಾಂಧರನ್ನು ಉಗ್ರವಾಗಿ ಶಿಕ್ಷಿಸಬೇಕಾಗಿ ಗೋಪ್ರೇಮಿಗಳು ಮನವಿಯಲ್ಲಿ ಆಗ್ರಹಿಸಿದ್ದಾರೆ. ಈ ದೇಶದಲ್ಲಿ ಗೋವನ್ನು ಮಾತೃ ಪೂಜ್ಯ ಸ್ವರೂಪಿಯಾಗಿ ನೋಡುತ್ತಿದ್ದು ಪುಣ್ಯ ಕಾರ್ಯಗಳಿಗೆ ಹಾಗೂ ಅದರ ಹಾಲನ್ನು ಪ್ರತಿಯೊಬ್ಬರು ಸೇವಿಸುತ್ತಿದ್ದು ಗೋವಿನ ಸಂತತಿಯನ್ನು ಉಳಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ.
ಹಾಗಾಗಿ ರಾಜ್ಯ ಸರ್ಕಾರ ಕಸಾಯಿ ಖಾನೆಯನ್ನು ಮುಚ್ಚಬೇಕು ಹಾಗೂ ಹೊಸದಾಗಿ ಯಾವುದೇ ಕಸಾಯಿ ಖಾನೆಗಳಿಗೆ ಪರವಾನಿಗೆ ನೀಡಬಾರದು ಹಾಗೂ ಈ ವಿಕೃತ ಕೃತ್ಯವನ್ನು ಎಸಗಿದವರಿಗೆ ಕಠಿಣ ಶಿಕ್ಷೆಯನ್ನು ನೀಡಿ ಮುಂದಿನ ದಿನಗಳಲ್ಲಿ ಈ ಕೃತ್ಯಗಳನ್ನು ನಡೆಯದೆ ಇರುವ ಹಾಗೆ ಸರ್ಕಾರ ಜಾಗ್ರತೆ ವಹಿಸಬೇಕು. ಹಿಂದೂ ಬಾಂಧವರ ಭಾವನೆಗಳಿಗೆ ಧಕ್ಕೆ ಬರದೆ ಇರುವ ಹಾಗೆ ನೋಡಿಕೊಳ್ಳಬೇಕಾಗಿ ಈ ಮೂಲಕ ತಮ್ಮಲ್ಲಿ ಮನವಿ ಸಲ್ಲಿಸುತ್ತೇವೆ.
Post a Comment