ಸತೀಶ್ ಮತ್ತು ಆರುಂಡಿ ಶ್ರೀನಿವಾಸ್ ಗೆಪ್ರಶಸ್ತಿ


 ಇಬ್ಬರು ಪ್ರತಿಕಾ ಸ್ನೇಹಿತರಿಗೆ ಪ್ರಶಸ್ತಿಗಳನ್ನ ಘೋಷಿಸಲಾಗಿದೆ. 


ವಾರ್ತಾ ಇಲಾಖೆಯು ಅಭಿವೃದ್ಧಿ ಪತ್ರಿಕೋದ್ಯಮಕ್ಕಾಗಿ ನೀಡುವ ಪ್ರಶಸ್ತಿಯನ್ನು ಶಿವಮೊಗ್ಗದ ದಿ ಹಿಂದೂ ಪತ್ರಿಕೆಯ ಹಿರಿಯ ವರದಿಗಾರ ಜಿ.ಟಿ. ಸತೀಶ್ ಅವರಿಗೆ ಲಭಿಸಿದರೆ


ಹಿರಿಯ ಪತ್ರಕರ್ತ ಆರುಂಡಿ ಶ್ರೀನಿವಾಸ್ ಮೂರ್ತಿ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯ ೨೦೨೪ ನೇ ಸಾಲಿನ ವಾರ್ಷಿಕ ಪ್ರಶಸ್ತಿ ಲಭಿಸಿದೆ.


ಕಳೆದ ಎರಡು ದಶಕಗಳಿಂದ ಶಿವಮೊಗ್ಗ ಹಲವಾರು ಪತ್ರಿಕೆಗಳಲ್ಲಿ ವರದಿಗಾರರಾಗಿ, ಲಂಕೇಶ್ ಪತ್ರಿಕೆ ಸೇರಿದಂತೆ ಅನೇಕ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಅಂಕಣ ಬರಹಗಳ ಮೂಲಕ ಪತ್ರಕರ್ತರಾಗಿ ಕೆಲಸ ಮಾಡುತ್ತಿರುವ ಆರುಂಡಿ ಶ್ರೀನಿವಾಸ್ ಮೂರ್ತಿ ಲೇಖಕರೂ, ಕವಿಗಳೂ ಆಗಿದ್ದಾರೆ.


ಶ್ರಿನಿವಾಸ್‌ಮೂರ್ತಿ ಅವರ ’ಕಪ್ಪುಮಣ್ಣಿನ ಕಣ್ಣು’ ಕಥನ ಕೃತಿ, ’ಮೊಡಮೆ ಮತ್ತು ನಾನು’ , ’ಹುಣ್ಣಿಮೆ ಪದ್ಯಗಳು’ ಕವನ ಸಂಕಲನಗಳು ಪ್ರಕಟಗೊಂಡಿವೆ.


ಕೇವಲ ಸುದ್ದಿಬರಹಗಳಲ್ಲಿ ಅಷ್ಟೆ ಅಲ್ಲದೆ ರಂಗಭೂಮಿ, ಜನಪದ ಕ್ಷೇತ್ರಗಳ ಬಗ್ಗೆ ಅತೀವ ಅಸಕ್ತಿ ಹೊಂದಿರುವ ಶ್ರೀನಿವಾಸ್ ಮೂರ್ತಿ ವಿಮರ್ಶಾ ಬರಹಗಳಲ್ಲೂ ಸಿದ್ದಹಸ್ತರು.


ಇವರ ವೃತ್ತಿ ಕೌಶಲ್ಯ ಮತ್ತು ಸುದೀರ್ಘ ಕಾಲದ ಸೇವೆಯನ್ನು ಪರಿಗಣಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿಯು ೨೦೨೪ ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ಗೌರವಿಸಿದೆ.

Post a Comment

Previous Post Next Post