ಗೂಡಂಗಡಿಯ ಮುಂದೆ ರಾಶಿ ರಾಶಿ ಕಸ!


ಪುಟ್ಬಾತ್ ಮೇಲೆ ಅನಧಿಕೃತವಾಗಿ ಹಾಕಿಕೊಂಡಿದ್ದ ಗೂಡಂಗಡಿಗಳನ್ನ ತೆರವುಗೊಳಿಸಲು ಪಾಲಿಕೆ ಒಳ್ಳೆಯ ಕೆಲಸಕ್ಕೆ ನಾಂದಿ ಹಾಡಿದೆ. ಫುಟ್ ಪಾತ್ ಮೇಲೆ ಅಂಗಡಿಗಳನ್ನ ಹಾಕಬೇಡಿ ಎಂದರೂ ಕೆಲ ರಾಜಕಾರಣಿ, ಕೆಲ ಅಡ್ಜಸ್ಟ್ ಮೆಂಟ್ ಗಳಿಂದ ಗೂಡಂಗಡಿಗಳ ಹಾವಳಿ ಹೆಚ್ಚಿದ್ದವು. ಮಾನವೀಯತೆ ದೃಷ್ಠಿಯಿಂದಲೂ ಗೂಡಂಗಡಿಗೆ ಅವಕಾಶಕೊಡಲಾಗಿತ್ತು. 


ಆದರೆ ಪಾಲಿಕೆಯವರು ನಗರದ ಎಪಿಎಂಸಿ ಹಿಂಭಾಗದ ಗೇಟ್ ಬಳಿಯ ಗೂಡು ಅಂಗಡಿ ತೆರವು ಮಾಡಲು ಏನು‌ಮಾಡಿದ್ರು ಎಂದರೆ ನೀವೇ ಅಚ್ಚರಿ ಪಡ್ತೀರ. ಅಂಗಡಿಗಳನ್ನು ತೆರವು ಗೋಳಿಸಲು ಪಾಲಿಕೆ ರಾಶಿ ರಾಶಿ ಕಸವನ್ನು ತಂದು ಅಂಗಡಿಗಳ ಮುಂದೆ ಹಾಕಿರುವುದು ವ್ಯಾಪಾರಸ್ಥರ ಕೆಂಗಣ್ಣಿಗೆ ಗುರಿಯಾಗಿದೆ.


ಟ್ರಂಚ್ ಹೊಡೆದು ಬಾಕ್ಸ್ ಚರಂಡಿ ರೂಪಿಸಿರುವ ಪಾಲಿಗೆ ಒಂದು ವಾರದಲ್ಲಿ ಈ ಗೂಡಂಗಡಿಗಳಿಗೆ ಗಡುವು ನೀಡಿದ್ದಾರೆ ಎಂದು ತಿಳಿದು ಬಂದಿದೆ. 

Post a Comment

Previous Post Next Post