ಬಿಜೆಪಿ ಎಂದರೆ ಬಿಸಿನೆಸ್ ಜನತಾ ಪಾರ್ಟಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ನಕಲಿ ಕಾಂಗ್ರೆಸಿಗರಿಂದ ನಕಲಿ ಅಧಿವೇಶನ ಎಂದು ಹೇಳಿದ್ದಕ್ಕೆ ಸಚಿವರು ತಿರುಗೇಟು ನೀಡಿದ್ದಾರೆ.
ಅವರು ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವ ವಿದ್ಯಾಲಯದಲ್ಲಿರುವ ಘಟಿಕೋತ್ಸವದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಅದಕ್ಕೆ ಕೇಂದ್ರ ಸರ್ಕಾರ ಅಧಿಕ ತೆರಿಗೆ ಪಡೆದು ಬೇರೆಯವರಿಗೆ ಹೆಚ್ಚಿನ ಅನುದಾನ ನೀಡುತ್ತಿದ್ದಾರೆ. ಇದು ನಾಚಿಕೆಗೇಡು. ನಿಜವಾಗಿಯೂ ರಾಜ್ಯದ ಜನರಿಂದ ಆಯ್ಕೆಯಾಗಿದ್ದರೆ ಅದನ್ನ ಮೊದಲು ಕೇಳಿ ಎಂದು ಆರೊಪಿಸಿದರು.
ಶರಾವತಿ ಸಂತ್ರಸ್ತರ ಕುರಿತು ಅಧಿಕಾರಿಗಳ ಜೊತೆ ಸಭೆ ಮಾಡಲಾಗಿದೆ. ನಾವು ಬೇಗ ಈ ವಿಚಾರದಲ್ಲಿ ಮುಂದು ವರೆಯುತ್ತಿದ್ದೇವೆ. ಈಗ ಕೆಲವರು ಭಾಷಣ ಹೊಡೀತಾರೆ ಎಂದು ಪರೋಕ್ಷವಾಗಿ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, ಹೋರಾಟ ಮಾಡಿದ್ದೀವಿ ಎಂದಿದ್ದಾರೆ. ಆದರೆ ಅದರ ಬಗ್ಗೆ ಮಾತನಾಡೊಲ್ಲ. ಡಿಸಿಎಂ ಮತ್ತು ಸಿಎಂ ಶಿವಮೊಗ್ಗಕ್ಕೆ ಬಂದು ಭರವಸೆ ನೀಡಿದಂತೆ ಕೆಲಸ ಮಾಡುತ್ತಿದ್ದೇವೆ ಎಂದು ವಿವರಿಸಿದರು.
ಹಂತ ಹಂತವಾಗಿ ಶರಾವತಿ ಮುಳುಗಡೆ ಸಂತ್ರಸ್ತರ ಕೆಲಸ ಮಾಡಬೇಕಿದೆ. ಪಾಪದ ಕೊಡ ಯಾರದ್ದು ಎಂದರೆ ಸಂಸದ ರಾಘವೇಂದ್ರ ಮತ್ತು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರದ್ದು. ಹಿಂದೆ ನಡೆದ ತಪ್ಪು ನಿರ್ಧಾರಗಳು ಮತ್ತು ಬೊಮ್ಮಾಯಿ ಸರ್ಕಾರದ್ದು ಎಂದರು.
ಮೊನ್ನೆ ಸಾಗರದಲ್ಲಿ ನಡೆದ ಅಡಿಕೆ ಸಮಾವೇಶದಲ್ಲಿ ಸಂಸದರ ಭಾಷಣ ಗಮನಿಸಿದ್ದೇನೆ. ಶರಾವತಿ ಮುಳುಗಡೆಯರನ್ನ ಸಂರಕ್ಷಣೆಗೆ ಬಧ್ದ ಎಂದು ಕೇವಲ ಭಾಷಣ ಮಾಡಿಕೊಂಡು ಬಂದಿದ್ದಾರೆ. 15 ವರ್ಷ ಏನು ಮಾಡಿದರು ಹಾಗಾದರೆ? ಎಂದು ಪ್ರಶ್ನಿಸಿದ ಸಚಿವರು ಬದ್ದವಸಗಲು 15 ವರ್ಷ ಬೇಕಾ? ಬಡವರ ಮನೆ ಮುಳುಗಿಸಿ ಸಮಾವೇಶದಲ್ಲಿ ಬದ್ದವಾಗ್ತೀವಿ ಎನ್ನುತ್ತೀರ? ಕಾಗೋಡು ತಿಮ್ಮಪ್ಪ ಭೂಹಕ್ಕೇ ಸಿಗ್ತಾ ಇರಲಿಲ್ಲ. ಬಂಗಾರಪ್ಪನವರು ಇರಲಿಲ್ಲ ಎಂದಿದ್ದರೆ ನಿಮ್ಮಮನೆ ಕತ್ತಲಾಗುತ್ತಿತ್ತು.
ಅಡಿಕೆ ಬೆಳಗಾರರಿಗೆ ಶಕ್ತಿನೇ ಉಚಿತ ವಿದ್ಯುತ್. ಸಮಾವೇಶದಲ್ಲಿ ನಾನು ನಿಮ್ಮ ಸೇವಕ ಎಂದರೆ ಸಾಲದು. ಕೇಂದ್ರ ಸರ್ಕಾರದ ಸಚಿವರು ಮಾತುಗಳು ರಾಜಕೀಯ ಮಾತುಗಳಾಗುತ್ತದೆ. ಭರವಸೆ ಮಾತುಗಳಲ್ಲ. ಸಂಶೋಧನಾ ಕೇಂದ್ರ ಆರಂಭಿಸುವುದಾಗಿ 2014 ರಲ್ಲಿ ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಏಕೆ ತಡವಾಯಿತು ಎಂದು ಪ್ರಶ್ನಿಸಿದರು.
ಕಾಗೋಡು ತಿಮ್ಮಪ್ಪನವರಿಗೆ ಡಾಕ್ಟರೇಟ್ ನೀಡಿರುವುದು ವಿಳಂಬವಲ್ಲವಾಗಿಲ್ವಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಮೌಲ್ಯ ಕಳೆದುಹೋಗಿತ್ತು. ಇದನ್ನ ಉಳಿಸಿ ಬೆಳಸ ಬೇಕಿದೆ ಎಂದರು.
ಮೊನ್ನೆ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ವಿಶ್ವವಿದ್ಯಾಲದಲ್ಲಿ ಹಲವು ಬದಲಾವಣೆ ತೆಗೆದುಕೊಳ್ಳುವುದಾಗಿ ತೀರ್ಮಾನಿಸಲಾಗಿದೆ. ಬಂಗಾರಪ್ಪನವರ ಕಾಲದಲ್ಲಿ ಆರಂಭವಾದ ವಿಶ್ವ ವಿದ್ಯಾಲಯದಲ್ಲಿ ಉದ್ಯೋಗ ನೇಮಕಾತಿಯೇ ಆಗಿಲ್ಲ. ದೂರ ಶಿಕ್ಷಣ ಸ್ಥಗಿತಗೊಂಡಿತ್ತು. ಈ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ವೇದಿಕೆ ಮೇಲೆ ರಾಜ್ಯಪಾಲ ಥ್ಯಾವರ್ ಚಂದ್ ಅವರನ್ನ ಗೌರವ ಸಲ್ಲಿಸಲಾಗಿದೆ. ಮತ್ತು ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರಿಗೆ ಡಾಕ್ಟರೇಟ್ ಪದವಿ ನೀಡಿರುವುದು ಸಂತೋಷ ತಂದಿದೆ ಎಂದರು.
ಶರಾವತಿ ಸಂತ್ರಸ್ತರ ಪರವಾಗಿ ವಿಐಎಸ್ಎಲ್ ಉಳಿಸುವುದಾಗಿ ಹೇಳಿದ್ದ ಸಂಸದರು ಮತ್ತು ಎರಡು ಬಾರಿಯ ಕುಮಾರ ಸ್ವಾಮಿ ಏನು ಮಾಡ್ತಾ ಇದ್ದೀರ ಎಂದು ಪ್ರಶ್ನಿಸಿದ ಸಚಿವರು, ರಾಜ್ಯ ಸರ್ಕಾರ ಬಿಡ್ತಿಲ್ಲ ಎಂದಿರುವ ಕುಮಾರ ಸ್ವಾಮಿ ಬೇರೆಯವರಿಗೆ ಕೋಟ್ಯಾಂತರ ರೂ. ಅನುದಾನ ನೀಡಿತ್ತೀರ. ನಿಮ್ಮ ರಾಜ್ಯದಿಂದ ಆಯ್ಕೆಯಾದ ಕುಮಾರ ಸ್ವಾಮಿ ಅವರ ಕೊಡುಗೆ ಏನು?
ಕುಮಾರ ಸ್ವಾಮಿ ಅವರೆ ಉಳಿಸುತ್ತೇವೆ ಎಂದಿದ್ದರು. ಸಂಸದರನ್ನ ಹಿಡಿದುಕೊಂಡು ಬರಬೇಕಾಗಿದೆ. ಚುನಾವಣೆ ಪೂರ್ವ ಮತ್ತು ನಂತರ ಉಳಿಸುವುದಾಗಿ ಸುಳ್ಳು ಹೇಳಿದ್ರಲ್ಲಾ ಎಂದು ಅರೊಪಿಸಿದರು. ನೀವು ಎಲ್ಲಿನವರು ರಾಜ್ಯದವರಲ್ಲವಾ ಹಾಗಾದರೆ, ನಿಮ್ಮ ಕಾಣಿಕೆ ಏನು? ಅತಿ ಹೆಚ್ಚು ತೆರಿಗೆ ಹಣವನ್ನ ನಮಗೆ ಸಿಗದಂತೆ ಮಾಡಿ ಬೇರೆಯವರಿಗೆ ತೆರಿಗೆ ಹಣವನ್ನ ಕೊಡ್ತಿಲ್ವಾ?
ಗ್ಯಾರೆಂಟಿಗೆ ಕೇಂದ್ರ ಸರ್ಕಾರ ಕೊಡಲಿಲ್ಲ. ಬಿಜೆಪಿ ಅವರ ಮನೆಯಲ್ಲಿ ಪುಕ್ಸಟೆ ಯೋಜನೆ ಜಾರಿಯಾಗಿದೆ ಎಂದರೆ ಅದು ಕಾಂಗ್ರೆಸ್ ನವರಿಂದ ಎಂದು ಹೇಳಿದರು. ಜೈಬಾಪು, ಜೈಭೀಮ್ ಮತ್ತು ಜೈ ಸಂವಿಧಾನ ಆಚರಣೆ ಅನಿವಾರ್ಯವಾಗಿದೆ. ಸಂವಿಧಾನ ಬದಲಾಯಿಸುವೆ ಎನ್ನುವರನ್ನ ಎದುರಿಸಬೇಕಾದ್ಧರಿಂದ ಇದು ಸಾಧ್ಯವಾಗಿದೆ.
Post a Comment