ಸಾರ್ವಜನಿಕ ಕುಡಿಯುವ ನೀರಿನ ಬಾವಿ ಸಂಪೂರ್ಣ ಕುಸಿದು " ಮರಣ ಬಾವಿ " ಯಾಗಿ ಬಾಯಿತೆರದು ಬಲಿಗೆ ಕಾದು ಕುಳುತಿದೆ.
PDO (ಕಾರ್ಯದರ್ಶಿ ಗ್ರೇಡ್ ) ಕುಂಭಕರ್ಣ ನಿದ್ರೆಯಲ್ಲಿದ್ದರೆ - ಜಿಲ್ಲಾಪಂಚಾಯತ್ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಸಾಗರ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಕೂಡಲೇ ಸಾರ್ವಜನಿಕ ಕುಡಿಯುವ ನೀರಿನ ಬಾವಿ ತೆರೆದಿರುವ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮಕ್ಕೆ ಮುಂದಾಗುವಂತೆ ಸ್ಥಳೀಯ ನಿವಾಸಿಗಳು, ಆ ಭಾಗದ ಗ್ರಾಮ ಪಂಚಾಯಿತಿ ಸದಸ್ಯರುಗಳ ಒತ್ತಾಯಿಸಿದ್ದಾರೆ.
ಶಿಕ್ಷಣ ಸಚಿವ ಮಧುಬಂಗಾರಪ್ಪ ರವರ ಸ್ವಮತ ಕ್ಷೇತ್ರದಲ್ಲೇ " ಮರಣ ಬಾವಿ" ಬಲಿಗಾಗಿ ಕಾದು ಕುಳಿತಿದ್ದರೂ ಸಹ ಅಧಿಕಾರಿಗಳ ದಿವ್ಯ ನಿರ್ಲಕ್ಷ ಎದ್ದುಕಾಣುತ್ತಿದೆ. ಜಿಪಂ, ತಾಪಂ ಮತ್ತು ಗ್ರಾಪಂನ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಕ್ರಮ ಕೈಗೊಳ್ಳದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ತಾಳಗುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ 02 ರಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಬಾವಿ ಕುಸಿದಿದ್ದೂ, ಈ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ನಾಗರೀಕರುಗಳು, ಹಿರಿಯರೂ, ವಿಶೇಷ ವಿಕಲಚೇತನರು ನೂರಾರು ವಾಹನಗಳು ಸಂಚರಿಸುತ್ತಿದ್ದಾರೆ.
" ಮರಣ ಬಾವಿ "ಯೊಂದು ಬಲಿಪಡೆಯುವ ಮುನ್ನ ಸರ್ಕಾರ ಹಾಗೂ ಸ್ಥಳೀಯ ಶಾಸಕರೂ, ಶಿಕ್ಷಣ ಸಚಿವರೂ ಮಧು ಬಂಗಾರಪ್ಪ ರವರು ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳಿಗೆ ಆದೇಶಿಸಿ " ಮರಣ ಬಾವಿ " ಯನ್ನೂ ಸುಸಜ್ಜಿತ ಸಾರ್ವಜನಿಕ ಕುಡಿಯುವ ನೀರಿನ ಬಾವಿಯನ್ನಾಗಿ ಮಾಡಿಕೊಡುವಂತೆ ಸ್ಥಳೀಯ ನಿವಾಸಿಗಳು ಮನವಿ ಮಾಡಿದ್ದಾರೆ.
ಸ್ಥಳೀಯರ ಮನವಿಯನ್ನ ಅಧಿಕಾರಿಗಳು, ಜನಪ್ರತಿನಿಧಿಗಳು ಹೇಗೆ ಸ್ವೀಕರಿಸಲಿದ್ದಾರೆ ಎಂಬುದೆ ಈಗ ಉಳಿದಿರುವ ಕುತೂಹಲ.
Post a Comment