ಸಿಗಂದೂರಿಗೆ ತೆರಳಲು ಹೊಳೆಬಾಗಿಲ-ಕಳಸವಳ್ಳಿ ನಡುವಿನ ಶರಾವತಿ ಹಿನ್ನೀರಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಮೇಲ್ಸೇತುವೆ ಉದ್ಘಾಟನೆಯ ಕುರಿತು ರಾಜಕೀಯ ಮುಖಂಡರ ನಡುವೆ ಗೊಂದಲದ ಹೇಳಿಕೆಗಳು ಮುಂದು ವರೆದಿದೆ.
ಇಂದು ಸಿಗಂದೂರಿನಲ್ಲಿ ಶಾಸಕ ಗೋಪಾಲ ಕೃಷ್ಣ ಬೇಳೂರು ಅವರು ಮಾಧ್ಯಮಗಳಿಗೆ ಮಾತನಾಡಿ ಸೇತುವೆ ನಿರ್ಮಾಣ ಪೂರ್ಣಗೊಳ್ಳುತ್ತಿದ್ದು ಇನ್ನು ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಉದ್ಘಾಟನೆಯ ನಿರೀಕ್ಷೆಯಿದೆ. ಇದರ ಉದ್ಘಾಟನೆಯನ್ನ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಉದ್ಘಾಟಿಸುತ್ತಾರೋ ಅಥವಾ ಬೇರೆಯವರು ಉದ್ಘಾಟಿಸುತ್ತಾರೋ ಗೊತ್ತಿಲ್ಲ. ಆದರೆ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಉದ್ಘಾಟನೆಯಾಗಲಿದೆ ಎಂದು ಹೇಳಿದರೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸಹ ಹೇಳಿಕೆ ನೀಡಿ ಒಂದು ವರ್ಷಕ್ಕೆ ಸೇತುವೆಯ ಪೂರ್ಣ ಬಳಕೆ ಆಗಲಿದೆ ಎಂದರು.
ಮಾಜಿ ಸಚಿವ ಕಾಗೋಡು ಅವರು 75% ಸೇತುವೆ ಕಾಮಗಾರಿ ಮುಗಿದಿದೆ. ಶೇ.25 ರಷ್ಟು ಕಾಮಗಾರಿ ಆಗಬೇಕಿದೆ. ಇನ್ನು ಒಂದು ವರ್ಷಕ್ಕೆ ಈ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
2018-19 ರ ವೇಳೆಯಲ್ಲಿ ನಡೆದ ಲೋಕಸಭಾ ಚುನಾವಣೆಗೆ ಶಂಕುಸ್ಥಾಪನೆ ಮಾಡಿದ್ದ ಆಗಿನ ಲೋಕೋಪಯೋಗಿ ಸಚಿವ ನಿತಿನ್ ಗಡ್ಕರಿ ಎರಡು ವರ್ಷದಲ್ಲಿ ಸೇತುವೆ ನಿರ್ಮಾಣದ ಭರವಸೆ ನೀಡಿದ್ದರು. 7 ವರ್ಷದ ಬಳಿಕ ಸೇತುವೆಯು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. 450 ಕೋಟಿ ವೆಚ್ಚದಲ್ಲಿ ಹ್ಯಾಂಗಿಂಗ್ ಬ್ರಿಡ್ಜ್ (ತೂಗು ಸೇತುವೆ) ನಿರ್ಮಾಣವಾಗಿದೆ.
Post a Comment