ಅಣ್ಣನಿಂದಲೇ ತಮ್ಮನ ಕೊಲೆ

 

ಅನುಪಿನಕಟ್ಟೆಯ ಲಂಬಾಣಿ ತಾಂಡದಲ್ಲಿ ಕೊಲೆ ಪ್ರಕರಣವೊಂದು ನಡೆದಿದ್ದು, ಅಣ್ಣನೇ ತಮ್ಮನನ್ನ ಕೊಲೆ ಮಾಡಿರುವ ಘಟನೆ ನಡೆದಿದೆ. ವೈಯುಕ್ತಿಕ ಕಾರಣಕ್ಕೆ ಕೊಲೆಯಾಗಿದೆ ಎಂದು ಹೇಳಲಾದರೂ ಕುಡಿದ ಮತ್ತಿನಲ್ಲಿ ಮರ್ಡರ್ ನಡೆದಿದೆ


ಶಿವಮೊಗ್ಗ ತಾಲೂಕಿನ ಅನುಪಿನ ಕಟ್ಟೆ ಲಂಬಾಣಿ ತಾಂಡದಲ್ಲಿ ಗಿರೀಶ್ (30) ಎಂಬ ವ್ಯಕ್ತಿಯ ತಲೆಯ ಮೇಲೆ ಸ್ವಂತ ಅಣ್ಣ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಮೊದಲು ಈಳ್ಗೆ ಮಣೆಯಿಂದ ಹೊಡೆದು ತದನಂತರ ಕಲ್ಲು ಹೊತ್ತಾಕಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. 


ತೀವ್ರ ರಕ್ತ ಶ್ರಾವದಿಂದ ಗಿರೀಶ್ ಸ್ಥಳ ದಲ್ಲೇ ಸಾವನ್ನಪ್ಪಿದ್ದು ಘಟನಾ ಸ್ಥಳಕ್ಕೆ ತುಂಗಾನಗರ ಪೊಲೀಸರು ಭೇಟಿ ನೀಡಿ ಆರೋಪಿ ಲೋಕೇಶ್ ನನ್ನು ವಶಕ್ಕೆ ಪಡೆದಿದ್ದಾರೆ. ಸಹೋದರರಿಬ್ಬರೂ ಕೂಲಿ ಕಾರ್ಮಿಕರೆಂದು ಹೇಳಲಾಗುತ್ತಿದ್ದು ಲೋಕೇಶ್ ಮದುವೆಯಾಗಿದ್ದರೂ ಪ್ರತ್ಯೇಕವಾಗಿ ವಾಸವಾಗಿದ್ದನು.


Post a Comment

Previous Post Next Post