ಮಹಿಳೆಯರ ಮತ್ತು ಮಕ್ಕಳ ಕಳ್ಳ ಸಾಗಾಣಿಕೆಗೆ ಬ್ರೇಕ್ ಹಾಕಲು ಭಾರತೀಯ ರೈಲು ಈಗ ಮುಂದಾಗಿದೆ. ಲೈಂಗಿಕತೆ ಮತ್ತು ಮಕ್ಕಳನ್ನ ಬಾಲಕಾರ್ಮಿಕರಾಗಿ ಬಳಸಿಕೊಳ್ಳಲು ಕಾಳಸಂತೆಯಲ್ಲಿ ನಡೆಯುತ್ತಿರುವ ದಂಧೆಗೆ ಭಾರತೀಯ ರೈಲು ಆರ್ ಪಿ ಎಫ್ ಖಡಕ್ ಕ್ರಮಕ್ಕೆ ಮುಂದಾಗಿದೆ.
ಮಾನವ ಕಳ್ಳ ಸಾಗಾಣಿಕೆ ತಡೆಗೆ ಮೈಸೂರು ರೈಲು ವಿಭಾಗೀಯ ಕಚೇರಿಯು ಎರಡು ಠಾಣೆಗಳಲ್ಲಿ ಆರಂಭಿಸಲು ಮುಂದಾಗಿದೆ ಒಂದು ಶಿವಮೊಗ್ಗ ಮತ್ತೊಂದು ಮೈಸೂರು ರೈಲ್ವೆ ಸ್ಟೇಷನ್ ನಲ್ಲಿ ಆರಂಭಿಸಲು ಮುಂದಾಗಿದೆ. ಶಿವಮೊಗ್ಗದಲ್ಲಿನ ರೈಲ್ವೆ ಸ್ಟೇಷನ್ ನಲ್ಲಿರುವ ಆರ್ ಪಿ ಎಫ್ ಕಚೇರಿಯ ಪಕ್ಕದಲ್ಲಿಯೇ ಆತು(Anti-wonen trafficking units) ನ್ನ ಆರಂಭಿಸಲಾಗುತ್ತಿದೆ. ಮುಂದಿನ ಮೂರು ತಿಂಗಳಲ್ಲಿ ಈ ಕಚೇರಿ ತನ್ನ ಕಾರ್ಯವನ್ನ ಆರಂಭಿಸಲಿದೆ.
ಶಿವಮೊಗ್ಗದಲ್ಲಿ 2018 ರಲ್ಲಿ ಮಹಿಳೆಯರನ್ನ ಈ ಮಾನವ ಕಳ್ಳ ಸಾಗಣಿಕೆ ಪ್ರಕರಣದಲ್ಲಿ ಸಾಗಿಸುವ ತಂಡವೊಂದು ಪತ್ತೆಯಾಗಿತ್ತು. ಆದರೆ ಈ ಬಗ್ಗೆ ಯಾವುದೇ ದಾಖಲೆಗಳನ್ನ ಮಾಡಿಕೊಳ್ಳದಿದ್ದರು. ಘಟನೆಯೊಂದು ನಡೆದಿರುವುದಕ್ಕೆ ಸಾಕ್ಷಿಯಿದೆ.
ಜಗತ್ತಿನಾದ್ಯಂತ 27 ಮಿಲಿಯನ್ ಗಿಂತಲೂ ಜನರನ್ನ ಮಾನವ ಕಳ್ಳಸಾಗಾಣಿಕೆಯಲ್ಲಿ ಸಾಗಿಸಲಾಗಿದೆ. ಬಹುತೇಕರನ್ನ ಕಳ್ಳಸಾಗಾಣಿಕೆಗೆ ರೈಲುಗಳನ್ನಬಳಸಿಕೊಂಡಿರುವುದಾಗಿ ಸಮಿತಿಯೊಂದು ವರದಿ ಮಾಡಿದೆ. ಇದರಲ್ಲಿ ಶೇ.71% ಮಹಿಳೆಯರು ಮತ್ತು ಯುವತಿಯರನ್ನ ಬಳಸಿಕೊಂಡಿರುವುದು ದುರಂತವಾಗಿದೆ. ರೈಲ್ವೆ ಆರ್ ಪಿ ಎಫ್ ಈ ಬಗ್ಗೆ ಬ್ರೇಕ್ ಹಾಕಲು ಕಠಿಣ ಕ್ರಮಕ್ಕೆ ಮುಂದಾಗಿದೆ.
Post a Comment