ಶಿವಮೊಗ್ಗದ ಬಡಾವಣೆಯೊಂದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕಟ್ಟಬೇಕಿದ್ದ ಅಂದಾಜು ಹಣವನ್ನ ಕಡಿಮೆ ಮಾಡಿರುವ ಪ್ರಕರಣದಲ್ಲಿ ಅಧಿಕಾರಿಗಳ ಲಾಭಿ ನಡೆದಿದೆ ಎಂದು ಹೆಸರು ಇಚ್ಚಿಸದ ಎಲೆಕ್ಟ್ರಿಕಲ್ ಗುತ್ತಿಗೆದಾರರು ಆರೋಪಿಸಿದ್ದಾರೆ.
ನವುಲೆ ಗ್ರಾಮದ ಸರ್ವೆ ನಂಬರ್ ಖಾಸಗಿ ಲೇ ಔಟ್ ಆದ 20/2, 20/3, 21/1B, 21/2 ಮತ್ತು 22/2 ರಲ್ಲಿ 6 ಎಕರೆ 26 ಗುಂಟೆ ಪ್ರದೇಶದಲ್ಲಿ ಉದ್ದೇಶಿತ ವಸತಿ ಬಡಾವಣೆಯಲ್ಲಿ ಒಟ್ಟು 87 ಸಂಖ್ಯೆ ನಿವೇಶನಗಳಿಗೆ ನಿಬಂಧನೆ-10 ರನ್ವಯ ವಿದ್ಯುತ್ ಮೂಲಬೂತ ಸೌಕರ್ಯ ಕಲ್ಪಿಸುವ ಪ್ರಸ್ತಾವನೆಗೆ ಮಂಜೂರಾತಿ ಮಾಡಲಾಗಿತ್ತು. ಇದು ಶ್ರೀಮತಿ ಉಷಾರಾಣಿ ಎಂಬುವರಿಗೆ ಸೇರಿದ್ದಾಗಿದೆ ಎಂದು ಗುತ್ತಿಗೆದಾರ ರವಿ ಕುಮಾರ್ ದೂರಿದ್ದಾರೆ.
2024 ಮಾರ್ಚ್ ತಿಂಗಳಲ್ಲಿ ಮೆಸ್ಕಾಂ ಅಧೀಕ್ಷಕರು ಅಂದಾಜು ಪಟ್ಟಿ ರಚಿಸಿ 75,48,086 ರೂ ಎಂದು ಗುರುತಿಸಲಾಗಿತ್ತು. ಅಂದಾಜು ಪಟ್ಟಿಯನ್ನ ತಯಾರಿಸಲಾಗಿತ್ತು. ಈ ಅಂದಾಜು ಪಟ್ಟಿಗಿಂತ ಹಣ ಹೆಚ್ಚಿಸಲು ಅವಕಾಶವಿದೆ ವಿನಃ ಕಡಿಮೆ ಮಾಡಲು ಅವಕಾಶವಿಲ್ಲವೆಂಬುದು ಗುತ್ತಿಗೆದಾರರ ಆರೋಪವಾಗಿದೆ.
ಅಂದಾಜು ಪಟ್ಟಿಯನ್ನ ಪರಿಶೀಲಿಸಿದ ಮೆಸ್ಕಾಂ ಅಧೀಕ್ಷಕರು 75,48,086 ರೂ.ವಿನಿಂದ 64,98,512 ರೂ.ಗಳೆಂದು ನಿಗದಿ ಪಡಿಸಿದ್ದಾರೆ. ಇದರಿಂದ ಮೆಸ್ಕಾಂ ಬೊಕ್ಕಸಕ್ಕೆ 10,49,574 ರೂ. ಎಂದು ನಿಗದಿಪಡಿಸಲಾಗಿದೆ. ಈ ರೀತಿ ಮೆಸ್ಕಾಂ ಇಂಜಿನಿಯರ್ ಅವರು ಅಂದಾಜುಪಟ್ಟಿನ್ನ ಮೊದಲೇ ನಿಗದಿ ಪಡಿಸಿ ಕಳುಹಿಸಿದ್ದರೆ ಈ ನಷ್ಟ ಆಗುತ್ತಿರಲಿಲ್ಲ ಎಂದು ದೂರಿದ್ದಾರೆ.
ಇದಕ್ಕೆ ಲೇಔಟ್ ನ ಎಲೆಕ್ಟ್ರಿಕಲ್ ಕಂಟ್ರ್ಯಾಕ್ಟರ್ ಮತ್ತು ಮೆಸ್ಕಾಂ ಇಂಜಿನಿಯರ್ ಅವರ ನಡುವಿನ ಹೊಂದಾಣಿಕೆಯೇ ಈ ಅಂದಾಜು ಪಟ್ಟಿಯಲ್ಲಿ ಹಣ ಕಡಿಮೆ ಮಾಡಲು ಕಾರಣ ಎಂಬುದು ಗುತ್ತಿಗೆದಾರನ ಆರೋಪವಾಗಿದೆ.
Post a Comment