ಫೆ.4 ರಂದು ಮ್ಯಾಮ್ ಕೋಸ್ ಚುನಾವಣೆ

 

ಮಲೆನಾಡಿನ ಪ್ರತಿಷ್ಠಿತ ಮ್ಯಾಮ್‌ಕೋಸ್ ಗೆ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೆಲ ಭಾಗ, ಶಿವಮೊಗ್ಗ ಜಿಲ್ಲೆ, ಹಾಗೂ ಹೊನ್ನಾಳಿ ಮತ್ತು ಚನ್ನಗಿರಿ ಭಾಗಗಳ ಮತದಾರರು ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ.


ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮ್ಯಾಮ್ ಕೋಸ್ ಉಪಾಧ್ಯಕ್ಷ ಕುಲ್ಕುಣಿ ಮಹಶ್, ಬಿನಾ ಸಂಸ್ಕಾರ್ ನಹೀ ಸಹಕಾರ್ ಕಳೆದ 45 ವರ್ಷಗಳಿಂಹ ಭಾರತಿ ಬಿನಾ ಸಹಕಾರ್ ನಹೀ ಉದ್ಧಾರ್ ಎಂಬ ಮೂಲತತ್ವಕ್ಕೆ ಅನುಗುಣವಾಗಿ ಭಾರತಿ ನೇತೃತ್ವದಲ್ಲಿ ಇಡೀ ಭಾರತದಾದ್ಯಂತ ಕೆಲಸ ಮಾಡುತ್ತಿದ್ದೇವೆ. ಸಹಕಾರ ಶುದ್ದೀಕರಣದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು, ಯಾವುದೇ ರೂಪದ ಭ್ರಷ್ಟಾಚಾರವಿಲ್ಲದೇ, ಯಾವುದೇ ಭೇದ-ಭಾವ ರಹಿತವಾಗಿ, ಅತ್ಯಂತ ಪಾರದರ್ಶಕವಾಗಿ ಸದಸ್ಯ ಕೇಂದ್ರಿತ ಸೇವೆ ನೀಡುವ ದೃಷ್ಟಿಕೋನ ಹೊಂದಿರುವ ಸ್ವಯಂ ಸೇವಾ ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ ಎಂದರು. 


ಇತ್ತೀಚಿನ ದಿನಗಳಲ್ಲಿ ಸಹಕಾರ ವಲಯದಲ್ಲಿ ಹಣದ ಬಲ, ತೋಳ್ಳಲದ ಮೂಲಕ ಜಾತಿ ಬಲದಿಂದ ಚುನಾವಣೆಯಲ್ಲಿ ಹಣ ತೊಡಗಿಸಿ, ಅದನ್ನು ಹಿಂಪಡೆಯುವ ದೃಷ್ಟಿಯಿಂದ ಭ್ರಷ್ಟಾಚಾರದಲ್ಲಿ ತೊಡಗಿರುವುದನ್ನು ನಾವು ಕಾಣುತ್ತೇವೆ. ಇದಕ್ಕೆ ವ್ಯತಿರಿಕ್ತವಾಗಿ ಸಹಕಾರ ಭಾರತಿ ಕಾರ್ಯಕರ್ತರ ತಂಡ ಭ್ರಷ್ಟಾಚಾರ ರಹಿತವಾಗಿ, ಕಳಂಕ ರಹಿತವಾಗಿ, ಸದಾಚಾರದಿಂದ ಉತ್ತಮ ಆಡಳಿತದ ನಿರ್ವಹಣೆಯನ್ನು ಅತ್ಯಂತ ಪಾರದರ್ಶಕವಾಗಿ ಆಡಳಿತ ನಡೆಸುವ ಸಂಕಲ್ಪದಿಂದ ಕಾರ್ಯ ಪ್ರವೃತ್ತರಾಗಿರುತ್ತಾರೆ.


ಮಲೆನಾಡಿನ ಪ್ರತಿಷ್ಠಿತ ಸಂಸ್ಥೆಯಾದ 'ಮಾಮ್ ಕೋಸ್' ಸಂಸ್ಥೆಯಲ್ಲಿ ಕಳೆದ 20 ವರ್ಷಗಳಿಂದ ಸಹಕಾರ ಭಾರತಿಯ ಕಾರ್ಯಕರ್ತರ ತಂಡ ಅತ್ಯಂತ ಯಶಸ್ವಿಯಾಗಿ ಸದಸ್ಯರ ಆಶೋತ್ತರಗಳನ್ನು ಈಡೇರಿಸುತ್ತಾ ಕಾರ್ಯ ನಿರ್ವಹಿಸುತ್ತಿದೆ. ಪ್ರಸ್ತುತ 'ಮಾಮ್ ಕೋಸ್' ಸಂಸ್ಥೆಯ ಚುನಾವಣೆ ಫೆಬ್ರವರಿ 4, 2025 ರಂದು ನಡೆಯಲಿದ್ದು, ಈ ಚುನಾವಣೆಯಲ್ಲಿ ಕೂಡ ಸಹಕಾರ ಭಾರತಿಯ ಕಾರ್ಯಕರ್ತರ ತಂಡ ಸ್ಪರ್ಧಿಸಲಿದೆ. ಮುಂದಿನ 5 ವರ್ಷಗಳ ಅವಧಿಗೆ ನಮ್ಮ ಸಹಕಾರ ಭಾರತಿಯ ತಂಡದ 19 ಜನ ಅಭ್ಯರ್ಥಿಗಳಿಗೆ ಹೆಚ್ಚಿನ ಮತನೀಡಿ ಸದಸ್ಯರ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕಾಗಿ ತಮ್ಮಲ್ಲಿ ವಿನಯಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇವೆ.


ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು 


ಮಹೇಶ್ ಹುಲ್ಕುಳಿ, ತೀರ್ಥಹಳ್ಳಿ ತಾಲ್ಲೂಕು, ರತ್ನಾಕರ ಬೆಳಗಿನ ಮನೆ, ತೀರ್ಥಹಳ್ಳಿ ತಾಲ್ಲೂಕು, ನಂದನ್ ಹಸಿರುಮನೆ, ಆಗುಂಬೆ, ತೀರ್ಥಹಳ್ಳಿ, ಶ್ರೀಮತಿ ಜಯಶ್ರೀ, ತೀರ್ಥಹಳ್ಳಿ ತಾಲ್ಲೂಕು, ವಿರೂಪಾಕ್ಷಪ್ಪ ಜಿ.ಇ., ಗೊಂದಿಚಟ್ನಳ್ಳಿ, ಶಿವಮೊಗ್ಗ, ಸತೀಶ್ ರಾಮೇನಕೊಪ್ಪ, ಶಿವಮೊಗ್ಗ, ಕೆ.ವಿ.ಕೃಷ್ಣಮೂರ್ತಿ, ಕಿರುಗುಳಿಗೆ, ಹೊಸನಗರ


ತಿಮ್ಮಪ್ಪ ಶ್ರೀಧರಪುರ, ಸಾಗರ, ಕೀರ್ತಿರಾಜ್, ಸೊರಬ, ಕುಬೇಂದ್ರಪ್ಪ, ಭದ್ರಾವತಿ, ರಮೇಶ್ ಟಿ.ಎಲ್.ತರೀಕೆರೆ, ಪ್ರಸನ್ನ ಹೆಬ್ಬಾರ್ ಕಳಸ, ಎನ್.ಆರ್.ಪುರ, ನರೇಂದ್ರ ಬೇಳೆಗದ್ದೆ, ಕೊಪ್ಪ, ಶ್ರೀಮತಿ ಸಹನಾ ಸುಭಾಷ್, ಕೊಪ್ಪ, ಸುರೇಶ್ಚಂದ್ರ ಅಂಬೂರು, ಶೃಂಗೇರಿ, ಕಬೋಡಿ ಶ್ರೀನಿವಾಸ್, ಶೃಂಗೇರಿ, ಧಮೇಂದ್ರ, ಹೊಸನಗರ, ಭರಮಪ್ಪ ಅನಂತಪುರ, ಸಾಗರ, ವೀರೇಶ್, ಶಿಕಾರಿಪುರ ಇವರು ಸ್ಪರ್ಧಿಸಲಿದ್ದಾರೆ. 


ಈ ಮೇಲ್ಕಂಡ ಅಭ್ಯರ್ಥಿಗಳಿಗೆ ತಮ್ಮ ಅಮೂಲ್ಯ ಮತನೀಡಿ ಸೇವೆ ಮಾಡಲು ಅವಕಾಶ ಮಾಡಿಕೊಡಲು ಮನವಿ ಮಾಡಿಕೊಂಡರು.


ಯಡಗೆರೆ ಸುಬ್ರಹ್ಮಣ್ಯ, ಸಹಕಾರ ಭಾರತಿಯ ರಾಜ್ಯಕಾರ್ಯದರ್ಶಿ ಪ್ರಸನ್ನಕುಮಾರ್ ಮಾತನಾಡಿ, 

Post a Comment

Previous Post Next Post