ಗ್ರಾಮಾಂತರ ಭಾಗದಲ್ಲಿ ಅಕ್ರಮ ಮರಳು ಸಂಗ್ರಹ ಅಡ್ಡದ ಮೇಲೆ ತಹಶೀಲ್ದಾರ್ ರಾಜೀವ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಪ್ರಿಯಾ, ಗ್ರಾಮಾಂತರ ಪೊಲೀಸ್ ಠಾಣೆ ಪಿಐ ಸತ್ಯ ನಾರಾಯಣ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ.
ಹಾಡೋನ ಹಳ್ಳಿ ಗ್ರಾಮದಲ್ಲಿ ಹೊಳೆಯತಟದಲ್ಲಿ ಮರಳನ್ನ ಸಂಗ್ರಹಿಸಿ ಅಕ್ರಮ ಮರಳು ಸಾಗಾಣಿಕೆಗೆ ಸಿದ್ದತೆ ನಡೆಸಿದಂತೆ ಮತ್ತೊಂದು ಭಾಗದಲ್ಲಿ ಇದೇರೀತಿ ಮರಳು ಸಂಗ್ರಹ ಮಾಡಿರುವ ಘಟನೆ ನಡೆದಿದೆ. ಇಲ್ಲಿ ದೇವಸ್ಥಾನ ಕಮಿಟಿಗೆ ಹಣಕಟ್ಟಿ ನಂತರ ಅಕ್ರಮಮರಳು ಮಾಡುತ್ತಿದ್ದ ಬಗ್ಗೆ ವರದಿ ಬಂದಿದ್ದು ನಂತರ ಇದೇ ಮೂರು ಅಧಿಕಾರಿಗಳು ದಾಳಿ ನಡೆಸಿ 60 ಮೆಟ್ರಿಕ್ ಕ್ವಿಂಟಾಲ್ ಮರಳು ಪತ್ತೆಯಾಗಿತ್ತು.
ಈಗ ತುಂಗ ಭದ್ರೆಯ ಒಡಲಿನಲ್ಲಿದ್ದ ಮರಳನ್ನ ತೆಗೆದು ಅಕ್ರಮ ಮರಳು ಸಂಗ್ರಹ ಮಾಡಿದ 205 ಮೆಟ್ರಕ್ ಟನ್ ಮರಳು ಪತ್ತೆಯಾಗಿದೆ. ತಕ್ಷಣವೇ ಮರಳನ್ನ ಸೀಜ್ ಮಾಡಿ ಪಿಡಬ್ಲೂಡಿಗೆ ತಹಶೀಲ್ದಾರ್ ಅವರ ತಂಡ ಹಸ್ತಾಂತರಿಸಿದೆ. ಆದರೆ ಯಾವುದೇ ವಾಹನಗಳು ಪತ್ತೆಯಾಗಿಲ್ಲ.
Post a Comment