ಕಳುವಾಗಿದ್ದು 107 ಗ್ರಾಂ ಚಿನ್ನಾಭರಣ, ಪತ್ತೆಯಾಗಿದ್ದು 90.4 ಗ್ರಾಂ ಚಿನ್ನಾಭರಣ

 


ಶಿಕಾರಿಪುರದ ಗಾಮ ಗ್ರಾಮದಲ್ಲಿ ಡಿ. 25 ರಂದು ನಡೆದ ಮನೆಗಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನ, ಚಿನ್ನಾಭರಣಗಳನ್ನ ಕೃತ್ಯಕ್ಕೆ ಬಳಸಿದ ದ್ವಿಚಕ್ರವಾಹನಗಳು ಸೇರಿ 7,16,000 ರೂ. ಮೌಲ್ಯದ ವಸ್ತುಗಳನ್ನ ವಶಕ್ಕೆಪಡೆಯಲಾಗಿದೆ. 


ದಿನಾಂಕ:25-12-2024 ರಂದು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗಾಮ ಗ್ರಾಮ ವಾಸಿ ಮಹಿಳೆಯೊಬ್ಬರ ಮನೆಯ ಮೇಲ್ಚಾವಣಿಯ ಖಾಲಿ ಜಾಗದಿಂದ ಮನೆಯ ಒಳಗೆ ಬಂದು, ಬೀರುವಿನ ಪಕ್ಕದಲ್ಲಿ ಇಟ್ಟಿದ್ದ ಬ್ಯಾಗ್ ನ ಒಳಗಿದ್ದ ಕೀಯಿಂದ ಬೀರುವನ್ನು ತೆಗೆದು ಅದರಲ್ಲಿದ್ದ ಬೆಳ್ಳಿ ಮತ್ತು ಬಂಗಾರದ ಆಭರಣ ಮತ್ತು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ 49 ವರ್ಷದ ಶಿಕ್ಷಕಿಯೊಬ್ವರು ಠಾಣೆಗೆ ದೂರು ನೀಡಿದ್ದರು. 


ಪ್ರಕರರಣದಲ್ಲಿ ಕಳುವಾದ ಮಾಲು ಹಾಗೂ ಆರೋಪಿತರ ಪತ್ತೆಗಾಗಿ ಮಿಥುನ್ ಕುಮಾರ್ ಜಿ. ಕೆ. ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ, ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಮತ್ತು ಎ. ಜಿ. ಕಾರಿಯಪ್ಪ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಕೇಶವ ಕೆ.ಇ ಪೊಲೀಸ್ ಉಪಾಧೀಕ್ಷಕರು ಶಿಕಾರಿಪುರ ಉಪ ವಿಭಾಗರವರ ಮೇಲ್ವಿಚಾರಣೆಯಲ್ಲಿ, ಆರ್. ಆರ್. ಪಾಟೀಲ್, ಪಿ.ಐ. ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ, ರವರ ನೇತೃತ್ವದಲ್ಲಿ, ಶೋಭಾರಾಣಿ ಪಿಎಸ್ಐ ಮತ್ತು ಶ್ರೀ ಅಕ್ಬರ್ ಮುಲ್ಲಾ ಪಿಎಸ್ಐ ಹಾಗೂ ಸಿಬ್ಬಂಧಿಗಳಾದ ಸಿಹೆಚ್ಸಿ ರವರಾದ ನಾಗರಾಜ್, ರಾಘವೇಂದ್ರ, ಸಿಪಿಸಿರವರಾದ ಪ್ರಶಾಂತ್, ಹಜರತ್ ಅಲಿ, ಸಿಪಿಸಿ ರವರಾದ ಜಾಫರ್, ಶೇಖರ್ ರವರನ್ನು ಒಳಗೊಂಡ ವಿಶೇಷ ತಂಡವನ್ನು ರಚನೆ ಮಾಡಲಾಗಿರುತ್ತದೆ. 


ತನಿಖಾ ತಂಡವು ಈ ದಿನ ದಿನಾಂಕ: 03-01-2025 ರಂದು ಪ್ರಕರಣದ ಆರೋಪಿ ಶಿವರಾಜ ಪಿ.ಎಸ್ @ ಶಿವು, 28 ವರ್ಷ, ಸಾಲೂರು ಬೀದಿ ಚುರ್ಚಗುಂಡಿ ಗ್ರಾಮ, ಶಿಕಾರಿಪುರ ತಾಲ್ಲೂಕು ಈತನನ್ನು ದಸ್ತಗಿರಿ ಮಾಡಿ, ಈತನಿಂದ ಪ್ರಕರಣಕ್ಕೆ ಸಂಬಂಧಿಸಿದ ಅಂದಾಜು ಮೌಲ್ಯ 6,30,000/- ರೂಗಳ 90.4 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಮತ್ತು ಅಂದಾಜು ಮೌಲ್ಯ 6,000/- ರೂಗಳ 60 ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನು ಹಾಗು ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ 80,000/- ರೂಗಳ ಹಿರೋ ಹೆಚ್.ಎಫ್.ಡಿಲೇಕ್ಸ್ ಬೈಕ್ ಸೇರಿ ಒಟ್ಟು ಅಂದಾಜು ಮೌಲ್ಯ 7,16,000/- ರೂಗಳ ಮಾಲನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ. 


ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

Post a Comment

Previous Post Next Post