ಕೆಎಸ್ಆರ್ ಟಿಸಿ ಬಸ್ ದರವನ್ನ ಶೇ15 ರಷ್ಟು ಹೆಚ್ಚಿಸಿ ರಾಜ್ಯಸರ್ಕಾರ ಜ.5 ರಿಂದ ಜಾರಿಗೊಳಿಸುತ್ತಿದೆ. ಇದರ ಬೆನ್ನಲ್ಲೇ ಶಿವಮೊಗ್ಗದಿಂದ ಪ್ರಮುಖನಗರಗಳಿಗೆ ಸಂಚರಿಸುವ ದರ ಏನಾಗಲಿದೆ ಎಂದು ಗಮನಿಸೋಣ
ಕೆಎಸ್ಆರ್‌ಟಿಸಿ ಬಸ್ ದರ ಶಿವಮೊಗ್ಗದಿಂದ ಬೆಂಗಳೂರಿಗೆ ಚಲಿಸುವ ಪ್ರಯಾಣ ದರ ಪ್ರಸ್ತುತ 312 ರೂ. ಇದೆ(ಬೆಸಿಕ್ ದರ 288 ರೂ. ಟೋಲ್ ಸೇರಿ 24 ರೂ. ಆಗುವುದರಿಂದ 312 ರೂ. ಆಗಲಿದೆ) ಇದು ಜ.5 ರಿಂದ 359 ರೂ. ಆಗಲಿದೆ.
ಭದ್ರಾವತಿಗೆ ಎಕ್ಸ್ ಪ್ರೆಸ್ ಬಸ್ 28 ರೂ ಇದ್ದು ಇದರ ದರ ಜ.5 ರಿಂದ 32 ರೂ. ಆಗಲಿದೆ. ಲೋಕಲ್ ಬಸ್ 25 ರೂ. ಇದ್ದು ಇದು28.75-29 ರೂ. ಆಗಲಿದೆ. ತರೀಕೆರೆಗೆ ಪ್ರಸ್ತುತ 45 ರೂ. ಇದ್ದು ಪರಿಷ್ಕರಣೆಯ ನಂತರ ಇದರ ದರ 52 ರೂ.ಗೆ ಏರಲಿದೆ. ಅರಸೀಕೆರೆಗೆ ಪ್ರಸ್ತುತ 139 ರೂ. ಇದ್ದು ಜ.5 ರಿಂದ ಇದರ ದರ 156 ರೂ. ಆಗಲಿದೆ.
ದಾವಣಗೆರೆ ಪ್ರಸ್ತುತ 101 ರೂ. ಇದ್ದು ಇದಕ್ಕೆ ಜ.5 ರಿಂದ 116 ರೂ. ಆಗಲಿದೆ. ಹೊನ್ನಾಳಿಗೆ ಪ್ರಸ್ತುತ 50 ರೂ ಇದ್ದು ಜ.05 ರಿಂದ ಇದರ ದರ 57 ರೂ. ಏರಿಕೆಯಾಗಲಿದೆ. ಹರಿಹರಕ್ಕೆ ಪ್ರಸ್ತುತ 232 ರೂ. ಇದ್ದು, ಜ.5 ರಿಂದ 266 ರೂ.ಗೆ ಏರಲಿದೆ.
ಶಿಕಾರಿಪುರಕ್ಕೆ ಪ್ರಸ್ತುತ 62 ರೂ. ಇದ್ದು ಇದು ಜ.5 ರಿಂದ 71 ರೂ.ಗೆ ಏರಲಿದೆ. ಸೊರಬಕ್ಕೆ 101 ರೂ. ಇದ್ದು ಇದರ ದರ 116 ಕ್ಕೆ ಏರಲಿದೆ. ಸಾಗರಕ್ಕೆ 72 ರೂ. ಪ್ರಸ್ತುತ ದರ ಇದ್ದರೆ, ಇದರ ದರ ಜ.05 ರಿಂದ 82 ರೂ. ಆಗಲಿದೆ. ತೀರ್ಥಹಳ್ಳಿಗೆ ಪ್ರಸ್ತುತ 65 ರೂ. ದರ ಇದ್ದರೆ, ಇದು ಜ.5 ರಿಂದ 75 ರೂ. ಆಗಲಿದೆ. ಪ್ರಸ್ತುತ ಹೊಸನಗರಕ್ಕೆ 65 ರೂ. ದರವಿದ್ದರೆ ಇದು ಜ.5 ರಿಂದ 75 ರೂ. ಆಗಲಿದೆ.
ಉಡುಪಿಗೆ ಪ್ರಸ್ತುತ 158 ರೂ. ಇದ್ದರೆ ಇದು ಜ.5 ರಿಂದ 182 ರೂ. ಆಗಲಿದೆ. ಗಳೂರಿಗೆ ಪ್ರಸ್ತುತ 250 ರೂ. ಇದ್ದರೆ ಇದರ ದರ ಜ.05 ರಿಂದ 288 ರೂ.ಗೆ ಜಂಪ್ ಆಗಲಿದೆ.
Post a Comment