ಡಾ. ಬಿ.ಆರ್.ಅಂಬೇಡ್ಕರ್ ಅವರು ಜಗತ್ತು ಕಂಡ ಅಪ್ರತಿಮ ಹೋರಾಟಗಾರರು, ಅವರು ಸಂವಿಧಾನ ರಚಿಸದೇ ಇದ್ದಿದ್ದರೆ ಇಂದು ನಾವೆಲ್ಲಾ ದಾಸ್ಯದ ಸಂಕೋಲೆಯಲ್ಲೇ ಇರಬೇಕಿತ್ತು. ಇದನ್ನು ಅರಿತುಕೊಳ್ಳದ ಅಮಿತ್‌ಶಾರವರಂತಹವರು ಈ ದೇಶದ ಕೇಂದ್ರ ಗೃಹ ಸಚಿವರಾಗಿರುವುದು ನಮ್ಮೆಲ್ಲರ ದುರ್ದೈವ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್ ಪ್ರಸನ್ನಕುಮಾರ್ ರವರು ಹೇಳಿದರು
ಒಬ್ಬ ಜನಪ್ರತಿನಿಧಿಯಾಗಿ ಅಂಬೇಡ್ಕರ್‌ರವರಂತಹವರ ಮಹಾನ್ ನಾಯಕರ ಹೋರಾಟದ ಫಲವಾಗಿ ಸೃಷ್ಟಿಯಾಗಿರುವ ಸಂಸತ್ತಿನಲ್ಲೇ ‘ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಎಂದು ಹೇಳುವುದು ಈಗ ಶೋಕಿ ಆಗಿಬಿಟ್ಟಿದೆ. ಇಷ್ಟೊಂದು ಬಾರಿ ದೇವರ ಹೆಸರು ಹೇಳಿದ್ದರೆ ಏಳು ಜನ್ಮಗಳವರೆಗೆ ಸ್ವರ್ಗ ಪ್ರಾಪ್ತಿ ಆಗುತ್ತಿತ್ತು’ ಎಂದು ಅಮಿತ್ ಶಾ ಮತಿಕೆಟ್ಟವರಂತೆ ಮಾತನಾಡಿದ್ದಾರೆ ಇದು ಅಕ್ಷಮ್ಯ.
ದಾಸ್ಯ, ದೌರ್ಜನ್ಯ, ಶೋಷಣೆಯಲ್ಲೇ ಇದ್ದ ಕೋಟ್ಯಂತರ ಭಾರತೀಯರು ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಿಂದಾಗಿ ಇಂದು ಸ್ವಾಭಿಮಾನದಿಂದ ಬದುಕುವಂತಾಗಿದೆ. ಈ ದೇಶದ ಇತಿಹಾಸ, ಬಲಿದಾನ ಮಾಡಿದ ನಾಯಕರ ಬಗ್ಗೆ ಅರಿವಿಲ್ಲದೇ ಇರುವಂತಹ ಅಯೋಗ್ಯ ವ್ಯಕ್ತಿ ಅಮಿತ್ ಶಾ ಒಂದು ಕ್ಷಣವೂ ಕೇಂದ್ರ ಸಚಿವ ಸ್ಥಾನದಲ್ಲಿ ಮುಂದುವರೆಯಬಾರದು. ರಾಷ್ಟ್ರಪತಿಗಳು ಕೂಡಲೇ ಅಮಿತ್ ಶಾ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು HC ಯೋಗೇಶ್ ಅವರು ಆಕ್ರೋಶ ವ್ಯಕ್ತಪಡಿಸಿದರು
ಅಮಿತ್ ಶಾ ಸಚಿವ ಸ್ಥಾನದಲ್ಲಿ ಮುಂದುವರೆದಲ್ಲಿ ಎನ್.ಎಸ್‌ಯು.ಐ.ದೇಶಾದ್ಯಂತ ತೀವ್ರ ಹೋರಾಟ ಮಾಡಲಿದೆ ಎಂದು ಈ ಮೂಲಕ NSUI ಸಂಘಟನೆ ಜಿಲ್ಲಾಧ್ಯಕ್ಷ ಎಚ್ಚರಿಸಿದರು ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಕುಮಾರ್, ಕಲೀಮ್ ಪಾಷ, ರಮೇಶ್ ಹೆಗಡೆ, ವಿಶ್ವನಾಥ್ ಕಾಶಿ, ಚೇತನ್, ಮಧುಸುಧನ್, ಅಕ್ಬರ್, NSUI ತಾಲೂಕು ಅಧ್ಯಕ್ಷ ಹರ್ಷಿತ್, ನಗರಾಧ್ಯಕ್ಷ ಚರಣ್, ಅಬ್ದುಲ್, ಗೌತಮ್, ಮಲಗುಪ್ಪ ಶಿವು,
ಸಕ್ಲೈನ್, ಚಂದ್ರು ಜಿ ರಾವ್, ವರುಣ್ ವಿ ಪಂಡಿತ್, ರಂಗೆನಹಳ್ಳಿ ರವಿ, ಸಾಗರ್, ಜೀವನ್, ಮಂಜು, ಕಾರ್ತಿಕ, ಅಶೋಕ್, ಸುಭಾನ್, ಫಾರೆಜ್, ನೂರಾರು NSUI ಕಾರ್ಯಕರ್ತರು ಪಾಲ್ಗೊಂಡು ಆಕ್ರೋಶ ವ್ಯಕ್ತಪಡಿಸಿದರು
Post a Comment