ಕುಂಸಿ-ಸಿರಿಗೆರೆ ಗ್ರಾಮದ ಅರಣ್ಯ ವಲಯ ಅಧಿಕಾರಿಗಳ ಕಚೇರಿಯ ಮುಂಭಾಗ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಹರತಾಳು ಹಾಲಪ್ಪ ರವರ ನೇತೃತ್ವದಲ್ಲಿ ಗ್ರಾಮಸ್ಥರು ಭರ್ಜರಿ ಪ್ರತಿಭಟನೆ ನಡೆಸಿದ್ದಾರೆ.
ಮಚಲಿಜಡ್ಡು-ಅಡ್ಡೇರಿ ಗ್ರಾಮದ ರೈತರ ವಿರುದ್ದ ಸುಳ್ಳು ಪ್ರಕರಣ ದಾಖಲಾಗಿದ್ದು, ಅದನ್ನ ಹಿಂಪಡಿಯುವಂತೆ, ಹಾಗೂ ಅರಣ್ಯ ಇಲಾಖೆಯವರು ನಿರ್ಮಿಸಿರುವ ಕಾಲುವೆ ನೀರು ಹರಿದು ರಸ್ತೆ ಕೊಚ್ಚಿಹೋಗಿ ಮಚಲಿಜಡ್ಡು ಗ್ರಾಮದ ರೈತ ದೇವೇಂದ್ರಪ್ಪ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು, ಆತನ ಸಾವಿಗೆ ಅರಣ್ಯ ಇಲಾಖೆಯೇ ಕಾರಣವಾದುದರಿಂದ ಇಲಾಖೆ ಪರಿಹಾರ ನೀಡುವಂತೆ ಆಗ್ರಹಿಸಿ ಪ್ರತಿಭಟಿಸಲಾಯಿತು.
ಮಲೆನಾಡ ರೈತರು, ಅರಸಾಳು,ಬೆಳ್ಳೂರು ಗ್ರಾ ಪಂ ವ್ಯಾಪ್ತಿಯ ಹಾಗೂ ಸುತ್ತಮುತ್ತ ಗ್ರಾಮದ ರೈತರು,ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Post a Comment