ಶಿವಮೊಗ್ಗದ ಶಿವಶಕ್ತಿ ಸಮಾಜದ ಅಧ್ಯಕ್ಷೆಗೆ ಅನ್ನಪೂರ್ಣೇಶ್ವರಿ ಪ್ರಶಸ್ತಿ ಪ್ರಧಾನ


ಚನ್ನಗಿರಿಯ ತಾವರೆಕೊಪ್ಪದ ಶಿಲಾಮಠದಲ್ಲಿ ಪ್ರತಿವರ್ಷ ನಡೆಯುವ ಉಮಾಮಹೇಶ್ವರ ಜಾತ್ರಾ ಮಹೋತ್ಸವದಲ್ಲಿ ಅನ್ನಪೂರ್ಣೇಶ್ವರಿ ಪ್ರಶಸ್ತಿ ಹಾಗೂಸಿದ್ದಲಿಂಗ ಶಿವಾಚಾರ್ಯ ಪ್ರಶಸ್ತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮೂರುದಿನಗಳ ಕಾಲ ನಡೆಯುವ ತಾವರೆಕೆರೆಯ ಶಿಲಾಮಠದ ಶ್ರೀ ಉಮಾಮಹೇಶ್ವರ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಶಿವಶಕ್ತಿ ಸಮಾಜದ ಅಧ್ಯಕ್ಷರಾದ ಪಾರ್ವತಮ್ಮ ನವರಿಗೆ ಅನ್ನಪೂರ್ಣೇಶ್ವರಿ ಪ್ರಶಸ್ತಿಯನ್ನು ವಿತರಿಸಿ ಗೌರವಿಸಲಾಯಿತು,
ಅಲ್ಲದೆ ಶಿವಮೊಗ್ಗದಲ್ಲಿ ಹಲವು ಸಮಾಜ ಮುಖಿ ಕಾರ್ಯಗಳನ್ನು ಮಾಡಿರುವುದನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಅಂತೆಯೆ ಪ್ರತಿವರ್ಷವು ನೀಡುವ ಸಿದ್ದಲಿಂಗ ಶಿವಾಚಾರ್ಚ ಪ್ರಶಸ್ತಿಯನ್ನು ಮಾಜಿ ಉಪಮುಖ್ಯಗಳಾದ ಕೆ ಎಸ್‌ ಈಶ್ವರಪ್ಪನವರಿಗೆ ನೀಡಿ ಗೌರವಿಸಲಾಯಿತು. 

ಸಮಾಜದಲ್ಲಿ ಉತ್ತಮವಾದ ಜನ ಸೇವೆಯನ್ನು ನಡೆಸುವ ಸಾಮಾಜ ಸೇವಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು ಈ ಭಾರಿಯ ಪ್ರಶಸ್ತಿ ಪುರಸೃತರಿಗೆ ಶಿಲಾ ಮಠದ ಹಿರಿಯ ಹಾಗೂ ಕಿರಿಯ ಸ್ವಾಮಿಜಿಗಳು ನೀಡಿ ಅಭೀನಂದನೆ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಶ್ರೀ"ಷ"ಬ್ರ" ರೇಣುಕಾ ಶಿವಾಚಾರ್ಯಸ್ವಾಮಿ,
ಶ್ರೀ"ಷ"ಬ್ರ"ಡಾ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು, ಶ್ರೀ"ಷ"ಬ್ರ" ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು,ಶ್ರೀ"ಷ"ಬ್ರ" ಗುರುಮೂರ್ತಿ ಶಿವಾಚಾರ್ಯ ಸ್ವಮಿಗಳು ಹಾಗೂ ಜನನಾಯಕರು ಮತ್ತು ಗ್ರಾಮಸ್ತರು ಉಪಸ್ಥಿತರಿದ್ದರು.

Post a Comment

Previous Post Next Post