ನಿನ್ನೆ ರಾತ್ರಿ ಸರ್ಕಿಟ್ ಹೌಸ್ ಬಳಿ ನಡೆದ ಬಸ್ ಮತ್ತು ಬೈಕ್ ನಡುವಿನ ಡಿಕ್ಕಿಯಲ್ಲಿ ಮೃತರಾದ ಬಗ್ಗೆ ಮಾಹಿತಿ ತಿಳಿದು ಬಂದಿದೆ. ರೋಹಿತ್ (25) ಸಾಫ್ಟ್ ವೇರ್ ಇಂಜಿನಿಯರ್ ಹಾಗೂ ಜೀವನ್(20) ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿ ಅಸುನೀಗಿರುವುದಾಗಿ ತಿಳಿದು ಬಂದಿದೆ.
ಸಾಗರ ರಸ್ತೆಯಲ್ಲಿ ಖಾಸಗಿ ಬಸ್ ಗೆ ಕೆಟಿಎಂ ಬೈಕ್ ಡಿಕ್ಕಿ ಹೊಡೆದಿತ್ತು. ಇಬ್ಬರು ಯುವಕರ ಅಪರಿಚಿತ ಮೃತದೇಹವೆಂದು ಹೇಳಲಾಗಿತ್ತು. ಇಂದು ಯುವಕರಿಬ್ಬರ ಗುರುತು ಪತ್ತೆಯಾಗಿದೆ.
ಅಪಘಾತದಲ್ಲಿ ಸೊರಬ ತಾಲೂಕಿನ ಬೆಣ್ಣೆಗೆರೆಯ ರೋಹಿತ್ (25) ಮತ್ತು ದಾವಣಗೆರೆ ಜಿಲ್ಲೆಯ ಮಲೆಬೆನ್ನೂರಿನ ನಿವಾಸಿ ಜೀವನ್(20) ಎಂದು ಗುರುತಿಸಲಾಗಿದೆ.
ರೋಹಿತ್ ಸಾಫ್ಟ್ ವೇರ್ ಇಂಜಿನಿಯರ್ ಹಾಗೂ ಬೇವಿನಹಳ್ಳಿಯ ಜೀವನ್ ಶಿವಮೊಗ್ಗದ ಜೆಎನ್ ಸಿಸಿ ಕಾಲೇಜಿನ ವಿದ್ಯಾರ್ಥಿಯಾಗಿದ್ದನು. ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Post a Comment