ತಮಿಳ್ ತಾಯಿ ಸಂಘದ ಮೇಲ್ವಿಚಾರಕ ಮತ್ತು ಸಹಾಯಕನಿಂದ ಹಣ ದುರುಪಯೋಗದ ಆರೋಪ


 ಶಿವಮೊಗ್ಗದ ಸೋಮಿನಕೊಪ್ಪ ರಸ್ತೆ ಜೆ.ಹೆಚ್ ಬಡಾವಣೆಯಲ್ಲಿರುವ ಪ್ರತಿಷ್ಠಿತ ತಮಿಳ್ ತಾಯಿ ಸಮುದಾಯ ಭವನದ ಮೇಲ್ವಿಚಾರಕರಾಗಿ ಕೆಲಸ ನಿರ್ವಹಿಸುತ್ತಿದ್ದ ಮತ್ತು ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದವನಿಂದ ಹಣ ದುರುಪಯೋಗದ ಆರೋಪ ಕೇಳಿ ಬಂದಿದೆ.


2024 ರ ಆರಂಭದಿಂದ ಅಕ್ಟೋಬರ್ ವರೆಗೆ ಸಮುದಾಯ ಭವನದ ಬುಕಿಂಗ್ ವಿಚಾರದಲ್ಲಿ ಸಂಘದ ಬ್ಯಾಂಕ್ ಗೆ ಹಣ ಜಮಾವಾಗದೆ ವೈಯುಕ್ತಿ ಖಾತೆಗೆ 7‌ಲಕ್ಷಕ್ಕೂ ಹೆಚ್ಚು ಹಣ ಮೇಲ್ವಿಚಾರಕರ ಮತ್ತು ಸಹಾಯಕನಾಗಿ ಕೆಲಸ ಮಾಡುತ್ತಿರುವ ವಿರುದ್ಧ ತಮಿಳು ಸಮುದಾಯದ ಮುಖಂಡ ಎಂ.ಪಿ ಸಂಪತ್ ವಿನೋಬ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


ಮೇಲ್ವಿಚಾರಕ ಭಾಸ್ಕರ್ ಮತ್ತು ಸಹಾಯಕ ಮೊಹಮ್ಮದ್ ಹೈದ‌ರ್ ಅಲಿ ವಿರುದ್ಧ 7 ಲಕ್ಷಕ್ಕೂ ಅಧಿಕ ಹಣ ದುರುಪಯೋಗವಾಗಿವ ಬಗ್ಗೆ ದೂರಿನಲ್ಲಿ ದಾಖಲಿಸಲಾಗಿದೆ. 12 ಜನರು ಸಮುದಾಯ ಭವನದ ಕಾರ್ಯಕ್ರಮಕ್ಕೆ ನೀಡಿರುವ ಹಣವನ್ನ ದುರಪಯೋಗ ಪಡಿಸಿಕೊಂಡು ವೈಯುಕ್ತಿವಾಗಿ ಬಳಸಿಕೊಂಡಿರುವ ಆರೋಪ ಕೇಳಿ ಬಂದಿದೆ.


ಸುಮಾರು 12 ಜನರ ಬಳಿ ಹಣವನ್ನು ಪಡೆದು ಅವರಿಗೆ ನೀಡದೇ ರಶೀದಿಯನ್ನೂ ಹಣವನ್ನು ದುರುಪಯೋಗ ಮಾಡಿಕೊಂಡಿರುತ್ತಾರೆ ಎಂದು ಸಂಪತ್ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Post a Comment

Previous Post Next Post