ನಮ್ಮದು ಸುವರ್ಣ ಅವಧಿ-ಎಸ್ಪಿ ದಿನೇಶ್

 


ಉನ್ನತ ಶಿಕ್ಷಣ ಮತ್ತು ಪದವೀಧರ ಸ್ವಂತ ಉದ್ಯೋಗಕ್ಕೆ ಆರಂಭಗೊಂಡ ಪದವೀಧರ ಸಂಘ ಹೊಸ ಕಚೇರಿಯನ್ನ‌ ಕೃಷಿನಗರದಲ್ಲಿ ಹೊಂದಲಿದ್ದು, ಡಿವಿಎಸ್ ಕಾಲೇಜಿನ ಸಣ್ಣ ಮೂಲೆಯಲ್ಲಿ ಆರಂಭವಾದ ಸಂಘ ಇಂದು ಸಂಧೃಢವಾಗಿ ಬೆಳೆದಿದೆ. 


ಸಂಘ ಈಗಾಗಲೇ 50 ನೇ ವರ್ಷದ ವಾರ್ಷಿಕೋತ್ಸವವನ್ನ‌ ಮುಗಿಸಿದ್ದು, 2025 ನೇ ಹೊಸವರ್ಷ, ಕ್ರಿಸ್ತಮಸ್, ಕ್ಯಾಲೆಂಡರ್, ಡೈರಿ ಹಾಗೂ ಟೇಬಲ್ ಕ್ಯಾಲೆಂಡರ್ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ಸಂಘದ ಆಡಳಿತ ಮಂಡಳಿಯ ಅವಧಿ ಮುಕ್ತಾಯವಾಗಿದ್ದು, ಜ.19 ರಂದು ಚುನಾವಣೆ ನಡೆಯಲಿದೆ. 


ಎಂ ಶಂಕರ್ ಕ್ಯಾಲೆಂಡರ್ ಬಿಡುಗಡೆ ಮಾಡಿದರೆ, ಎಸ್ಪಿ ಗುರುರಾಜ್ ಅವರಿಂದ ಟೇಬಲ್ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ನಂತ ಮಾತನಾಡಿದ ಸಂಘದ ಅಧ್ಯಕ್ಷ ಎಸ್ಪಿ ದಿನೇಶ್, 2020 ರಿಂದ 2025 ರವರೆಗೆ ಅವಧಿ ಮುಗಿದಿದ್ದು ಜನವರಿಯಲ್ಲಿ ಚುನಾವಣೆಗೆ ಹೋಗುತ್ತಿರುವುದಾಗಿ ತಿಲಿಸಿದರು. 


ಈ ಐದು ವರ್ಷ ಅವಧಿ ನಮ್ಮ ಆಡಳಿತ ಮಂಡಳಿಗೆ ಸುವರ್ಣ ಯುಗವಾಗಿದೆ. ಸುವರ್ಣ ಮಹೋತ್ಸವ ನಮ್ಮ ಅವಧಿಯಲ್ಲಿ ನಡೆದ ಹೆಗ್ಗಳಿಕೆಯಿದೆ. ಹೊಸ ಸೈಟ್ ನ್ನ‌ ಕೃಷಿನಗರದಲ್ಲಿ ಖರೀದಿ ಮಾಡಿ ಕಚೇರಿ ಕಟ್ಟಿಸಲಾಗುತ್ತಿದೆ. 


ಈ ಹೊಸ ಕಚೇರಿಗಳಲ್ಲಿ ಲಾಕರ್ ಫ್ಲಾಜಾವನ್ನ ಆರಂಭಿಸಲಾಗುತ್ತಿದೆ. ಮೊದಲ ಬಾರಿಯ ಹೆಗ್ಗಳಿಕೆಗೆ ಪದವೀಧರ ಸಂಘ ಹೊಂದುತ್ತಿದೆ. ಹಿರಿಯ ಸದಸ್ಯರ ಬೇಡಿಕೆಯಂತೆ ಆರಂಭವಾಗಿದೆ. ಶಾಖಾ ಕಚೇರಿ ಆರಂಭಿಸಲಾಗಿದೆ ಅತಿಥಿಗೃಹಗಳನ್ನ ಆರಂಭಿಸಲಾಗಿದೆ. ಐಎಎಸ್ ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿಗೆ ಬಳಸಿಕೊಳ್ಳುವ ಯೋಜನೆ ಇದೆ ಎಂದರು.


ಕೋವಿಡ್ ಸಂಧರ್ಭದಲ್ಲಿ, ಅತಿವೃಷ್ಠಿಯ ವೇಳೆ ಸಂಘ ಸಾರ್ವಜನಿಕರ ನೆರವಿಗೆ ಧಾವಿಸಿದೆ. ಸಹಾಯ ಮಾಡಲಾಗಿದೆ. ಹಾಡೋನಹಳ್ಳಿಯಲ್ಲಿ 13 ಜನ ಯುವಕರು ಗಣಪತಿ ವಿಸರ್ಜನೆ ಸಂದರ್ಭದಲ್ಲಿ ನದಿಗೆ ಬಿದ್ದಿದ್ದರು. ಅವರನ್ನ ಹೊರಗೆ ತೆಗೆದ ಸಾಹಸಿಗರಿಗೆ ಸನ್ಮಾನಿಸಲಾಗಿತ್ತು. ಸಾರ್ವಜನಿಕರ ಮತ್ತು ಸದಸ್ಯರನ್ನ ಗುರುತಿಸಿ ಸನ್ಮಾನಿಸಿದ್ದು ನಮ್ಮ‌ಅವಧಿಯಲ್ಲಿ ಮಾಡಿದ್ದೇವೆ ಎಂದರು. 


ಪದವೀಧರ ಸಂಘ 245.14 ಕೋಟಿ ವ್ಯವಹಾರ ನಡೆಸಿದೆ. 1.29 ಕೋಟಿ ನೆಟ್ ಪ್ರಾಫಿಟ್ ಮಾಡಿದ್ದೇವೆ. ಕೃಷಿ ನಗರದಲ್ಲಿ ನಿರ್ಮಾಣವಾಗುತ್ತಿರುವ ಶಾಖಾ ಕಚೇರಿ 2.69 ಕೋಟಿ ರೂನಲ್ಲಿ ನಿರ್ಮಿಸಿದ್ದೇವೆ. ಕುವೆಂಪು ನಗರದಲ್ಲೂ ಸ್ವಂತ ಕಟ್ಟಡವಾಗಿದೆ. 1.1 ಕೋಟಿ ಹಣದಲ್ಲಿ ಆರಂಭಿಸಲಾಗಿದ್ದ ಸಂಘ ಗಟ್ಟಿಯಾಗಿ ಬೆಳೆದಿದೆ. ಕೃಷಿ ನಗರ ಹೊಸ ಕಚೇರಿಯಲ್ಲಿ ಐದು ಅಂತಸ್ಥಿನ ಕಟ್ಟಡವಾಗಿದೆ. ನಾಲ್ಕೈದು ತಿಂಗಳಲ್ಲಿ ಅದು ಪೂರ್ಣಗೊಳ್ಳಲಿದೆ ಎಂದರು. 

Post a Comment

Previous Post Next Post